ಮೇಷ :ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು. ಆತ್ಮೀಯ ಬಂಧುಗಳು ತಗಾದೆ ಎಬ್ಬಿಸಬಹುದು. ಜಾಗ್ರತೆಯಿಂದ ಇರಿ. ಮನೆತನದ ಕೆಲವು ವಿಚಾರಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಇದ್ದದ್ದನ್ನು ಇದ್ದಂತೆ ಬೇರೆಯವರ ಮುಂದೆ ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಕೆಲವು ಸಮಸ್ಯೆಗಳು ಎದುರಾಗುವವು. ಅವುಗಳನ್ನು ಹೆಚ್ಚಿನ ತೊಂದರೆಯಿಲ್ಲದೆ ಎದುರಿಸುವ ಶಕ್ತಿ ನಿಮಗೆ ಬರುವುದು. ಬರಬೇಕಾಗಿದ್ದ ಹಣಕಾಸು ಬರುವುದು. ಅದೃಷ್ಟ ಸಂಖ್ಯೆ:2
ವೃಷಭ: ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಕಾದಾಡದೆ ಮಾತುಕತೆ ಮುಂದುವರೆಸಿದರೆ ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ.ದೂರದ ಊರಿನಿಂದ ಬರುವ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ನಿಮ್ಮ ಬಹುದಿನದ ಸಮಸ್ಯೆಗೆ ಪರಿಹಾರ ಸಿಗುವುದು. ಇದರಿಂದ ಮಗನ ಮದುವೆ ಮಾಡುವ ಆಸೆ ಚಿಗುರುವುದು. ಗ್ರಹಗಳ ಆಟ ಯಾವ ರೀತಿಯಲ್ಲಿಯೂ ಇರಬಹುದು. ಅದನ್ನು ಸ್ವೀಕರಿಸಿ.ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೂಡಿಟ್ಟ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿರುವುದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ಅದೃಷ್ಟ ಸಂಖ್ಯೆ:1
ಮಿಥುನ:ಬಹುಮುಖ್ಯ ಕಡತವೊಂದು ಕಣ್ಮರೆಯಾಗುವುದರಿಂದ ಚಿಂತೆಗೆ ಒಳಗಾಗುವಿರಿ. ವ್ಯವಧಾನದಿಂದ ಹುಡುಕಿದರೆ ಸಂಜೆ ವೇಳೆ ಆ ಕಡತ ದೊರೆಯುವ ಸಾಧ್ಯತೆ ಇದೆ. ಕಾರ್ತವೀರ್ಯಾರ್ಜುನನ ಮಂತ್ರ ಪಠಿಸಿ. ನೀವು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದಂತೆ ನಿಮ್ಮ ಕೆಲಸಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದಿರಿ.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯನ್ನು ತಿಳಿದು ಭ್ರಮೆಯಲ್ಲಿ ಚಡಪಡಿಸುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗುವುದು. ಶ್ರೀರಾಮ ರಕ್ಷಾ ಸ್ತೋತ್ರ ಪಠಿಸಿ. ವಿಷ್ಣುವಿನ ಆರಾಧನೆ ಮೂಲಕ ಶುಭ ಸಿಗುವುದು. ಅದೃಷ್ಟ ಸಂಖ್ಯೆ:4
ಕಟಕ :ವೃತ್ತಿಯಲ್ಲಿ ಬೇಸರವುಂಟಾಗುವುದು ಮತ್ತು ಕೆಲಸ ಬದಲಾವಣೆ ಮಾಡುವ ಸಂದರ್ಭ ಬರುವುದು. ಹಾಗಂತ ಸದ್ಯದ ವೃತ್ತಿಗೆ ರಾಜೀನಾಮೆ ನೀಡುವುದು ಸೂಕ್ತವಲ್ಲ. ಇರುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ. ವಿಷ್ಣು ಸಹಸ್ರನಾಮದ ಮಹಿಮೆ ಅಪಾರ. ಅಗತ್ಯವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಆಂಜನೇಯ ಗುಡಿಯಲ್ಲಿ ದೀಪಾರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಮನೆ ಸದಸ್ಯರ ಮೇಲೆ ವಿನಾಕಾರಣ ಕೋಪಗೊಳ್ಳುವಿರಿ. ಎಷ್ಟೇ ಕೂಗಾಡಿದರೂ ನಿಮ್ಮ ಕೋಪ ಕೆಲಸಕ್ಕೆ ಬಾರದ ವಿಷಯ. ನೀವೇ ನಿಮ್ಮ ಕೋಪ ನಿಯಂತ್ರಿಸಿಕೊಳ್ಳಿ. ಇದರಿಂದ ಒಳಿತಾಗುವುದು. ಅದೃಷ್ಟ ಸಂಖ್ಯೆ:6
