ಕುಮಟಾ: ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸರ್ಕಾರದ ಅಲುಗಾಟ ಆರಂಭವಾಗುವುದು ಅದರಲ್ಲಿ ಅಚ್ಚರಿಯೇನಿಲ್ಲ ಹಾಗಾಗಿ ಬಿಜೆಪಿ ಕಾರ್ಯಕರ್ತರೇ ವಿರಮಿಸದಿರಿ ಶೀಘ್ರವೇ ವಿಧಾನಭೆಗೆ ಚುನಾವಣೆ ಇದೆ ಸಿದ್ಧರಾಗಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.
ಕುಮಟಾದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ‘ಮತ್ತೊಮ್ಮೆ ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಕಾರ್ಯಕರ್ತರು ವಿಶ್ರಾಂತಿ ಮರೆತು ಕೆಲಸ ಮಾಡಬೇಕು. ವಿಶ್ರಾಂತಿಯು ರೋಗದ ಸಂಕೇತ ಮತ್ತು ಇದು ಮಾನಸಿಕ ಪ್ರಾಬಲ್ಯವನ್ನು ಕುಗ್ಗಿಸುತ್ತದೆ. ಚುನಾವಣೆ ಫಲಿತಾಂಶ ಹೇಗೆಯೇ ಬರಲಿ ದೇಶ, ಧರ್ಮ ರಕ್ಷಣೆಯ ಕಾರ್ಯ ನಿರಂತರವಾಗಿರುತ್ತದೆ ಎಂದರು.
ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕಾರ್ಯಕರ್ತರ ಪರಿಶ್ರಮ ಹಾಗೂ ಪ್ರಾಮಾಣಿಕತೆಯೊಂದಿಗೆ ವಿಶೇಷ ಅಪೇಕ್ಷೆಯಿಲ್ಲದೇ ಚುನಾವಣೆ ನಡೆದಿರುವ ಕ್ಷೇತ್ರ ಇದಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲದಿರಬಹುದು ಆದರೆ, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಚಿಹ್ನೆ ಇರುತ್ತದೆ. ಹೀಗಾಗಿ ಜನರು ಭ್ರಮೆಯಲ್ಲಿರಬಾರದು ಎಂದರು. ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ, ‘ಸ್ಥಳೀಯ ಚುನಾವಣೆಗಳನ್ನು ಕಡೆಗಣಿಸದೇ, ಪಕ್ಷದ ಗೆಲುವಿಗೆ ಗಂಭೀರವಾಗಿ ಶ್ರಮಿಸಬೇಕು’ ಎಂದರು.
ಹಿಂದುತ್ವದ ನಾಟಕವಾಡಿ ಇದೀಗ ಮಸೀದಿಗೆ ಹೋಗುವಂತವರಿಂದ ದೇಶ ಸೇವೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಸೋಗಲಾಡಿತನ ಬಿಟ್ಟು ರಾಜಕೀಯ ಮಾಡಬೇಕು ಎಂದರು.
ಸಂಸದರ ಕಾರ್ಯವ್ಯಾಪ್ತಿ ಬಗ್ಗೆ ಕಾರ್ಯಕರ್ತರು ತಿಳಿದಿರಿ, ರಸ್ತೆ ಮಾಡುವುದು ಅಥವಾ ಇನ್ನಾವುದೇ ಕಾರ್ಯಗಳು ರಾಜ್ಯ ಸರ್ಕಾರದ ಕೆಲಸಗಳು ಹೀಗಾಗಿ ಸಂಸದರ ಕಾರ್ಯದ ಕುರಿತಾಗಿ ನೀವುಗಳು ತಿಳಿದಿರಿ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಶಾಸಕ ದಿನಕರ ಶೆಟ್ಟಿ, ಎಂ.ಜಿ.ನಾಯ್ಕ, ಈ ಸಂದರ್ಭದಲ್ಲಿ ಉತ್ತರ ಕನ್ನಡ ಲೋಕಸಭಾ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಲಿಂಗರಾಜ ಪಾಟೀಲ.ವಿನೋದ ಪ್ರಭು,ನಾಗರಾಜ ನಾಯಕ ತೊರ್ಕೆ,ಎಂ.ಜಿ ಭಟ್್ಟ್ ವೆಂಕಟೇಶ ನಾಯಕ, ನ್ಯಾಯವಾದಿ ನಾಗರಾಜ ನಾಯಕ.ಕೃಷ್ಣ ಎಸಳೆ, ರಾಮಕೃಷ್ಣ ಗುನಗಾ , ಅಶೋಕ ಪ್ರಭು ,ಪ್ರಶಾಂತ ನಾಯ್ಕ ,,ವಿಶ್ವನಾಥ ನಾಯ್ಕ.ಚಿದಾನಂದ ಭಂಡಾರಿ ಮೊದಲಾವರು ಉಪಸ್ಥಿತರಿದ್ದರು.