ಮೇಷ:ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವು ವಿಚಾರಗಳಲ್ಲಿ ಮನೆಯ ಸದಸ್ಯರ ಸಲಹೆ ಪಡೆದು ಮುಂದುವರಿಯುವುದು ಒಳ್ಳೆಯದು. ಸಮಾಜದಲ್ಲಿ ಸನ್ಮಾನಗಳು ದೊರೆಯುವವು. ಎಲ್ಲದಕ್ಕೂ ಧಾವಂತ ಮಾಡುವುದರಿಂದ ಅಮೂಲ್ಯ ವಿಚಾರಗಳನ್ನು ಕಳೆದುಕೊಳ್ಳುವಿರಿ. ಕೂತು ಮಲಗುವ ವ್ಯವಧಾನ ಇಟ್ಟುಕೊಂಡಲ್ಲಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆತುರದಿಂದ ಕಾರ್ಯ ಹಾನಿ ಆಗುವುದು. ದೃಢ ಮನಸ್ಕರಾದ ನಿಮಗೆ ನಿಮ್ಮದೇ ಆದ ದಾರಿ ಸ್ಪಷ್ಟವಿರುವಾಗ ಮನಸ್ಸಿನ ಹೊಯ್ದಾಟಗಳಿಗೆ ದಾರಿ ಮಾಡಿಕೊಡದಿರಿ. ನೀವು ಇಚ್ಛಿಸಿದಂತೆ ಕೆಲಸಗಾರರು ನಿಮಗೆ ಸಹಾಯ ಮಾಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಅದೃಷ್ಟ ಸಂಖ್ಯೆ:2

ವೃಷಭ :ಯಾವುದೋ ಮಾತಿನ ಭರದಲ್ಲಿ ನಿಮ್ಮ ಸ್ನೇಹಿತರಿಗೆ ಆಡಿದ ಮಾತಿನಿಂದ ಆತನು ನಿಮ್ಮಿಂದ ವಿಮುಖನಾಗಿರುವನು. ಈ ಬಗ್ಗೆ ಆತನೊಟ್ಟಿಗೆ ಮಾತನಾಡಿ ಇದ್ದ ವಿಷಯವನ್ನು ತಿಳಿಸಿ. ನಿಮ್ಮ ಮೇಲಿನ ತಪ್ಪು ಭಾವನೆಯನ್ನು ಹೋಗಲಾಡಿಸಿಕೊಳ್ಳಿ. ಸತ್ಯವಾದುದು ಯಾವಾಗಲೂ ಕಠೋರವಾಗಿರುತ್ತದೆ. ಅದು ನಿಮ್ಮ ಗೌರವ ಘನತೆಯನ್ನು ಎತ್ತಿಹಿಡಿಯುವುದು ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ. ನೀವು ಮಾಡಬೇಕಾಗಿರುವ ಕಾರ್ಯದ ರೂಪರೇಷೆಯನ್ನು ನಿಮ್ಮ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಕಾರ್ಯ ಸುಲಭವಾಗಿ ಆಗುವುದು. ಆತನು ನಿಮಗೆ ಪೂರಕವಾದ ಸಲಹೆ ಸಹಕಾರಗಳನ್ನು ನೀಡುವರು. ಅದೃಷ್ಟ ಸಂಖ್ಯೆ:1

ಮಿಥುನ: ಭಗವಂತನ ಸೃಷ್ಟಿಯಲ್ಲಿ ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಭಾವನೆ ತರವಲ್ಲ. ಸಮಯ ಬಂದರೆ ಸಣ್ಣ ಹುಲ್ಲುಕಡ್ಡಿಯಿಂದಲೂ ಸಹಾಯ ದೊರೆಯುವುದು. ಹಾಗಾಗಿ ಯಾರನ್ನು ದೂರ ಮಾಡಿಕೊಳ್ಳದಿರಿ.ಎಷ್ಟೇ ತಾಳ್ಮೆಯಿಂದ ಇರಲು ಪ್ರಯತ್ನಿಸಿದರೂ ಈ ದಿನದ ಸನ್ನಿವೇಶ ನಿಮ್ಮನ್ನು ಕೆರಳುವಂತೆ ಮಾಡುವುದು. ವಿನಾಕಾರಣ ಮನೆ ಸದಸ್ಯರ ಮೇಲೆ ಅಸಹನೆ, ಕೋಪ ಕೂಗಾಟಗಳನ್ನು ಮಾಡದಿರಿ. ಕುಲದೇವರನ್ನು ಮನಸಾ ಸ್ಮರಿಸಿ.ಎಲ್ಲಾ ಕಾರ್ಯಗಳು ಸುಗಮವಾಗಿ ಆಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಬಂಧು ಬಾಂಧವರು ಮನೆಗೆ ಬರುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡುವುದು.ಅದೃಷ್ಟ ಸಂಖ್ಯೆ:9