ಸಿಂಹ :ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಭಯಪಡದೆ ಇಂತಹ ಜನರನ್ನು ದೂರ ಇಡುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದು. ಕೆಲವು ದಿನಗಳಿಂದ ಬರಲಿಲ್ಲವಲ್ಲ ಎಂದು ತಿಳಿದುಕೊಂಡ ಹಣದ ಬಾಬ್ತನ್ನು ನಿರಾಯಾಸವಾಗಿ ಸ್ವೀಕರಿಸುವಿರಿ. ಇದರಿಂದ ನೀವು ಮಾಡಿದ ಸಾಲದ ತೀರುವಳಿಗೆ ಸಹಾಯವಾಗುವುದು. ಮಕ್ಕಳ ಮೂಲಕವಾಗಿ ಹೊಸ ಆಸ್ತಿ, ನಿವೇಶನ ಇತ್ಯಾದಿ ಹೊಂದಲು ಕಾಲ ಕೂಡಿ ಬರುವುದು. ಇದರಿಂದ ಮನೆಯ ಸದಸ್ಯರು ಹರ್ಷಿತರಾಗುವರು. ಗೆಳೆಯರು ಇಲ್ಲವೆ ಆತ್ಮೀಯರು ನಿಮಗೆ ಸಹಾಯಹಸ್ತ ನೀಡುವರು. ಅದೃಷ್ಟ ಸಂಖ್ಯೆ:4
ಕನ್ಯಾ: ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಈ ದಿನ ನಿಮಗೆ ಅನುಕೂಲವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ ಮತ್ತು ನಿಮ್ಮ ಮನಸ್ಸಿಗೆ ಒಪ್ಪುವ ವಾಹನವನ್ನು ಖರೀದಿ ಮಾಡುವಿರಿ. ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲತೆಯನ್ನು ಹೊಂದುವುದು. ಹಣಕಾಸಿನ ವಿಷಯದಲ್ಲಿ ಚಾಣಾಕ್ಷ ಮತಿಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿ.ನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು. ಅದೃಷ್ಟ ಸಂಖ್ಯೆ:6
ತುಲಾ :ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷವನ್ನುಂಟು ಮಾಡುವುದು. ಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದೆ ಇರುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಬಡವರಿಗೆ ಆಹಾರವನ್ನು ನೀಡಿ.ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವೊಂದು ಇಂದಿನ ಶ್ರಮದಿಂದಾಗಿ ಸುಖಾಂತ್ಯ ಕಾಣುವುದು. ಹಿರಿಯರ ಆಶೀರ್ವಾದ ಪಡೆದು ಕಾರ್ಯವನ್ನು ಆರಂಭಿಸಿ ದಿನದ ಅಂತ್ಯದ ವೇಳೆಯಲ್ಲಿ ಸಿಹಿ ಸುದ್ದಿ ಕೇಳುವಿರಿ. ಅದೃಷ್ಟ ಸಂಖ್ಯೆ:4
ವೃಶ್ಚಿಕ :ವೃತ್ತಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ಗಳಿಕೆಯು ಲಭ್ಯವಾಗಲಿದೆ. ಹೊಸ ವಸ್ತುಗಳನ್ನು ಖರೀದಿ ಮಾಡಲು ನೂತನ ಅವಕಾಶ ಕೂಡಿ ಬರುವುದು.ನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಗಳಿವೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕಾರ್ಯ ಮಾಡಿಸಿಕೊಳ್ಳುವಿರಿ. ಕಚೇರಿಯಲ್ಲಿನ ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ನಿಮ್ಮ ನಿರೀಕ್ಷೆಗೆ ಸರಿಹೊಂದುವ ಬಾಳಸಂಗಾತಿಯ ಆಯ್ಕೆಯ ಬಗೆಗೆ ಸಾಫಲ್ಯತೆ ಪಡೆಯಲು ಅವಕಾಶಗಳಿವೆ. ಹೆಚ್ಚಿನ ಲಾಭಾಂಶ ಪಡೆಯಲು ಆಂಜನೇಯ ಸ್ತೋತ್ರ ಪಠಿಸಿ. ಅದೃಷ್ಟ ಸಂಖ್ಯೆ:9
