ಮೇಷ:- ಟೀಕೆ ಟಿಪ್ಪಣಿಗಳಿಗೆ ಹೆದರದಿರಿ. ಹಾಗಂತ ಭಂಡತನ ಪ್ರದರ್ಶನ ಬೇಡ. ಅಪರೂಪದ ವಿಷಯವೊಂದು ಸಿದ್ಧಿಸಲಿದೆ. ಈ ದಿನದ ಕಾರ್ಯವನ್ನು ಬಹು ಎಚ್ಚರಿಕೆಯಿಂದ ಮಾಡಿ. ಗೆಲುವಿಗೆ ಹಲವು ದಾರಿಗಳಿವೆ.
ವೃಷಭ:- ಬಂಧುಗಳು, ಹಿತೈಷಿಗಳು ನಿಮ್ಮನ್ನು ಕೊಂಡಾಡುವರು. ಮಗನ ಮದುವೆ ಮಾತುಕತೆಗಾಗಿ ಕೆಲವು ಹೆಣ್ಣಿನ ಜಾತಕಗಳನ್ನು ನೀಡುವರು. ಆದರೆ ಎಲ್ಲವೂ ಕಾಲವೇ ನಿರ್ಧರಿಸುವುದರಿಂದ ನೀವು ಮೂಕ ಪ್ರೇಕ್ಷ ಕನಂತೆ ವರ್ತಿಸಬೇಕಾಗುವುದು.
ಮಿಥುನ:- ವಿನಾಕಾರಣ ವೈರ ಸಾಧಿಸುವ ಛಲ ಬೇಡ. ಬಾಳು ಮೂರು ದಿನದ್ದು ಹಾಗಾಗಿ ಯಾರಲ್ಲಿಯೂ ದ್ವೇಷ ಸಾಧಿಸದೆ ಸ್ನೇಹಹಸ್ತ ಚಾಚುವ ಮೂಲಕ ಔದಾರ್ಯವನ್ನು ಮೆರೆಯಿರಿ. ಇದರಿಂದ ನಿಮಗೆ ಸಮಾಜದಲ್ಲಿ ಹೆಚ್ಚಿನ ಮನ್ನಣೆ ದೊರೆಯುವುದು.
ಕಟಕ:- ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭವಿದೆ. ಸಕಲವನ್ನು ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಅದಕ್ಕೆ ಪೂರಕವಾಗಿ ಬಂಧುಬಾಂಧವರು ಸಹಕರಿಸುವರು. ಹಾಗಾಗಿ ಇಂದು ಅತ್ಯಂತ ಹರ್ಷದಾಯಕವಾದ ದಿನವಾಗಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟಾಗುವುದು.
ಸಿಂಹ:- ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಕಟ್ಟಿಹಾಕಲು ಷಡ್ಯಂತ್ರ ನಡೆಯಲಿದೆ. ಈಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಫಲವಾಗಿ ನಿಮ್ಮನ್ನು ಬ್ಲಾಕ್ ಮೇಲೆ ಮಾಡುವ ಎಲ್ಲಾ ಸಾಧ್ಯತೆ ಇದೆ. ಅದಕ್ಕೆ ಪೂರಕವಾದ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳುವುದು ಕ್ಷೇಮ.
ಕನ್ಯಾ:- ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ. ಆದರೆ ಒರಟುತನದಿಂದ ಪ್ರಶ್ನಿಸುವುದು ಉತ್ತರಿಸುವುದು ಜ್ಞಾನವಂತರ ಲಕ್ಷ ಣವಲ್ಲ. ಆದಷ್ಟು ಸಾವಧಾನದಿಂದ ಗ್ರಾಹಕರೊಂದಿಗೆ ವ್ಯವಹರಿಸಿ. ಇದರಿಂದ ಯಶಸ್ಸಿಗೆ ದಾರಿ ಸುಗಮವಾಗುವುದು.