ಕಟಕ :ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರುವುದು. ಹೊಸ ಕೆಲಸದ ಕಾರ್ಯ ಯೋಜನೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.ಅನವಶ್ಯಕವಾಗಿ ಕೆಲವರನ್ನು ಹೆಗಲಿಗೇರಿಸಿಕೊಳ್ಳುವ ಅಚಾತುರ್ಯ ಖಂಡಿತ ಬೇಡ. ಅಪರಿಚಿತರೊಡನೆ ಸಲುಗೆ ಬೇಡ. ಹಣಕಾಸು ಸಕಾಲದಲ್ಲಿ ಬರುವುದರಿಂದ ಒಳಿತಾಗುವುದು. ಅಂತರಂಗ, ಬಹಿರಂಗ ಗಳೆರಡನ್ನೂ ಗ್ರಹಿಸಿ ಕೆಲವು ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಇದರಿಂದ ಉತ್ಕರ್ಷಕ್ಕೆ ದಾರಿ ಉಂಟಾಗುವುದು. ಮನೆಯ ಸದಸ್ಯರೊಡನೆ ಸೌಹಾರ್ದತೆಯಿಂದ ಇರುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:9

ಸಿಂಹ :ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಒಳಿತು. ಇದರಿಂದ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಎಲ್ಲರನ್ನು ನಂಬಿ ಮೋಸ ಹೋಗದಿರಿ. ಕೆಲವೇ ಕೆಲವು ಆಪ್ತ ಸ್ನೇಹಿತರನ್ನು ಇಟ್ಟುಕೊಳ್ಳಿರಿ.ನಿರಂತರವಾದ ನಿಮ್ಮ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಹರಸುತ್ತಿದ್ದವರ ನೇರ ಭೇಟಿಯಿಂದಾಗಿ ಮನಸ್ಸು ಪ್ರಫುಲ್ಲವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುವುದು. ಮಕ್ಕಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಸರು ಮಾಡುವರು.ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುವುದು. ಉತ್ಸಾಹದ ಭರದಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯನ್ನು ವ ಕ್ತಪಡಿಸುವ ಸಂದರ್ಭದಲ್ಲಿ ಅನ ಮಕ್ಕಳನ್ನು ಅಪಮಾನಗೊಳಿಸದಿರಿ. ಇದರಿಂದ ಉಭಯತರರಿಗೂ ಸಂತೋಷ ಉಂಟಾಗುವುದು. ಅದೃಷ್ಟ ಸಂಖ್ಯೆ:8

RELATED ARTICLES  ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಕ್ಷೇಮವಾಗಿದ್ದು ಭಕ್ತರು ಆತಂಕ ಪಡಬೇಕಾಗಿಲ್ಲ : ವೈದ್ಯರ ಸ್ಪಷ್ಠನೆ

