ಕುಮಟಾ : ಸತತ ನಾಲ್ಕು ವರ್ಷಗಳಿಂದ ನೂಕಕ್ಕೆ ನೂರು ಫಲಿತಾಂಶ ನೀಡುತ್ತಿರುವ ಧಾರೇಶ್ವರದ ದಿನಕರ ಆಂಗ್ಲಮಾಧ್ಯಮ ಪ್ರೌಢಶಾಲೆಯು ಈ ವರ್ಷವೂ ನೂರು ಪ್ರತಿಶತ ಪಡೆದು ಅತ್ಯುತ್ತಮ ರೀತಿಯಲ್ಲಿ ಸಾಧನೆ ಮಾಡಿದೆ.ಟ
ಶೇ 95.09 ಅಂಕ ಪಡೆದು ನಿತ್ಯಾ ಎಸ್ ಅವಧಾನಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದರೆ ,ಪವಿತ್ರಾ ಪಿ. ಭಟ್ಟ ದ್ವಿತೀಯ ಹಾಗೂ ಮೇಘನಾ ಸಿ. ನಾಯ್ಕ ತೃತೀಯ ಸ್ಥಾನ ಪಡೆದು ಸಾಧನೆ ತೋರಿದ್ದಾರೆ.
ಇವರ ಈ ಸಾಧನೆಗೆ ಕೆನರಾ ವೆಲ್ ಫೇರ್ ಟ್ರಸ್ಟ್ ನ ಸದಸ್ಯರು, ಪದಾಧಿಕಾರಿಗಳು, ಶಾಲಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಸಂಸ್ಥೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪಾಲಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.ಇವರ ಸಾಧನೆ ಹೀಗೆಯೇ ಮುಂದುವರಿಯಲೆಂದು ಶುಭ ಹಾರೈಸಿದ್ದಾರೆ.