ತುಲಾ:- ನಿಮ್ಮ ತೀವ್ರ ಮುಂಗೋಪವೇ ಎಲ್ಲಾ ಅನರ್ಥಕ್ಕೆ ಕಾರಣವಾಗುವುದು. ಇದನ್ನೆ ಮುಂದು ಮಾಡಿಕೊಂಡು ನಿಮ್ಮ ಬಾಳಸಂಗಾತಿಯು ಮನೆ ತೊರೆಯುವ ಬೆದರಿಕೆ ಹಾಕುವ ಸಾಧ್ಯತೆ ಇದೆ. ಆದಷ್ಟು ಸಮಾಧಾನದಿಂದ ವ್ಯವಹರಿಸಿ. ಹೆಚ್ಚಿನ ಹಾನಿಯನ್ನು ತಡೆಯಿರಿ.
ವೃಶ್ಚಿಕ:- ಪಾರ್ಟನರ್‌ಶಿಪ್ ವ್ಯವಹಾರಗಳಿಗೆ ಕೈಹಾಕಿದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಸಂಶಯಾತ್ಮ ವಿನಶ್ಯಾಂತಿ ಎನ್ನುವಂತೆ ಸಂಶಯ ನಿಮ್ಮ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಇದರಿಂದ ಆರ್ಥಿಕ ಹೊರೆ ಎದುರಿಸಬೇಕಾಗುವುದು.
ಧನುಸ್ಸು:- ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿರುತ್ತದೆ. ಅಪರೂಪದ ಪ್ರಭಾವಿ ಜನರು ನಿಮ್ಮಿಂದ ಸಹಾಯ ಬಯಸಿದ್ದಾರೆ. ನೀವು ಅವರಿಗೆ ಸಹಾಯ ಮಾಡುವುದರಿಂದ ಮುಂದೆ ಅವರಿಂದ ನಿಮಗೆ ವಿಶೇಷ ಸಹಕಾರ ದೊರೆಯುವುದು.
ಮಕರ:- ಹೊಸದಾದ ಸ್ನೇಹಿತವಲಯವೊಂದನ್ನು ನೀವು ಸಂಪಾದಿಸಲಿದ್ದೀರಿ. ಗೌರವಾನ್ವಿತ ವ್ಯಕ್ತಿಗಳು ನಿಮ್ಮ ಸ್ನೇಹಕ್ಕಾಗಿ ಕೈ ಚಾಚುವರು. ಇದರಿಂದ ನಿಮ್ಮ ಗೌರವ ಘನತೆ ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಕುಂಭ:- ಕಾರ್ಯವಾಸಿ ಕತ್ತೆಕಾಲು ಹಿಡಿ ಎನ್ನುವರು. ಹಾಗಾಗಿ ನಿಮಗೆ ಬೇಡದೆ ಇದ್ದರೂ ನಿಮ್ಮ ಕಾರ್ಯ ಸಾಧನೆಗಾಗಿ ವಿರೋಧಿಯ ಸಹಕಾರ ಪಡೆಯಬೇಕಾಗುವುದು. ಮೇಲಧಿಕಾರಿಗಳ ಸಹಕಾರ ನಿಮಗೆ ದೊರೆಯಲಿದೆ.
ಮೀನ:- ನಿಮ್ಮ ಹಿತೈಷಿಗಳು ಬಂಧುಗಳು ನಿಮ್ಮನ್ನು ಸುತ್ತುವರೆಯುವರು. ನೀವು ಹಮ್ಮಿಕೊಂಡ ಕಾರ್ಯಗಳು ಸರಾಗವಾಗಿ ನಡೆಯುವವು. ಮಗನ ಮಾತು ನಿಮಗೆ ಅಲ್ಪ ಬೇಸರವನ್ನು ಉಂಟು ಮಾಡುವ ಸಾಧ್ಯತೆ ಇರುವುದು.