ಕುಮಟಾ : ತಾಲೂಕಿನ ಹೆಗಡೆಯ ಶ್ರೀ ಮಾತಾ ಕ್ಲಿನಿಕ್ ನಲ್ಲಿ ಉಚಿತ ಅಸ್ತಮಾ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು..
ಡಾ ಪ್ರಕಾಶ ಭಟ್ಟ ಹಾಗೂ ಡಾ ಅರ್ಚನಾ ಭಟ್ಟ ನೇತೃತ್ವದಲ್ಲಿ ಹೆಗಡೆ ಗ್ರಾಮದ 100 ಕ್ಕೂ ಹೆಚ್ಚು ಜನರು ಈ ಶಿಭಿರದ ಪ್ರಯೋಜನ ಪಡೆದುಕೊಂಡರು… ಸಿಪ್ಲಾ ಕಂಪನಿಯ ಮಂಜುನಾಥ ರವರು ‘ಬ್ರೀತ್ ಓ’ ಮೀಟರ್ ಮೂಲಕ ವ್ಯಕ್ತಿಯ ಶ್ವಾಸಕೋಶ ಯಾವ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ.. ಎಲರ್ಜಿ ಸಮಸ್ಯೆ ಇದೆಯಾ ಅಥವಾ ಕಫದ ಸಮಸ್ಯೆ ಇಂದ ಉಸಿರಾಟದ ತೊಂದರೆ ಆಗ್ತಾ ಇದೆಯಾ ಎಂದು ಧೃಡಪಡಿಸಿ ಕೊಟ್ಟ ನಂತರ ಡಾ. ಅರ್ಚನಾ ರವರು ಅದಕ್ಕೆ ಸಂಬಂಧಪಟ್ಟ ಮೆಡಿಸಿನ್ ಉಚಿತ ವಾಗಿ ಬರೆದು ಕೊಡುವ ವ್ಯವಸ್ಥೆ ಮಾಡಿದರು.. ಈ ಒಂದು ತಪಾಸಣಾ ಶಿಬಿರ ಸಂಪೂರ್ಣ ಉಚಿತವಾಗಿದ್ದುದರಿಂದ ಹೆಗಡೆ ಗ್ರಾಮದ ಜನ ಅದರ ಲಾಭ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು….
ನಂತರ ಮಾತನಾಡಿದ ಡಾ ಅರ್ಚನಾ ನಾವು ಹೆಗಡೆ ಗ್ರಾಮದ ಜನತೆಗೆ ಕ್ಲಿನಿಕ್ ಮೂಲಕ ಪ್ರತಿದಿನ ಸೇವೆ ಒದಗಿಸುತ್ತಿದ್ದು ಆಗಾಗ ಊರಿನ ಜನರಿಗೆ ಇನ್ನಷ್ಟು ನೆರವಾಗಲು ಇಂತಹ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ ಈ ಹಿಂದೆ ರಕ್ತಹೀನತೆ ಶಿಭಿರ ನಡೆಸಿದ್ದು ಇಂದು ಈ ಶ್ವಾಸಕೋಶದ ಬಗ್ಗೆ ತಪಾಸಣೆ ಮಾಡಲಾಗಿದೆ.. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಥೈರಾಯ್ಡ್ ಬಗ್ಗೆ ಉಚಿತ ತಪಾಸಣ ಶಿಭಿರ ಹಾಗೂ ಕಿವಿ ಮೂಗು ಗಂಟಲು ತಜ್ಞರಾದ ಡಾ ಪ್ರಕಾಶ ಭಟ್ಟ ರವರಿಂದ ಉಚಿತ ಕಿವಿಯ ಶ್ರವಣ ತಪಾಸಣೆ ಶಿಬಿರ ನಡೆಸಲಾಗುವುದು ಇಂತಹ ಚಿಕಿತ್ಸೆ ಗಳನ್ನು ನಮ್ಮ ಗ್ರಾಮೀಣ ಭಾಗದ ಜನ ಮಾಡಿಸಿರುವುದಿಲ್ಲ ಮಾಡಿಸುವದಿದ್ದರೂ 500 ಕ್ಕೂ ಹೆಚ್ಚು ಹಣ ವ್ಯಯ
ಮಾಡಬೇಕಾಗುತ್ತದೆ ಎಂದರು…