ಮೇಷ:- ಜಯವಿರುವವರೆಗೆ ಭಯವಿಲ್ಲ ಎನ್ನುವಂತೆ ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವವು. ನಿಮ್ಮ ಹೆಸರನ್ನು ಹೇಳಿ ಬೇರೆಯವರು ಅವರ ಕೆಲಸವನ್ನು ಸಾಧಿಸಿಕೊಳ್ಳುವರು. ಅಂತಹವರ ಬಗ್ಗೆ ಎಚ್ಚರದಿಂದ ಇರಿ.


ವೃಷಭ:- ಜೀವನದಲ್ಲಿ ಹಲವಾರು ಪರೀಕ್ಷೆಗಳನ್ನು ಎದುರಿಸಿ ಜಯಶೀಲರಾಗಿರುವಿರಿ. ಆದರೆ ಮನೋವ್ಯಾಕುಲದಿಂದ ಹೊರಬರಲು ಆಗುತ್ತಿಲ್ಲ. ಆದಷ್ಟು ಶಿವಸ್ತುತಿ ಪಠಿಸಿ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಆರೋಗ್ಯದ ಕಡೆ ಗಮನ ಕೊಡಿ.


ಮಿಥುನ:- ಮನಸ್ಸು ಕೊಳೆಯಾಗದಂತೆ ಎಚ್ಚರಿಕೆ ವಹಿಸಿ. ತಿಳಿಯಾದ ಮನಸ್ಸು ಶುಭವನ್ನು ಚಿಂತಿಸಿದರೆ ಕೊಳೆಯಾದ ಮನಸ್ಸು ಅಶುಭವನ್ನು ಚಿಂತಿಸುತ್ತದೆ. ಹಾಗಾಗಿ ಧನಾತ್ಮಕ ಚಿಂತನೆಯಿಂದ ಮನಸ್ಸನ್ನು ಪ್ರಸನ್ನಗೊಳಿಸಿ.

ಕಟಕ:- ಸುಖಸ್ಥಾನದ ಶುಭಗ್ರಹ ಸಂಚಾರದಿಂದಾಗಿ ಮನೆ, ಮಡದಿ, ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು. ಇದರ ಜೊತೆ ವಾಹನ ಸುಖವೂ ದೊರೆತು ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

RELATED ARTICLES  ಕರಾವಳಿಯಲ್ಲಿ ರಾಹುಲ್ ಕಮಾಲ್.!

ಸಿಂಹ:- ಬೇಸಿಗೆಯ ಬಿಸಿಲನ್ನು ನೀವು ತಡೆದುಕೊಳ್ಳಲಾರಿರಿ. ಆದಷ್ಟು ಹೊರಗೆ ಸುತ್ತಾಡುವುದನ್ನು ಕಡಿಮೆ ಮಾಡಿ. ತಂಪಾದ ಪಾನೀಯಗಳ ಸೇವನೆಯಿಂದ ದೇಹಕ್ಕೂ ಮತ್ತು ಮನಸ್ಸಿಗೂ ಹಿತವಾಗುವುದು.

ಕನ್ಯಾ:- ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ದಿಢೀರನೆ ಯಶಸ್ಸಿನತ್ತ ದಾಪುಗಾಲು ಹಾಕುವುದು. ಇದರಿಂದ ಫೀನಿಕ್ಸ್‌ ಪಕ್ಷಿಯಂತೆ ಜೀವನದಲ್ಲಿ ಜಡತ್ವ ತೊಲಗಿ ಚುರುಕಾಗುವಿರಿ. ಹಣಕಾಸು ಕೂಡಾ ಬರುವುದು.