ಕನ್ಯಾ :ಪ್ರಮುಖ ವಿಚಾರದಲ್ಲಿ ನೀವೋಬ್ಬರೇ ನಿರ್ಧಾರ ತಳೆಯುವ ಬದಲು ಹಿರಿಯರ ಅಥವಾ ಸಂಸ್ಥೆಯ ಇತರೇ ಸದಸ ರ ಅಭಿಪ್ರಾಯವನ್ನು ತಿಳಿದು ಕಾರ್ಯ ಪ್ರವೃತ್ತರಾಗಿರಿ. ಇದರಿಂದ ಕಾರ್ಯ ಸಾಧುವಾಗುವುದು ಮತ್ತು ನಿಮ್ಮ ಗೌರವ ಹೆಚ್ಚಾಗುವುದು.ಧಾರ್ಮಿಕ ಕಾರ್ಯಕರ್ತರಿಗೆ ಹೆಚ್ಚಿನ ಅನುಕೂಲವಾಗುವುದು. ನಿಮ್ಮ ಬೆಂಬಲಿಗರು ನಿಮ್ಮನ್ನು ಕೊಂಡಾಡುವರು. ಒಂದು ಅಪೂರ್ವವಾದ ಕಾರ್ಯ ಒಂದಕ್ಕೆ ಇಂದು ಮಹತ್ತರ ಪತ್ರಕ್ಕೆ ಸಹಿ ಹಾಕುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.ಕೌಟುಂಬಿಕ ಭಿನ್ನಾಭಿಪ್ರಾಯಗಳು ಅಂತ ಕಾಣುವವು. ಹೊಸದೇ ಆದ ಕಾರ್ಯಕ್ಕೆ ಚಾಲನೆ ಸಿಗುವುದು. ಆಸ್ತಿಗೆ ಸಂಬಂಧಪಟ್ಟಂತೆ ಒಂದು ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಇದರಿಂದ ಬಹುತೇಕ ಸಾಲಬಾಧೆ ತೀರುವುದು. ಅದೃಷ್ಟ ಸಂಖ್ಯೆ:7

ತುಲಾ: ಅನೇಕ ಉಪಯುಕ್ತ ಯೋಜನೆಗಳೊಡನೆ ಮೇಲಾಧಿಕಾರಿಗಳನ್ನು ಪ್ರಸನ್ನಗೊಳಿಸುವಿರಿ. ಪದೋನ್ನತೆಗೆ ದಾರಿ ಇದೆ. ಹಾಗಂತ ಹಳೆಯ ತಪ್ಪುಗಳನ್ನು ಪುನಃ ಪುನಃ ಮಾಡುವುದು ಸರಿಯಲ್ಲ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದಿರಿ.ಮನೆಯಿಂದ ಹೊರಗಡೆ ಹೊರಡುವಾಗ ಮಾತಾ ದುರ್ಗಾದೇವಿಯನ್ನು ಸ್ಮರಿಸಿಕೊಳ್ಳಿರಿ. ವಾಹನ ಚಲಾಯಿಸುವಾಗ ಬಹು ಎಚ್ಚರಿಕೆ ಅಗತ . ಪ್ರಯಾಣದ ಸಮಯದಲ್ಲಿ ಸ್ವಲ್ಪ ಉದ್ದಿನಕಾಳನ್ನು ಇಟ್ಟುಕೊಳ್ಳಿರಿ. ಇದರಿಂದ ಮೇಜರ್‌ ಅಪಘಾತದಿಂದ ರಕ್ಷ ಣೆ ದೊರೆಯುವುದು.ಮನಸ್ಸಿನ ದುಗುಡವನ್ನು ದೂರ ಮಾಡಿಕೊಳ್ಳಿರಿ. ಹೊಸದೇ ಆದ ಯೋಜನೆಗಳಿಗೆ ಆರ್ಥಿಕ ನೆರವು ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಹಳೆಯ ಸ್ನೇಹಿತರು ಇಂದು ನಿಮ್ಮನ್ನು ಭೇಟಿ ಮಾಡುವರು.ಅದೃಷ್ಟ ಸಂಖ್ಯೆ:6

