ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾಮದ ಶ್ರೀ ಹಾಣಿಕುಳಿ ಜಟಕದೇವ ಹವ್ಯಾಸಿ ಕಲಾ ಬಳಗ ಇವರ ಆಶ್ರಯದಲ್ಲಿ ೩ ನೇ ವರ್ಷದ ಯಕ್ಷಗಾನ ಪ್ರದರ್ಶನ ಶ್ರೀ ಜಟಕೇಶ್ವರ ರಂಗ ಮಂದಿರದಲ್ಲಿ ರವಿವಾರದಂದು ನೆರವೇರಿತು.

ಕಾರ್ಯಕ್ರಮದ ಉದ್ಗಾಟನೆಯನ್ನು ಜಿಲ್ಲಾ ಪಂಚಾಯತ ಸದಸ್ಯರು ಆದ ಶಿವಾನಂದ ಹೆಗಡೆ ಕಡತೋಕಾ ನೆರವೇರಿಸಿ ಮಾತನಾಡಿದರು.

ಕನ್ನಡವನ್ನ ಉಳಿಸುವಲ್ಲಿ ಬೆಳೆಸುವಲ್ಲಿ ಯಕ್ಷಗಾನ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು ಆ ನಿಟ್ಟಿನಲ್ಲಿ ಹಾಲಕ್ಕಿ ಬಳಗದವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಜೆ ಡಿ ಎಸ್ ಮುಖಂಡ ಸೂರಜ್ ಸೋನಿ ಮಾತನಾಡಿ ಮಕ್ಕಳಗೆ ಯಕ್ಷಗಾನ ಕಲಿಸುವುದರಿಂದ ನಮ್ಮ ಭಕ್ತಿ ಕೇಂದ್ರ ಶಕ್ತಿ ಕೇಂದ್ರ ಪರಂಪರೆಯ ಬಗ್ಗೆ ಕಲಿಯಲು ಅನುಕೂಲ ಆಗುತ್ತದೆ ಮತ್ತು ವಿಧ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುತ್ತದೆ ಎಂದರು.

RELATED ARTICLES  ಸಾವಿರು ನಾಟಕದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದ ರಂಗಕರ್ಮಿ ಇನ್ನಿಲ್ಲ

ಹಳದೀಪುರ ಗ್ರಾಮಪಂಚಾಯತ ಸದಸ್ಯ ಗೋವಿಂದ ಜೋಶಿ ಮಾತನಾಡಿ ಹವ್ಯಕರಿಗೂ ಹಾಲಕ್ಕಿಗಳಿಗೂ ಅವಿನಾಭಾವ ಸಂಭಂದವಿದೆ ಎಂದರು.

ಕಡ್ಲೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಗಜಾನನ ಮಡಿವಾಳ ಮಾತನಾಡಿ ಇಂದು ಯಕ್ಷಗಾನ ಹಲವು ಬಡ ಕುಟುಂಬಗಳಿಗೆ ಆರ್ಥಿಕ ಆಶ್ರಯ ನೀಡಿ ರಾಷ್ಟ್ರ ಮಟ್ಟದ ಪ್ರಶಸ್ತಿ ನಮ್ಮ ಜಿಲ್ಲೆಗೆ ಲಭ್ಯವಾಗುವಂತೆ ಮಾಡಿದೆ ಎಂದರು.

ಚಂದಾವರ ಸೀಮೆಯ ಗುರುಗೌಡರು ಮಾತನಾಡಿ ದಿನವಿಡಿ ದುಡಿದು ಧಣಿದ ಹಾಲ್ಕಿಗಳಿಗೆ ಇಂತಹ ಕಾರ್ಯಕ್ರಮಗಳು ಧಣಿವಾರಿಸುತ್ತದೆ ಎಂದರು.

ಗ್ರಾಮ ಪಂಚಾಯತ ಸದಸ್ಯರಾದ ಎಂ ಜಿ ಹೆಗಡೆ ಮಾತನಾಡಿ ಈ ಪ್ರದೇಶ ಹಿಂದುಳಿದ ಪ್ರದೇಶವಾಗಿದ್ದು ಸಾಕಷ್ಟು ಅಭಿವೃದ್ದಿ ಕೆಲಸಗಳಾಗಬೇಕಿದೆ ಎಂದರು.

RELATED ARTICLES  ಯುವ ಪ್ರತಿಭಾನ್ವಿತ ಕಬ್ಬಡ್ಡಿ ಆಟಗಾರ ನೀರಿನಲ್ಲಿ ಬಿದ್ದು ಸಾವು

ಗ್ರಾಮ ಪಂಚಾಯತ ಅಧ್ಯಕ್ಷೆ ಉರ್ಮಿಳಾ ಶೇಟ್ ಮಾತನಾಡಿ ನನ್ನ ಕಷ್ಟದ ಸಮಯದಲ್ಲಿ ಈ ಗ್ರಾಮದ ಹಾಲಕ್ಕಿಗಳು ನೀಡಿದ ಸಹಕಾರ ಸಂತ್ವನವನ್ನ ಯಾವತ್ತೂ ಸ್ಮರಿಸುತ್ತೇನೆ ಎಂದರು.

ವೇದಿಕೆಯಲ್ಲಿ ಕಲಾಬಳಗದ ಅಧ್ಯಕ್ಷರಾದ ಮಂಜುನಾಥ ಗೌಡ ಉಪಸ್ಥಿತರಿದ್ದರು.
ಈ ಸಂದರ್ಬದಲ್ಲಿ ಗುರು ಗೌಡರನ್ಮ ಮತ್ತು ಯಕ್ಷಗಾನ ತರಬೇತುದಾರ ಗಣೇಶ ನಾಯ್ಕ ಮುಗ್ವಾ ಇವರನ್ನ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಅಭಿಮನ್ಯು ಕಾಳಗ ಮತ್ತು ಜಾಂಬವತಿ ಪರಿಣಯ ಯಕ್ಷಗಾನ ಮಕ್ಕಳಿಂದ ನೆರವೇರಿತು.
ಭಾಗವತರಾಗಿ ಗಜಾನನ ಹೆಗಡೆ ಧರ್ಮಶಾಲೆ ಮೃದಂಗದಲ್ಲಿ ಗಜಾನನ ಹೆಗಡೆ ಮೂರುರು ಚಂಡೆ ವಾದಕರಾಗಿ ಕುಮಾರ ಕೀರ್ತಿ ಹೆಗಡೆ ಸಹಕರಿಸಿದರು.