ಮಣಿಪಾಲ ಆರೋಗ್ಯ ಕಾರ್ಡ್ವಿನ ವಿಶೇಷತೆಗಳು :
ಇತರ ಯೋಜನೆಗಿಂತ ಭಿನ್ನವಾದದ್ದು ಯಾಕೆಂದರೆ ಇದು ಒಂದು ರಿಯಾಯತಿ ಕಾರ್ಡು. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಾಮಾಜಿಕ ಕಳಕಳಿಯ ಒಂದು ಪ್ರತೀಕ. ಕಾರ್ಡು ಸಣ್ಣದು ಸೌಲಭ್ಯ ದೊಡ್ಡದು. ಎಲ್ಲಾ ಕಾಯಿಲೆಗಳು (ಮುಂಚಿನಿಂದ ಇರುವ ಕಾಯಿಲೆಗಳೂ ಕೂಡಾ) ಆರೋಗ್ಯ ಕಾರ್ಡಿನ ವ್ಯಾಪ್ತಿಗೆ ಬರುವುದು. ಕಾರ್ಡುದಾರರಿಗೆ ನೇರ ಸೌಲಭ್ಯ, ಯಾವುದೇ ವಿಮಾ ಕಂಪನಿಯೊಂದಿಗೆ ಒಡಂಬಡಿಕೆ ಇರುವುದಿಲ್ಲ. ಎಲ್ಲಾ ಬಗೆಯ ರೋಗಗಳಿಗೂ ಚಿಕಿತ್ಸೆ ಸೌಲಭ್ಯ.(ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ). ಆಸ್ಪತ್ರೆ ಭೇಟೆ ನೀಡುವಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಎಷ್ಟು ಸಲ ಭೇಟೆ ನೀಡಿದರೂ ರಿಯಾಯಿತಿ ಸೌಲಭ್ಯ. ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಅರ್ಜಿದಾರರ ವಿವರಗಳನ್ನು ತುಂಬುವ ಅಂದರೆ ಆನ್ಲೈನ್ ಮೂಲಕ ಅರ್ಜಿ ತುಂಬುವ ಪ್ರಕ್ರಿಯೆ. ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಸ್ಥಳದಲ್ಲಿಯೇ ಗ್ರಾಹಕರಿಗೆ ನೀಡುವಿಕೆ. 1 ವರ್ಷದ ಕಾಲಾವಧಿಯ ಜೊತೆಗೆ 2 ವರ್ಷದ ಕಾಲಾವಧಿ ಸೌಲಭ್ಯ ಕೂಡಾ ಲಭ್ಯ. ಇಂದೇ ಅರ್ಜಿ ಸಲ್ಲಿಸಿ.
ಸೌಲಭ್ಯಗಳು:
ಸಮಾಲೋಚನೆ : 50 %
ವೃತ್ತಿ ಶುಲ್ಕ: 20 %
ಪ್ರಯೋಗಾಲಯ ಶುಲ್ಕ : 30 %
ಹೊರರೋಗಿ ವಿಭಾಗದ ವಿಧಾನಗಳು ಮತ್ತು ಮಧುಮೇಹ ಪಾದ ತಪಾಸಣಾ : 25%
ಸಿಟಿ / ಎಮ್.ಆರ್. ಐ/ ಎಕ್ಸ್ ರೇ / ಅಲ್ಟ್ರಾಸೌಂಡ್ ವಿಧಾನ – ವೈದ್ಯರ ವೆಚ್ಚವು ಸೇರಿದಂತೆ -20%
ಡಯಾಲಿಸಿಸ್ – 100 ರೂ.
ಒಳರೋಗಿ ಸೌಲಭ್ಯಗಳು- ಉಪಯೋಗವಾಗುವ ವಸ್ತುಗಳನ್ನು ( ಕನ್ಸ್ಯೂಮೆಬಲ್ಸ್) ಹೊರತುಪಡಿಸಿ- 25%
ಹೆರಿಗೆ ಸೌಲಭ್ಯಗಳು – ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ – ಒಳರೋಗಿ ವಿಭಾಗದಂತೆ ,
ವಾರ್ಡ್ ದರ್ಜೆ – ಸಾಮಾನ್ಯ
ಔಷಧಾಲಯ ಶುಲ್ಕ – 12 % ರವರೆಗೆ
ಮಣಿಪಾಲ ಆರೋಗ್ಯ ಕಾರ್ಡುಗಳ ಕೇಂದ್ರಗಳು :
• ಕಸ್ತೂರ್ಬಾ ಆಸ್ಪತ್ರೆ , ಮಣಿಪಾಲ
• ಡಾ | ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ
• ಡಾ | ಟಿ.ಎಂ.ಎ. ಪೈ ಆಸ್ಪತ್ರೆ ,ಕಾರ್ಕಳ
• ಕೆ.ಎಂ.ಸಿ. ಆಸ್ಪತ್ರೆ ಅಂಬೇಡ್ಕರ್ ವೃತ್ತ ,ಮಂಗಳೂರು
• ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ,ಮಂಗಳೂರು
• ಮಣಿಪಾಲ ಹಾಸ್ಪಿಟಲ್ಸ್, ಗೋವಾ
