ಕುಮಟಾ ಮಂಡಲಾಂತರ್ಗತ ಹೆಗಡೆ ವಲಯದಲ್ಲಿ ವಲಯೋತ್ಸವ, ಹಾಲುಹಬ್ಬ , ಹಾಗೂ ಆಹಾರೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹವ್ಯಕ ಮಹಾ ಸಭಾ ಬೆಂಗಳೂರು ಇದರ ನಿರ್ದೇಶಕರೂ ಹವ್ಯಕ ಮಹಾಮಂಡಲದ ಉಪಾಧ್ಯಕ್ಷರೂ ಆದ ಶ್ರೀ ಸುಬ್ರಾಯ ಭಟ್ಟರವರು ರಾಘವೇಶ್ವರ ಶ್ರೀಗಳವರ ಸಮಾಜ ಮುಖಿ ಕಾರ್ಯಗಳಲ್ಲಿ ನಾವೆಲ್ಲ ಕೈಜೋಡಿಸೋಣ ಅಭಯಾಕ್ಷರ, ಗೋಸಂಜೀವಿನಿಯಂತಹ ಯೋಜನೆಗಳ ಯಶಸ್ಸಿಗೆ ಶ್ರಮಿಸೋಣ ಎಂದರು. ಆಯುರ್ವೇದ ವೈದ್ಯ ಶ್ರೀ ಸತೀಶ ಭಟ್ಟ ನಮ್ಮ ಆಹಾರ ನಮ್ಮ ಆರೋಗ್ಯ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಾವಯವ ಕೃಷಿಯ ಕುರಿತು ಸುಬ್ರಹ್ಮಣ್ಯ ಹೆಗಡೆ, ಮಹಿಳೆಯರ ಕರ್ತವ್ಯ ಕುರಿತು ಲಲಿತಾ ಹೆಬ್ಬಾರ ಮಾತನಾಡಿದರು.

RELATED ARTICLES  ಕಾರವಾರದಲ್ಲಿ ಸಂಪನ್ನಗೊಂಡ ಎನ್.ಎಸ್.ಎಸ್ ವಿಶೇಷ ಶಿಬಿರ

ಕುಮಟಾ ಮಂಡಲಾಧ್ಯಕ್ಷ ಮಂಜುನಾಥ ಭಟ್ಟ ಸುವರ್ಣಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅಮೇರಿಕಾ ವಾಸಿ ಹೆಗಡೆಯ ಕೆ.ಜಿ.ಉಪಾಧ್ಯಾಯ ಹೊರದೇಶದಲ್ಲಿ ಹವ್ಯಕರ ಬದುಕು ವಿಷಯದ ಕುರಿತು ಮಾತನಾಡಿದರು. ಸುಲೋಚನಾ ಉಪಾಧ್ಯಾಯ ಅವರು ಸಂಪಾದಿಸಿದ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಡಾ. ಕೆ ಗಣಪತಿ ಭಟ್ಟ, ಹೆಗಡೆ ವಲಯಾಧ್ಯಕ್ಷ ಸಿ,ಜಿ.ನಾರಾಯಣಮೂರ್ತಿ ಉಪಸ್ಥಿತರಿದ್ದರು. ಡಾ. ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ರಾಜೀವ ಭಟ್ ವೇದಘೋಷಗೈದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಹರಿಶಂಕರ ಹೆಗಡೆ ವಂದಿಸಿದರು.ನಂತರ ನಡೆದ ಆಹಾರೋತ್ಸವದಲ್ಲಿ ಮಾತೃ ಪ್ರಧಾನ ಗೋದಾವರಿ ಹೆಗಡೆ ಹಾಗೂ ಮಾತೃವಿಭಾಗದ ನೂರಾರು ಮಹಿಳೆಯರು ಪಾಲ್ಗೊಂಡರು.

RELATED ARTICLES  ಹೊನ್ನಾವರ ಮಂಡಲದ ವಿವಿಧೆಡೆ ಕಾರ್ಯಕರ್ತರ ಸಭೆ ನಡೆಸಿದ ದಿನಕರ ಶೆಟ್ಟಿ