ವೃಶ್ಚಿಕ: ಆಕಸ್ಮಿಕವಾದ ಧನಲಾಭ ಉಂಟಾಗುವುದು. ವೃತ್ತಿಯಲ್ಲಿ ಹಲ-ಕೆಲವು ಮಾರ್ಪಾಟುಗಳು ಉಂಟಾಗುವುದು. ಇದರಿಂದ ನಿಮಗೆ ವೃತ್ತಿಯಲ್ಲಿ ಹೆಚ್ಚಿನ ವಿಶ್ವಾಸ ಮೂಡುವುದು. ಸಂಬಂಧಗಳು ಉತ್ತಮಗೊಳ್ಳುವುದು.ಬೇರೆ ಮೂಡಿನಲ್ಲಿರುವ ಮೇಲಾಧಿಕಾರಿಗಳ ಸಂಗಡ ಮಾತನಾಡುವಾಗ ಹುಷಾರಾಗಿರಿ. ಈದಿನ ಸಾಧ ವಾದರೆ ಮೇಲಾಧಿಕಾರಿಗಳ ಭೇಟಿಯನ್ನೆ ಮಾಡದಿರಿ. ಅವರು ಶಾಂತಮನಸ್ಕರಾಗಿದ್ದಾಗ ಅವರೇ ನಿಮ್ಮನ್ನು ಕರೆದು ಮಾತನಾಡಿಸುವರು.ವಿವಾದಾತ್ಮ ಸಮಸೆ ಗಳು ಸದ ಎದುರಾಗಲಿವೆ. ಆಂಜನೇಯ ಸ್ತೋತ್ರ ಪಠಿಸಿರಿ. ಮನೆಯ ಸದಸ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ಹಣಕಾಸಿನ ಪರಿಸ್ಥಿತಿ ಈದಿನ ಅಷ್ಟೇನೂ ಉತ್ತಮವಾಗಿರುವುದಿಲ್ಲ. ತಾಳ್ಮೆಯಿಂದ ಇರಿ. ಅದೃಷ್ಟ ಸಂಖ್ಯೆ:7

ಧನುಸ್ಸು: ಅಮೂಲ್ಯವಾದ ವಸ್ತುಗಳನ್ನು ಸಂರಕ್ಷಿಸಿಕೊಳ್ಳಿ. ಕೆಲವು ವಸ್ತುಗಳು ಕಣ್ಮರೆ ಆಗುವ ಸಾಧ್ಯತೆ ಇದೆ. ಅಂಥ ವಸ್ತುಗಳನ್ನು ಜಾಗ್ರತೆಯಾಗಿ ಎತ್ತಿಡಿ. ತಾಯಿಯ ಆರೋಗ್ಯದ ಸಲುವಾಗಿ ಖರ್ಚು ಮಾಡಬೇಕಾಗುವುದು.ಹಿಂದೆ ಇದ್ದ ವೈಭವವನ್ನು ನೆನೆದು ಹಿತ್ತಲಲ್ಲಿ ಅತ್ತರು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ದೇಹದಲ್ಲಿ ಕಸುವಿದ್ದಾಗ ಮಾಡಿದ ಕೆಲಸಗಳು ನೆನಪಾಗುವುದು. ಇಂದಿನ ಪರಿಸ್ಥಿತಿಗೂ ಅಂದಿನ ಸ್ಥಿತಿಗೂ ಹೋಲಿಸಿ ನೋಡುವುದು ತರವಲ್ಲ.ಹಣಕಾಸಿನ ವಿಷಯದಲ್ಲಿ ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಚಿಂತನೆ ಮೂಡಿಬರುವುದು. ದೊಡ್ಡ ಪ್ರಮಾಣದ ಉಳಿತಾಯ ಯೋಜನೆ ಇದ್ದಲ್ಲಿ ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತರಾಗಿ.ಅದೃಷ್ಟ ಸಂಖ್ಯೆ:8

RELATED ARTICLES  ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಕೇಂದ್ರದ ಮುಂದೆ ಪ್ರತಿಭಟಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ

