ಮೇಷ:-ಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸಬೇಡಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿದರೆ ಒಳಿತಾಗುವುದು.


ವೃಷಭ:- ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಯಶಸ್ಸಿಗೆ ಅಡ್ಡ ಮಾರ್ಗ ಎಂಬುದಿಲ್ಲ. ನೇರ ಮಾರ್ಗದಿಂದ ಯಶಸ್ಸು ಹೊಂದುವಿರಿ. ಇದರಿಂದ ನಿಮ್ಮ ಅಸಲಿ ಪ್ರತಿಭೆಗೆ ಹೆಚ್ಚಿನ ಪ್ರಶಂಸೆಗಳು ಕೇಳಿ ಬರುವವು.


ಮಿಥುನ:- ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬುದು ಜನಜನಿತ ನುಡಿ. ಹಾಗಾಗಿ ನೀವು ನಿಮ್ಮ ವಿಚಾರಗಳನ್ನು ಪರರ ಮುಂದೆ ಹೇಳುವಾಗ ಎರಡು ಬಾರಿ ಚಿಂತಿಸಿ. ಇಲ್ಲದಿದ್ದಲ್ಲಿ ವೃಥಾ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳುವಿರಿ.

ಕಟಕ:- ಐಷಾರಾಮಿ ಜೀವನ ಸಾಗಿಸುವ ಕನಸಿರಲಿ. ಆದರೆ ಅದಕ್ಕೆ ಶ್ರಮದ ಬೆವರಿನ ಹನಿ ಹರಿಸಿದಾಗ ಮಾತ್ರ ಸುಖ ದೊರೆಯುವುದು. ದೃಢ ನಿರ್ಧಾರದಿಂದ ಕಾರ್ಯ ಪ್ರವೃತ್ತರಾದರೆ ಒಳಿತಾಗುವುದು.

RELATED ARTICLES  'ಮೋದಿ ಹೇ ತೋ ಮುಮ್ಕಿನ್‌ ಹೇ' ಘೋಷವಾಕ್ಯದೊಂದಿಗೆ ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ.

ಸಿಂಹ:- ನೀವು ಜೀವನದ ಮಧುರ ಕ್ಷಣಗಳನ್ನು ಕಾಣುವಿರಿ. ನಿಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನ ಉನ್ನತ ಸ್ಥಾನಕ್ಕೆ ಏರಲು ವಿಫುಲ ಅವಕಾಶಗಳು ದೊರೆಯುತ್ತವೆ. ತಾಯಿಯ ಆರೋಗ್ಯದ ಕಡೆ ಗಮನ ನೀಡಿ.

ಕನ್ಯಾ:- ಹೊಸ ಉತ್ಸಾಹದಿಂದ ಕೆಲಸ ಆರಂಭಿಸುರಿ. ಆದರೆ ಹಿಂದಿನ ಅನುಭವಗಳ ಸಾಧಕ ಬಾಧಕಗಳನ್ನು ಅರಿತು ಮುಂದುವರೆಯುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ತುಲಾ:- ಸಾಫಲ್ಯತೆಗಳು ಒಂದೇ ಏಟಿಗೆ ಸಿಗಬೇಕೆಂಬ ನಿಮ್ಮ ಯೋಜನೆ ಸಾಧುವಾದರೂ ಅದಕ್ಕೆ ಪೂರಕವಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಮಕ್ಕಳ ಮತ್ತು ಮಡದಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ವೃಶ್ಚಿಕ:- ಕಷ್ಟದಲ್ಲಿರುವವರಿಗೆ ಅನೇಕ ಮಂದಿ ಪುಕ್ಕಟೆ ಸಲಹೆ ಕೊಡುತ್ತಾರೆ. ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ನಿಮಗೆ ಒಳಿತಾಗುವುದು.

RELATED ARTICLES  ಅಷಿಯಾನ್ ಶೃಂಗಸಭೆಯಲ್ಲಿ ಮೋದಿ ಟ್ರಂಪ್ ಮಹತ್ವದ ವಿಷಯ ಚರ್ಚೆ.

ಧನುಸ್ಸು:- ಕಷ್ಟ ಬಂದಾಗ ವೆಂಕಟರಮಣವನನ್ನು ಧ್ಯಾನಿಸುವುದು ಸಹಜ ಗುಣ. ಅಂತೆಯೇ ಭಗವಂತನೂ ತನ್ನ ಭಕ್ತರ ಕೈ ಬಿಡುವುದಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಷ್ಣು ಮಂದಿರಕ್ಕೆ ತುಳಸಿ ಮಾಲೆ ಅರ್ಪಿಸಿ.

ಮಕರ:- ಹೋರಾಟದಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿ ಬರಬಹುದು. ಅದರ ಸಾಧಕ ಬಾಧಕಗಳನ್ನು ತಿಳಿದುಕೊಂಡು ಜವಾಬ್ದಾರಿ ವಹಿಸಿಕೊಳ್ಳಿ. ಈ ಕೆಲಸದಲ್ಲಿ ಯಶಸ್ಸು ಹೊಂದುವಿರಿ.

ಕುಂಭ:- ಅತಿಥಿಗಳ ಆದರದಲ್ಲೇ ದಿನದ ಬಹುಪಾಲು ಕಳೆಯುವ ಸಾಧ್ಯತೆ ಇದೆ. ಅದರ ಜತೆ ನಿಮ್ಮ ವೈಯಕ್ತಿಕ ಆಗುಹೋಗುಗಳ ಕಡೆಯೂ ಲಕ್ಷ್ಯ ಕೊಡುವುದು ಒಳ್ಳೆಯದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.

ಮೀನ:- ಹೊಸ ಸಾಹಸಗಳಲ್ಲಿ ಯಶಸ್ಸು ಕಾಣುವಿರಿ. ಬಂಧುಗಳು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣ ಹರಿದು ಬರುವುದರಿಂದ ಒಳಿತಾಗುವುದು.