ಮೇಷ: ಸಮಾಧಾನ ಚಿತ್ತ ಇರಲಿ. ಮನೆಯಲ್ಲಿ ಶಾಂತಿ ಕದಡದ ಹಾಗೆ ನಿಗಾ ವಹಿಸಿ. ಆರ್ಥಿಕ ಪರಿಸ್ಥಿತಿಗೆ ತೊಂದರೆಯಿಲ್ಲ. ಗುರು ಹಿರಿಯರ ಅಣತಿಯಂತೆ ನಡೆದುಕೊಂಡಲ್ಲಿ ಒಳಿತಾಗುವುದು.ಬಂಧು ಬಾಂಧವರು ಇಲ್ಲವೇ ಹತ್ತಿರದವರಿಂದಲೇ ನೋವನ್ನು ಎದುರಿಸುವ ಸಂದರ್ಭ ಬರುವ ಸಾಧ್ಯತೆ ಇದೆ. ಆದರೆ ನಿರಾಸೆ ಬೇಡ. ನಿಮ್ಮ ಪಾಲಿನ ಕರ್ತವ್ಯವನ್ನು ನೀವು ನಿರ್ವಂಚನೆಯಿಂದ ಮಾಡಿ. ಅದೃಷ್ಟ ಸಂಖ್ಯೆ:2
ವೃಷಭ :ಅನೇಕ ರೀತಿಯ ಪ್ರಶಂಸೆಗಳು, ಕಾಣಿಕೆ, ಉಡುಗೊರೆಗಳನ್ನು ಪಡೆಯುವಂತಹ ಅಪರೂಪದ ಸಾಧನೆಯೊಂದು ಸದ್ಯವೇ ನಡೆಯಲಿದೆ. ಇದರಿಂದ ಹಿಗ್ಗದೆ ತಾಳ್ಮೆಯಿಂದ ಇರಿ. ಎಲ್ಲವೂ ಭಗವಂತನ ಲೀಲೆಯಂತೆ ನಡೆಯುವುದು. ಈಚಲುಮರದ ಕೆಳಗೆ ಮಜ್ಜಿಗೆ ಕುಡಿಯುವಂತಹ ಸಾಹಸವನ್ನು ಮಾಡಬೇಡಿ. ಅದರಿಂದ ತೊಂದರೆ ಎದುರಾಗುವುದು ಮತ್ತು ಅಪವಾದವೂ ನಿಮ್ಮನ್ನು ಸುತ್ತಿಕೊಳ್ಳಲಿದೆ. ಆದಷ್ಟು ಮನೋನಿಯಾಮಕ ರುದ್ರದೇವರನ್ನು ಭಜಿಸಿ.ಅದೃಷ್ಟ ಸಂಖ್ಯೆ:1
ಮಿಥುನ :ಹತ್ತಿರದ ಸಂಬಂಧಿಗಳನ್ನು ನೀವು ದೂರ ಇರಿಸಿದಷ್ಟೂ ಮತ್ತೆ ಹತ್ತಿರಕ್ಕೆ ಬರಲಿದ್ದಾರೆ. ಅವರನ್ನು ಜಾಣ್ಮೆಯ ಮಾತಿನಿಂದ ದೂರ ಇಡಿ. ಇದರಿಂದ ನಿಮಗೂ ನೆಮ್ಮದಿ ಅವರಿಗೂ ನೆಮ್ಮದಿ ದೊರೆಯುವುದು.ನಿಮ್ಮ ಜ್ಞಾನದ ಶಿಖರ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯವನ್ನು ಅರಿತು ಮುಂದುವರೆಯಿರಿ. ಇದರಿಂದ ಯಶಸ್ಸು ಹೊಂದಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡುವುದು. ಅದೃಷ್ಟ ಸಂಖ್ಯೆ:2
ಕಟಕ :ಮನೆಯ ಮತ್ತು ಹೊರಗಿನ ವ್ಯಾಜ್ಯಗಳಲ್ಲಿ ಹಣ್ಣಾಗಿದ್ದೀರಿ. ಹೀಗಾಗಿ ಕೆಲವು ಹಿರಿಯರ ಮಧ್ಯಸ್ಥಿಕೆಯಿಂದ ಹೊಂದಾಣಿಕೆ ಮಾಡಿಕೊಳ್ಳಲು ಇದು ಸೂಕ್ತ ಕಾಲ. ನಿಮ್ಮದೆ ಸರಿ ಎಂದು ಹಠಕ್ಕೆ ಬಿದ್ದು ವಾದ ಮಾಡದಿರಿ. ಇದರಿಂದ ತೊಂದರೆ ಎದುರಾಗುವುದು.ಆಪತ್ ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮ್ಮ ಹಳೆಯ ಗೆಳೆಯನೊಬ್ಬ ಅದ್ಭುತವಾದ ಬೆಂಬಲವನ್ನು ಒದಗಿಸಿ ಮನದ ಸಂತೋಷವನ್ನು ಹೆಚ್ಚಿಸುವನು ಮತ್ತು ಬಹುದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯವು ಚಾಲನೆಗೊಳ್ಳುವುದು. ಅದೃಷ್ಟ ಸಂಖ್ಯೆ:4