ಧನುಸ್ಸು :ಧೈರ್ಯ ಸಾಹಸ ಪ್ರವೃತ್ತಿಯವರಾದ ನೀವು ಮುನ್ನುಗ್ಗುವುದರಲ್ಲಿ ಹಿಂದೆ ಬೀಳಬೇಡಿ. ಹಾಗಂತ ಆತುರದ ನಿರ್ಧಾರ ಸೂಕ್ತವಲ್ಲ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು.ನಕಾರಾತ್ಮಕ ಧೋರಣೆಗಳನ್ನು ಕೈಬಿಡಿ. ಉತ್ತಮ ಜನರಿಂದ ನಿಮಗೆ ಬೆಂಬಲ ದೊರೆಯುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮಕ್ಕಳ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುವುದು.ದೂರದ ಊರಿನ ಪ್ರವಾಸ ದಿಢೀರಾಗಿ ನಿರ್ಧಾರವಾಗುವುದು. ಅದಕ್ಕಾಗಿ ತಯಾರಿ ಕೂಡಾ ಮಾಡಿಕೊಳ್ಳಬೇಕಾಗುವುದು. ಕುಲದೇವರ ಪ್ರಾರ್ಥನೆಯಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಅದೃಷ್ಟ ಸಂಖ್ಯೆ:6
ಮಕರ :ಮಾತೇ ಮುತ್ತು ಮಾತೇ ಶತ್ರು. ಹಾಗಾಗಿ ಬೇಡದ ಮಾತುಗಳನ್ನು ಮಾತನಾಡಿ ಸುಮ್ಮನೆ ಕಿರಿಕಿರಿಗೆ ಸಿಕ್ಕಿಹಾಕಿಕೊಳ್ಳದಿರಿ. ಕ್ಲಿಷ್ಟ ಸನ್ನಿವೇಶಗಳನ್ನು ಜಾಣ್ಮೆಯಿಂದ ಎದುರಿಸುವುದು ಒಳ್ಳೆಯದು. ಅಡಿಕೆ ಕದ್ದಮಾನ ಆನೆ ಕೊಟ್ಟರೂ ಹೋಗದು ಎಂಬಂತೆ ನೀವು ತಮಾಷೆಗಾಗಿ ಮಾತಾಡಿದ ಒಂದು ಪ್ರಸಂಗ ನಿಮ್ಮ ಗೌರವಕ್ಕೆ ಕುಂದು ತರಬಹುದು. ಹಿರಿಯರಾಗಿ ಹಿರಿತನದಿಂದ ಬಾಳ್ವೆ ನಡೆಸಿ.ಕಾರ್ಯ ಸಾಧನೆಗೆ ನಿಮ್ಮ ತಾಳ್ಮೆಯೆ ಉತ್ತಮ ಅಡಿಪಾಯ. ಹಾಗಾಗಿ ಎದುರಾಗುವ ಸಮಸ್ಯೆಗಳನ್ನು ನಗು ಮುಖದಿಂದಲೇ ಸ್ವೀಕರಿಸಿ. ಕಷ್ಟಗಳು ಮನುಜನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುವುವು. ಅದೃಷ್ಟ ಸಂಖ್ಯೆ:1
ಕುಂಭ :ಆರೋಗ್ಯವೇ ಭಾಗ್ಯ ಎಂಬುದನ್ನು ನೆನೆಪಿನಲ್ಲಿಟ್ಟುಕೊಂಡರೆ ಸಾಲದು. ಅದಕ್ಕಾಗಿ ಸೂಕ್ತ ಯೋಗ , ಪ್ರಾಣಾಯಾಮಗಳನ್ನು ಮಾಡುವ ಮೂಲಕ ದೇಹ ದಂಡಿಸಿದರೆ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.ಖರ್ಚಿನ ದಾರಿಗಾಗಿ ನೂರೆಂಟು ರೀತಿಯ ಪಟ್ಟಿ ನಿಮ್ಮ ಎದುರಿಗೆ ಬಂದು ನಿಲ್ಲುವುದು. ಅತ್ಯಂತ ತುರ್ತು ಸಮಯದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.ಮನೆ ಒಳಗಿನ ಅಸಮಾಧಾನದ ಹೊಗೆ ನಿಮಗೆ ಉಸಿರು ಕಟ್ಟಿಸುವ ವಾತಾವರಣವನ್ನು ಸೃಷ್ಟಿಸಿದೆ. ಆದಷ್ಟು ದೇವತಾ ಕ್ಷೇತ್ರಗಳಿಗೆ ಹೋಗಿ ಬನ್ನಿ. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ. ಅದೃಷ್ಟ ಸಂಖ್ಯೆ:2
ಮೀನ :ವಿಶೇಷ ಯೋಜನೆಗಳನ್ನು ಕೈಗೊಂಡು ಅದರಲ್ಲಿ ಯಶಸ್ಸು ಹೊಂದುವ ಕನಸು ಕಾಣುವಿರಿ. ನಿಮ್ಮ ಕನಸು ನನಸಾಗುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಮತ್ತು ಆಂಜನೇಯ ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ. ನಿಮಗೆ ನೂರಾರು ಕಡೆಗಳಿಂದ ಪ್ರಶಂಸೆಗಳು ಬರುವ ಸಾಧ್ಯತೆ ಅಧಿಕ ವಾಗಿರುವುದು. ನೀವು ಮಂಡಿಸಿದ ಪ್ರಬಂಧ ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆಯುವುದರಿಂದ ಸಂತಸದ ಕ್ಷ ಣಗಳನ್ನು ಅನುಭವಿಸುವಿರಿ.ಮಕ್ಕಳೇ ಮಾಣಿಕ್ಯ ಎಂದರು ಹಿರಿಯರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳೇ ಪೀಡಕರು ಆಗಿ ಮನಸ್ಸಿಗೆ ಘಾಸಿಯನ್ನುಂಟು ಮಾಡುವರು. ಹಾಗಾಗಿ ಭಗವಂತನನ್ನು ಅನನ್ಯ ಭಕ್ತಿಯಿಂದ ಜಪಿಸಿ ಮಾನಸಿಕ ನೆಮ್ಮದಿ ಪಡೆಯಿರಿ. ಅದೃಷ್ಟ ಸಂಖ್ಯೆ:1