ಕುಮಟಾ :ತಾಲೂಕಿನ ಕಾಗಾಲ ಗ್ರಾಮದಲ್ಲಿ ಅನಾದಿಯಿಂದ ಪೂಜಿಸಿಕೊಂಡು ಬಂದಿರುವ ನಾಗಪ್ರತಿಮೆಯು ಕೆಲವು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಭಿನ್ನಗೊಂಡಿತ್ತು. ಇದರ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಅನೇಕ ತೊಂದರೆಗಳುಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು.ಬಹುತೇಕ ಅಜ್ಞಾತವಾಗಿರುವ ಈ ನಾಗವನ್ನು ಆರಾಧಿಸಿಕೊಂಡು ಬಂದಿರುವ ಕಾಗಾಲದ ದಿ ,ವೆಂಕಟರಮಣ ಆಚಾರ್ಯ ಕುಟುಂಬದವರು ಈ ಕುರಿತು ಪ್ರಾಜ್ಞರಲ್ಲಿ ವಿಚಾರಿಸಲಾಗಿ ಸ್ಥಳೀಯವಾಗಿ ಪೂಜಿಸಿಕೊಂಡು ಬಂದಿರುವ ನಾಗಪ್ರತಿಮೆಯ ಬಿಂಬವು ಸಂಪೂರ್ಣ ಮಾಸಿರುವುದರಿಂದ ಇದರ ಪುನರ್ ಪ್ರತಿಷ್ಠಾಪನೆಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ಅಲ್ಲದೇ ಇದೇ ಪರಿಸರದವರಾಗಿ ದೂರದ ಕೋಲಾರದ ಕೆಜಿಎಫ್ ನಲ್ಲಿ ವಾಸಿಸುತ್ತಿರುವ ಆನಂದ ದೇಶ ಭಂಡಾರಿ ಎನ್ನುವವರಿಗೆ ಪದೇ ಪದೇ ಈ ನಾಗವು ಸ್ಮೃತಿ ಪಟಲದಲ್ಲಿ ಹಾದುಹೋಗಲು ಆರಂಭಿಸಿದಾಗ ಈ ಕುರಿತು ಕಾಗಾಲದ ವಿಜಯ ಆಚಾರ್ಯ ರಲ್ಲಿ ವಿಚಾರ ವಿನಿಮಯ ಮಾಡಿದರು. ಈಗಾಗಲೇ ಈದಿಸೆಯಲ್ಲಿ ಪ್ರಯತ್ನ ಆರಂಭಿಸಿರುವ ವಿಜಯ ಆಚಾರ್ಯರು ನಾಗಾರಧನೆಯ ಕ್ಷೇತ್ರವಾದ ದಕ್ಷಿಣ ಕನ್ನಡದ ಹೆಸರಾಂತ ವೇದಮೂರ್ತಿ ಜಯಂತ ಪುರೋಹಿತ ರನ್ನು ಕಂಡು ಅವರ ಮಾರ್ಗ ದರ್ಶನವನ್ನು ಪಡೆದರು.