ಸಿಂಹ: ವಿದೇಶ ಪ್ರವಾಸವನ್ನು ಮಾಡಬೇಕೆಂದು ಚಿಂತಿಸದೆ ಇದ್ದ ನಿಮಗೆ ದಿಢೀರನೇ ಬರುವ ಆಮಂತ್ರಣವನ್ನು ಒಪ್ಪಿಕೊಳ್ಳಲು ಹಿಂಜರಿಕೆ ಆಗುವುದು. ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ಭಗವಂತ ಒಳಿತನ್ನು ಮಾಡುವನು.ಭ್ರಮೆಯ ಕಾರಣದಿಂದ ಹಗ್ಗ ಹಾವಿನ ಹಾಗೆ ಭಯ ಹುಟ್ಟಿಸುತ್ತಿದೆ. ಇದರಿಂದ ಅನಗತ್ಯ ಗೊಂದಲ ಉಂಟಾಗುವುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಅದೃಷ್ಟ ಸಂಖ್ಯೆ:6
ಕನ್ಯಾ: ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಮನೋಕಾಮನೆಗಳು ಗುರುವಿನ ಅನುಗ್ರಹದಿಂದ ಅತಿ ಶೀಘ್ರದಲ್ಲಿಯೇ ನೆರವೇರುವವು. ನಿಮ್ಮ ಈ ಪ್ರಗತಿ ಕಂಡು ಇತರರು ಅಸೂಯೆ ಪಡುವರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಪವಾದ ತಪ್ಪಿದ್ದಲ್ಲ. ಮೇಲಾಗಿ ನಿಮ್ಮ ಗ್ರಹಗತಿಗಳು ಅಷ್ಟೇನೂ ಶುಭ ಫಲದಾಯಕವಾಗಿಲ್ಲ. ತಾಳ್ಮೆಯಿಂದ ಇರಿ. ಎಲ್ಲವೂ ಈಶನ ಇಚ್ಛೆಯಂತೆ ಜರುಗುವುದು. ಅದೃಷ್ಟ ಸಂಖ್ಯೆ:4
ತುಲಾ: ಜಯ ಇರುವವರೆಗೂ ಭಯವಿಲ್ಲ. ಅಂತೆಯೇ ಗ್ರಹಸ್ಥಿತಿಗಳು ಉತ್ತಮ ವಾಗಿರುವುದರಿಂದ ಪ್ರತಿ ದಿನವೂ ಸಂತೋಷದ ದಿನವೇ. ಮಕ್ಕಳು ಮತ್ತು ಮಡದಿಯೊಂದಿಗೆ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮಕ್ಕಳ ಮೊಂಡಾಟ ನಿಮಗೆ ಕೋಪ ತರಿಸುವುದು. ಮಕ್ಕಳ ಶಾಲಾ ಪ್ರಗತಿಯ ನ್ಯೂನತೆ ಸರಿಪಡಿಸಲು ಶಾಲೆಯಿಂದ ನಿಮಗೆ ನೋಟೀಸ್ ಬರುವ ಸಾಧ್ಯತೆ ಇದೆ. ಈ ವಿಚಾರವಾಗಿ ಮಕ್ಕಳನ್ನು ಶಿಕ್ಷಿಸದೆ ಪ್ರೀತಿಯಿಂದ ಬುದ್ಧಿ ಹೇಳಿ. ಅದೃಷ್ಟ ಸಂಖ್ಯೆ:8
ವೃಶ್ಚಿಕ :ಹೊಸ ಕಾರ್ಯಕ್ರಮದ ಅಂತಿಮ ಪಟ್ಟಿಯನ್ನು ನಿರ್ಣಯಿಸಲು ಕಾಲಾವಕಾಶ ತೆಗೆದುಕೊಳ್ಳಿ. ನಿಮ್ಮಿಂದ ಶಿಸ್ತುಬದ್ಧ ಕಾರ್ಯಕ್ರಮವನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಅವರಿಗೆ ಭ್ರಮ ನಿರಸನ ಮಾಡಬೇಡಿ.ಬಂಧು ಒಬ್ಬರ ಅನಾರೋಗ್ಯ ನಿಮಿತ್ತ ಆಸ್ಪತ್ರೆಗಳಿಗೆ ಓಡಾಟ, ಗಡಿಬಿಡಿ ಜಾಸ್ತಿಯಾಗಲಿದೆ. ಆದರೆ ಎಲ್ಲದಕ್ಕೂ ಸಮಯದ ಕೊರತೆ ಎದ್ದು ಕಾಣುವುದು. ಇತರೆ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ರೋಗಿಯ ಆರೈಕೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಅದೃಷ್ಟ ಸಂಖ್ಯೆ:6