ಮಕರ :ಹೊರಗಿನ ವ್ಯವಹಾರದಲ್ಲಿ ಬರಿ ಮೋಸ ಕಪಟಗಳು ತಾಂಡವಾಡುತ್ತಿವೆ. ಹಾಗಾಗಿ ಅಂತರಂಗದ ನುಡಿಗಳನ್ನು ಆಲಿಸಿ ಕಾರ್ಯ ಪ್ರವೃತ್ತರಾಗಿ. ಪರಿಚಯವಿಲ್ಲದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸದಿರುವುದು ಒಳ್ಳೆಯದು. ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರ ಮೇಲೂ ಅನುಮಾನ ತಾಳುವುದು ಸರಿಯಲ್ಲ. ಅನ್ಯರ ನಾಡಿ ಮಿಡಿತವನ್ನು ಅರಿತ ನಿಮಗೆ ಯಾರ ಜತೆ ಹೇಗೆ ವರ್ತಿಸಬೇಕೆಂಬುದು ತಿಳಿದೇ ಇದೆ. ಅದರಂತೆ ನಡೆಯುವುದು ಒಳ್ಳೆಯದು.ಅನೇಕ ದಿನಗಳ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಹತ್ತರ ತಿರುವು ಕಂಡುಬರುವುದು. ಮುಂದಿನ ದಿನಗಳಲ್ಲಿ ಬೃಹತ್‌ ಪ್ರಮಾಣದ ಕಾರ್ಯ ಯೋಜನೆಗೆ ಚಾಲನೆ ಸಿಗುವುದು ಮತ್ತು ಗೌರವ ಸ್ಥಾನ ಹೊಂದುವಿರಿ.ಅದೃಷ್ಟ ಸಂಖ್ಯೆ:4

ಕುಂಭ: ಅತ್ಯಂತ ನಂಬಿಕಸ್ಥ ಬಂಧುಗಳು ಇಲ್ಲವೆ ಸ್ನೇಹಿತರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುವುದು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ದೇವರು ಒಳಿತನ್ನು ಮಾಡುವನು.ನಿಮ್ಮಲ್ಲಿ ಅತ್ಯುತ್ಸಾಹ ತುಂಬಿ ತುಳುಕುತ್ತಿದ್ದರೂ ಕ್ರಿಯಾಶೀಲತೆಗೆ ಬೇಕಾದ ತುಡಿತ ನಿಮ್ಮಲ್ಲಿಲ್ಲ. ಅಲ್ಲದೆ ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮ ಸ್ನೇಹಿತರು, ಬಂಧುಗಳೇ ಅಡ್ಡ ಹಾಕುವುದರಿಂದ ತೊಂದರೆ ಎದುರಿಸಬೇಕಾಗುವುದು. ಯಾವುದೇ ಚಿಕ್ಕ ಕಾರ್ಯ ಮಾಡುವುದಾದರು ಸಹ ಅದಕ್ಕೆ ಪೂರ್ವ ಭಾವಿಯಾಗಿ ಅದರ ಸಾಧಕ ಬಾಧಕಗಳನ್ನು ತಿಳಿದು ಮುಂದುವರಿಯುವುದು ಒಳ್ಳೆಯದು. ಉತ್ತಮ ಸಮಯವನ್ನು ಕಳೆಯುವಿರಿ. ಅದೃಷ್ಟ ಸಂಖ್ಯೆ:2

ಮೀನ :ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಖಂಡಿತ. ಆದರೆ ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ. ಇದರಿಂದ ಸರಳವಾಗಿ ಆಗುತ್ತಿದ್ದ ಕೆಲಸಕ್ಕೂ ಬಹಳ ದಿನ ಕಾಯುವಂತಹ ಪರಿಸ್ಥಿತಿ ಬರುವುದು. ಆಂಜನೇಯ ಸ್ತೋತ್ರ ಪಠಿಸಿ. ವಿದ್ಯೆಯ ಸಂಪತ್ತನ್ನು ಹೊಂದಿರುವ ನಿಮ್ಮನ್ನು ಕಂಡರೆ ಕೆಲವರಿಗೆ ಗೌರವ, ಕೆಲವರಿಗೆ ಅಸೂಯೆ. ಈ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಭಗವಂತ ನಿಮ್ಮ ಸಹಾಯಕ್ಕೆ ಬಂದು ನಿಲ್ಲುವನು. ನೀವು ನಡೆಯುವ ದಾರಿ ಉತ್ತಮವಾಗಿರುವುದು. ಅನವಶ್ಯಕವಾಗಿ ಗೊಂದಲಕ್ಕೆ ಬಿದ್ದು ನಡೆಯುವ ದಾರಿಯನ್ನು ಬದಲಾಯಿಸದಿರಿ. ಆತ್ಮೀಯ ಗೆಳೆಯರ ಭೇಟಿಯು ನಿಮಗೆ ಆನಂದವನ್ನುಂಟು ಮಾಡುತ್ತದೆ. ಅದೃಷ್ಟ ಸಂಖ್ಯೆ:1