ಸ್ಥಳದ ಮಾಲಿಕರಾದ ದಿ.ಶಿವಯ್ಯ ನಾಯಕ ಕಾಗಾಲ ಜೈನ್ ಕುಟುಂಬದವರನ್ನು ಈ ನಿಟ್ಟಿನಲ್ಲಿ ಸಂಪರ್ಕಿಸಿದಾಗ ನಾಗಬನ ನಿರ್ಮಾಣಕ್ಕೆ ಸಂಪೂರ್ಣವಾಗಿ ಸಹಕಾರನೀಡುವ ಭರವಸೆಯೊಂದಿಗೆ ಅನುಮತಿಯನ್ನು ನೀಡಿದರು. ವೇದಮೂರ್ತಿ ಜಯಂತ ಪುರೋಹಿತರ ಅಧ್ವರ್ಯದಲ್ಲಿ ನಾಗಬನ ಹಾಗೂ ನಾಗಪ್ರತಿಮೆಯ ಪ್ರತಿಷ್ಠಾಪನೆಯ ಕಾರ್ಯ ಪ್ರಾರಂಭಿಸಿ ಶುಭ ಮಹೂರ್ತದಲ್ಲಿ ಸರ್ಪಸಂಸ್ಕಾರ ಕಾರ್ಯ, ಮಹಾಗಣಪತಿ ಮೃತ್ಯಂಜಯ , ಭೂವರಾಹ,ಸುದರ್ಶನ ವನದುರ್ಗಿ ಹವನಗಳನ್ನು ನೆರವೇರಿಸಿ ಉಡುಪಿಯ ಶಿಲ್ಪಕಲಾ ಶಾಲೆಯಲ್ಲಿ ಸಿದ್ಧಗೊಂಡ ಸುಂದರ ಕಾಮಧೇನು ನಾಗಪ್ರತಿಮೆಯನ್ನು ಜಲಮೂಲದಲ್ಲಿ ಇರಿಸಲಾಯಿತು.ಇದೇ ಬರುವ ಗುರುಮಾರ ಮೇ ೯ ರಂದು ಈ ನಾಗ ಪ್ರತಿಮೆಯ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದ್ದು ವೇದಮೂರ್ತಿ ಜಯಂತ ಪುರೋಹಿರತ ಮುಂದಾಳತ್ವದಲ್ಲಿ ಉಡುಪಿ ಹಾಗೂ ದಕ್ಷಿಣಕನ್ನಡದ ಹಲವಾರು ವೈದಿಕರು ಆಗಮಿಸಲಿದ್ದಾರೆ.
ಭಕ್ತರ ಮನದ ಅಭಿಷ್ಠವನ್ನು ಇಡೇರಿಸುವ ಅಪರೂಪದ ಐದು ಹೆಡೆಯ ಕಾಮಧೇನು ನಾಗರಾಜ ನ ಆರಾಧನಾ ಕ್ಷೇತ್ರವಾಗಿ ಕಾಗಾಲ ಪಂಚಾಯತ ಕಾರ್ಯಾಲಯದ ಬಳಿ ಸ್ಥಾಪನೆಗೊಳ್ಳಲಿರುವ ಈ ನಾಗಬನದ ಪ್ರತಿಪ್ಠಾಪನೆಯ ಸಮಯದಲ್ಲಿ ವಿಶೇಷವಾಗಿ “ಸಾಮೂಹಿಕ ಆಶ್ಲೇಷಾ ಬಲಿ ” ಪೂಜಾಕಾರ್ಯ ನೆರವೇರಿಸಲು ತೀರ್ಮಾನಿಸಲಾಗಿದ್ದು ಭಕ್ತಾಧಿಗಳು ಇದರಲ್ಲಿ ಮುಕ್ತವಾಗಿ ಭಾಗವಹಿಸಲು ಅನವುಮಾಡಿಕೊಡಲಾಗಿದೆ.ಈ ಸೇವೆಯಲ್ಲಿ ಪಾಲ್ಗೊಳ್ಳುವವರು ಮೂರುದಿನ ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಮತ್ತು ಈ ಕುರಿತಾದ ನಿಬಂಧನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ
ಮೇ ೯ ರಂದು ಗುರುವಾರ ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮವು ನೆಡೆಯಲಿದ್ದು ಸಾಯಂಕಾಲ ತಾಳಮದ್ದಳೆ ಕಾರ್ಯಕ್ರಮಗಳುಜರುಗಲಿದೆ.
ಬರುವ ದಿನಗಳಲ್ಲಿ ಕಾಗಾಲದ ಈ ನಾಗಬನವು ಆಸ್ತಿಕರ ಪಾಲಗೆ ಮಹತ್ವದ ಶೃದ್ಧಾಕೇಂದ್ರವಾಗಿ ಪ್ರಸಿದ್ಧಿಪಡೆಯಲಿದೆ.
ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ
ವಿಜಯ ಆಚಾರ್ಯ ಕಾಗಾಲ 9480160049
ಚಿದಾನಂದ ಭಂಡಾರಿ ಕಾಗಾಲ8970612257
ಇವರನ್ನು ಸಂಪರ್ಕಿಸಬಹುದಾಗಿದೆ.