ಧನುಸ್ಸು: ನಿಮ್ಮ ಜವಾಬ್ದಾರಿಗಳು ಪ್ರತಿದಿನ ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದೆನಿಸುವುದು. ಯಾವುದೇ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡರೂ ಸಹಧರ್ಮಿಣಿ ಸಲಹೆ ಪಡೆಯಿರಿ. ಅದರಿಂದ ನಿಮ್ಮ ಕಾರ್ಯ ಯೋಜನೆಗಳು ಯಶಸ್ಸಿನತ್ತ ಸಾಗುವವು. ದೂರದ ಪ್ರಯಾಣವೊಂದಕ್ಕೆ ರೆಡಿ ಆಗುವಿರಿ. ಅದೃಷ್ಟ ಸಂಖ್ಯೆ:4
ಮಕರ :ಪದೇ ಪದೆ ವಿರೋಧಿಗಳಿಂದ ಬರುತ್ತಿರುವ ಕಿರಿಕಿರಿಗಳು ಗೆಳೆಯನ ಬೆಂಬಲದಿಂದ ಪರಿಹಾರಗೊಳ್ಳುವವು. ಈ ಸಂಕಷ್ಟಗಳಿಗೆ ಮನೆಯ ವಾಸ್ತುವೇ ಕಾರಣ ಎಂದು ಮನೆ ಬದಲಾಯಿಸಲು ಮನಸ್ಸು ಮಾಡುವುದು ಸೂಕ್ತವಲ್ಲ. ಒಳ್ಳೆಯತನ ಪ್ರದರ್ಶಿಸುವ ನಿಮ್ಮ ವಿನಯ, ಯಶಸ್ಸಿನ ದಾರಿಯನ್ನು ತೋರಿಸಿಕೊಡಲಿದೆ. ಆದಾಯಕ್ಕೆ ತಕ್ಕಷ್ಟೆ ಖರ್ಚು ಬರುವುದರಿಂದ ಹಣಕಾಸಿನ ವಿಷಯದಲ್ಲಿ ಕೈಹಿಡಿತ ಮಾಡುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:6
ಕುಂಭ: ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರರ ಸಲಹೆ ಪಡೆಯುವುದು ಅವಮಾನವಲ್ಲ.ಗೆಳೆಯರು ಬೆಂಬಲದ ಭರವಸೆ ಕೊಟ್ಟು ಹಿಂಜರಿಯುತ್ತಾರೆ. ಈ ಬಗ್ಗೆ ನಿರಾಶರಾಗದಿರಿ. ಸರ್ವ ವಿಘ್ನ ನಿವಾರಕನಾದ ಗಣೇಶನನ್ನು ಪ್ರಾರ್ಥಿಸಿ. ಸಂಜೆ ಬಡವರಿಗೆ ಆಹಾರ ನೀಡಿ. ಅದೃಷ್ಟ ಸಂಖ್ಯೆ:2
ಮೀನ: ಬಹು ಮುಖ್ಯವಾದ ಕಾಗದ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಚೇರಿಯಲ್ಲಿ ಮತ್ತು ಮನೆಯಲ್ಲಿ ನಿಮ್ಮ ಮಾತಿಗೆ ಎಲ್ಲರೂ ಬೆಲೆ ಕೊಡುವರು. ಮೇಲಧಿಕಾರಿಗಳ ಕೃಪೆಗೆ ಪಾತ್ರರಾಗುವಿರಿ. ನಿಮ್ಮ ಕಾರ್ಯವೈಖರಿಯನ್ನು ಯಾರೂ ಪತ್ತೆ ಮಾಡಲು ಸಾಧ್ಯವಿಲ್ಲ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಗುರುತು ಹಿಡಿಯಲು ಕಷ್ಟ ಎಂಬಂತೆ ನಿಮ್ಮ ಮನಸ್ಸು ವಿಚಿತ್ರವಾದುದು. ಹಾಗಾಗಿ ಕೆಲವರು ನಿಮ್ಮನ್ನು ತಪ್ಪಾಗಿ ಅಥೈರ್‍ಸಿಕೊಳ್ಳುವರು. ಅದೃಷ್ಟ ಸಂಖ್ಯೆ:1