ಶಿರಸಿ: ಸಂಘದ ಸದಸ್ಯರಿಗೆ ವಿನೂತನ ಸೇವೆ ಸೌಲಭ್ಯವನ್ನು ಒದಗಿಸುತ್ತಾ ಬಂದಿರುವ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ಹೊಸದಾಗಿ ಬೇಕರಿ ತಿಂಡಿ ತಿನಿಸುಗಳ ಮಾರಾಟವನ್ನು ಪ್ರಾರಂಭಿಸಿದೆ.

ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅವರು ಕೇಕ್ ಕತ್ತರಿಸುವ ಮೂಲಕವಾಗಿ ಬೇಕರಿ ತಿಂಡಿ-ತಿನಿಸುಗಳ ಮಾರಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಹೆಗಡೆ, ಸಂಘದ ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ಶಿರಸಿ ಜಿಲ್ಲಾ ಸಮೀತಿ ಹೋರಾಟಕ್ಕೆ ಬೆಂಬಲ ಕೋರಿ ಮಾಜಿ ಪ್ರಧಾನಿಗೆ ಮನವಿ

ಬೇಕರಿ ಕೌಂಟರ್‍ನಲ್ಲಿ ವಿವಿಧ ಬಗೆಯ ಕೇಕ್‍ಗಳು ಮತ್ತು ಬಿಸ್ಕತ್‍ಗಳು ಲಭ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಾಗೂ ಸದಸ್ಯರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಕೈಗಾ ೫ ಹಾಗೂ ೬ನೇ ಘಟಕ ವಿರೋಧಿ ಕಾರ್ಯಾಗಾರ ಸಮಾರಂಭ ಸಭೆಗೆ ಬಂದರೂ ವೇದಿಕೆಯೇರದ ಆನಂದ | ಜಿಲ್ಲೆಯ ಎಲ್ಲಾ ಶಾಸಕರೂ ಬರಲಿ ಎಂದು ಪಟ್ಟು