ಕಾರ್ಡಿನ ಬಗ್ಗೆ:
ವೈಯಕ್ತಿಕ ಕಾರ್ಡು –: ಒಬ್ಬರಿಗೆ ಮಾಡಿಸುವ ಕಾರ್ಡು
ಕೌಟುಂಬಿಕ ಯೋಜನೆ ಅಂದರೆ : ಪ್ರಾಥಮಿಕ ಕಾರ್ಡುದಾರರು , ಅವರ ಸಂಗಾತಿ , 25 ವರ್ಷದ ಒಳಗಿನ ಮದುವೆಯಾಗದ ಮಕ್ಕಳು
ಕೌಟುಂಬಿಕ ಯೋಜನೆಯಲ್ಲಿ 25 ವರ್ಷದ ನಂತರದ ಮಕ್ಕಳು ಅಥವಾ 25 ವರ್ಷದ ಒಳಗೆ ಮದುವೆಯಾದವರನ್ನು ಸೇರಿಸಬಾರದು. ಅವರಿಗೆ ಪ್ರತ್ಯೇಕವಾಗಿ ಕಾರ್ಡು ಮಾಡಿಸಬೇಕು. ಒಂದು ವೇಳೆ ಹಿಂದಿನ ವರ್ಷ ಮಾಡಿಸಿದ ಕಾರ್ಡಿನಲ್ಲಿ ಯಾರಾದರೂ 25 ವರ್ಷ ಮೀರಿದವರಿದ್ದರೆ ,ಅಥವಾ 25 ವರ್ಷದ ಒಳಗೆ ಮದುವೆಯಾದವರಿದ್ದರೆ ಅವರನ್ನು ಕೌಟುಂಬಿಕ ಯೋಜನೆಯಿಂದ ಬೇರ್ಪಡಿಸಿ ಪ್ರತ್ಯೇಕ ಕಾರ್ಡು ಮಾಡಿಸಬೇಕು. ಅದಕ್ಕೆ ವೈಯಕ್ತಿಕ ಹೊಸ ದರ ಅನ್ವಯಿತವಾಗುತ್ತದೆ. ಪ್ರಾಥಮಿಕ ಕಾರ್ಡುದಾರರು ಹೆಂಡತಿ ಆದರೆ ಸಂಗಾತಿ ಗಂಡ ಆಗಿರುತ್ತಾರೆ. ಕೌಟುಂಬಿಕ + ಯೋಜನೆ ಅಂದರೆ ಪ್ರಾಥಮಿಕ ಕಾರ್ಡುದಾರರು , ಅವರ ಸಂಗಾತಿ , 25 ವರ್ಷದ ಒಳಗಿನ ಮದುವೆಯಾಗದ ಮಕ್ಕಳು , ಪ್ರಾಥಮಿಕ ಕಾರ್ಡುದಾರರ ತಂದೆ ಮತ್ತು ತಾಯಿ ಹಾಗೂ ಅತ್ತೆ ಮತ್ತು ಮಾವ.
ಕಾರ್ಡಿನ ಮೊತ್ತ ಮತ್ತು ವಿವರಗಳು:
1 ವರ್ಷದ ಯೋಜನೆ:
ವೈಯಕ್ತಿಕ ಹೊಸದು – 250.00 ರೂ. ,
ವೈಯಕ್ತಿಕ ನವೀಕರಣ – 220.00 ರೂ. ,
ಕೌಟುಂಬಿಕ ಹೊಸದು – 500.00 ರೂ ,
ಕೌಟುಂಬಿಕ ನವೀಕರಣ – 460.00 ರೂ. ,
ಕೌಟುಂಬಿಕ + ಹೊಸದು – 650.00 ರೂ
ಕೌಟುಂಬಿಕ + ನವೀಕರಣ -600.00 ರೂ
2 ವರ್ಷದ ಯೋಜನೆ :
ವೈಯಕ್ತಿಕ ಹೊಸದು -400.00 ರೂ
ಕೌಟುಂಬಿಕ ಹೊಸದು – 700.00 ರೂ
ಕೌಟುಂಬಿಕ + – 850.00 ರೂ
ಕಾರ್ಡುಗಳನ್ನು ಮಾಡುವ ಕಾಲಾವಧಿ ಮತ್ತು ಯೋಜನೆ ಆರಂಭವಾಗುವ ಸಮಯ:
ಮೇ 1 ರಿಂದ ಮೇ 31 ರ ವರೆಗೆ ಕಾರ್ಡು ಮಾಡಿದರೆ ಜೂನ್ 15 ರಿಂದ ಯೋಜನೆ ಆರಂಭ
ಜೂನ್ 1 ರಿಂದ ಜೂನ್ 30 ರವರೆಗೆ ಕಾರ್ಡು ಮಾಡಿದರೆ ಜುಲಾಯಿ 15 ರಿಂದ ಯೋಜನೆ ಆರಂಭ
ಜುಲಾಯಿ 1 ರಿಂದ ಜುಲಾಯಿ 31 ರವರೆಗೆ ಕಾರ್ಡು ಮಾಡಿದರೆ ಆಗಸ್ಟ್ 15 ರಿಂದ ಯೋಜನೆ ಆರಂಭ
ಆಗಸ್ಟ್ 1 ರಿಂದ ಆಗಸ್ಟ್ 31 ರವರೆಗೆ ಕಾರ್ಡು ಮಾಡಿದರೆ ಸೆಪ್ಟಂಬರ್ 15 ರಿಂದ ಯೋಜನೆ ಆರಂಭ
ಸೆಪ್ಟಂಬರ್ 1 ರಿಂದ ಸೆಪ್ಟಂಬರ್ 30 ರವರೆಗೆ ಕಾರ್ಡು ಮಾಡಿದರೆ ಅಕ್ಟೋಬರ್ 15 ರಿಂದ ಯೋಜನೆ ಆರಂಭ.
ಅಕ್ಟೋಬರ್ 1 ರಿಂದ ಅಕ್ಟೋಬರ್ 31 ರವರೆಗೆ ಕಾರ್ಡು ಮಾಡಿದರೆ ನವಂಬರ್ 15 ರಿಂದ ಯೋಜನೆ ಆರಂಭ.
ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿರಿ
ರಕ್ಷಿತ್ ಕುಮಾರ
ಮೊ. 9743366746..