ತುಲಾ:- ಜೀವನದ ಪಥ ಸರಾಗವಾಗಿ ನಡೆಯುತ್ತಿದೆ. ನಿಮಗೆ ಸಂತಸ ತರುವುದು. ಇದರ ಹಿಂದೆ ಗುರು-ಹಿರಿಯರ ಆಶೀರ್ವಾದ ಹಾಗೂ ಮಾತಾಪಿತರ ತ್ಯಾಗವಿದೆ ಎಂಬುದನ್ನು ಮರೆಯದಿರಿ. ಯಾವುದನ್ನು ದಿಢೀರನೆ ತೀರ್ಮಾನ ಮಾಡುವುದು ಸೂಕ್ತವಲ್ಲ.

ವೃಶ್ಚಿಕ:- ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂಡು ಕಲ್ಲು ಎಸೆಯುವರು. ಅಂತೆಯೇ ಸದ್ಯಕ್ಕೆ ನಿಮ್ಮ ಗ್ರಹಸ್ಥಿತಿಗಳು ಉತ್ತಮವಾಗಿಲ್ಲದಿರುವಾಗ ಅನವಶ್ಯಕ ವಾದ ವಿವಾದಗಳಲ್ಲಿ ಭಾಗವಹಿಸದಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರದಿಂದಿರಿ.

RELATED ARTICLES  ಎಲ್ಲರನ್ನೂ ಕರೆಯುವುದು, ಎಲ್ಲರ ಜೊತೆ ಸಾಗುವುದು ಹವ್ಯಕತ್ವ - ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

ಧನುಸ್ಸು:- ನಿಮ್ಮ ಮಾತಿನ ಜಾಣ್ಮೆ ಮೆಚ್ಚುವಂತಹುದು. ಆದರೆ ಅಯೋಗ್ಯರ ಎದುರು ಆ ಜಾಣ್ಮೆ ಉಪಯೋಗಕ್ಕೆ ಬರುವುದಿಲ್ಲ. ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡಿ.

ಮಕರ:- ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕೆನ್ನುವರು. ಅಂತೆಯೇ ಬೆಳೆದ ಮಕ್ಕಳು ಮಾಡುವ ದುಷ್ಟತನಕ್ಕೆ ಶಿಕ್ಷಿಸುವಂತಿಲ್ಲ. ಇಲ್ಲವೆ ಅದನ್ನು ಸ್ವೀಕರಿಸುವಂತಿಲ್ಲ ಎಂಬ ಇಬ್ಬದಿಯ ಸಂಕಟ ನಿಮ್ಮದಾಗುವುದು. ಕುಲದೇವರನ್ನು ಮನಸಾ ಸ್ಮರಿಸಿ.

ಕುಂಭ:- ಬರಹಗಾರರಿಗೆ, ಪತ್ರಿಕೋದ್ಯಮಿಗಳಿಗೆ, ಪ್ರಾಧ್ಯಾಪಕರುಗಳಿಗೆ ಮನ್ನಣೆ ದೊರೆಯುವ ಸಾಧ್ಯತೆ ಹೇರಳವಾಗಿರುವುದು. ನಿಮ್ಮ ಮನೋಕಾಮನೆಗಳು ಬಹುತೇಕ ಈಡೇರುವವು. ಸಮಾಜದಲ್ಲಿ ಗೌರವ ಆದರಗಳು ದೊರೆಯುವವು.

ಮೀನ:- ನಿಮ್ಮನ್ನು ಚಿಂತೆ ಕಾಡುವುದು. ಚಿಂತೆಯಿಂದ ಮುಕ್ತರಾಗಲು ಸ್ನೇಹಿತರ ಭೇಟಿ ಮಾಡಿ. ಇಲ್ಲವೆ ಧಾರ್ಮಿಕ ಮಂದಿರಗಳಲ್ಲಿ ಪ್ರಾರ್ಥನೆ ಮಾಡಿ. ಕ್ರಿಯಾಶೀಲತೆಯನ್ನು ರೂಢಿಸಿಕೊಂಡಲ್ಲಿ ಉತ್ತಮ ಸಮಯ ನಿಮ್ಮದಾಗುವುದು.