ಮೇಷ: ಯಾವುದೇ ರೀತಿಯ ಮಹತ್ವಾಕಾಂಕ್ಷೆಗಳು ಸೂಕ್ತವಾದ ದಾರಿಯಲ್ಲಿ ಇರಿಸುವ ಹೆಜ್ಜೆಗಳಿಂದ ಮಾತ್ರ ಕೈಗೂಡಲಿದೆ. ಕುಲದೇವತಾ ಅನುಗ್ರಹವನ್ನು ವಿಶೇಷವಾಗಿ ಪಡೆಯಿರಿ. ಆಂಜನೇಯ ಸ್ತೋತ್ರ ಪಠಿಸಿ.ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ ಮತ್ತು ನಿಮ್ಮ ಬುದ್ಧಿ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.ವೃತ್ತಿಯಲ್ಲಿನ ಒಂದು ಸಣ್ಣ ತಪ್ಪು ನಿಮಗೆ ಬೇಸರ ಉಂಟುಮಾಡುವುದು. ಇದರಿಂದಾಗಿ ನಿಮ್ಮ ಮನೋಕಾಮನೆಗಳು ಪೂರೈಸಿಕೊಳ್ಳಲು ಪುನಃ ಕಾಲಾವಕಾಶ ಬೇಕಾಗುವುದು.
ವೃಷಭ :ಸತ್ಯವಂತರಿಗಿದು ಕಾಲವಲ್ಲ ಎಂದರು ಹಿರಿಯರು. ಅಂತೆಯೇ ನೀವು ಎಷ್ಟೇ ಪ್ರಾಮಾಣಿಕವಾಗಿ ವರ್ತಿಸಿದರೂ ಮಡದಿ ಮಕ್ಕಳೇ ನಿಮ್ಮ ಬಗ್ಗೆ ಅಪನಂಬಿಕೆ ತೋರುವರು. ಶಿವನ ಆರಾಧನೆ ಮಾಡಿ.ಬಾಳಸಂಗಾತಿಯ ವಿಚಾರದಲ್ಲಿ ಸ್ವಲ್ಪ ಹೆಚ್ಚಿನ ಮುತುವರ್ಜಿ ತೋರಬೇಕಾಗುವುದು. ಇದರಿಂದ ಬರಬಹುದಾದ ಬಿಕ್ಕಟ್ಟು ದೂರವಾಗಲಿದೆ. ನೆರೆಹೊರೆಯವರೊಡನೆ ಸ್ನೇಹದಿಂದ ವರ್ತಿಸಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.ದೂರದ ಊರಿನ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಆ ಬಗ್ಗೆ ನಿರುತ್ಸಾಹ ತೋರದೆ ಉತ್ಸಾಹ ಭರಿತರಾಗಿ ಒಪ್ಪಿಗೆ ಸೂಚಿಸಿ. ಪ್ರವಾಸವು ನಿಮಗೆ ಹೊಸ ಹುರುಪನ್ನು ತಂದು ಕೊಡುತ್ತದೆ. ಅದೃಷ್ಟ ಸಂಖ್ಯೆ:1
ಮಿಥುನ :ಮಹತ್ವದ ಕೆಲಸವನ್ನು ಮಾಡುವ ಮುನ್ನ ಕುಲದೇವತೆಯನ್ನು ಪ್ರಾರ್ಥಿಸಿರಿ. ಕುಲದೇವರ ಅನುಗ್ರಹದಿಂದ ಒಳಿತಾಗುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಆಗುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ವಿರುದ್ಧ ಲಿಂಗಿಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲಸಲ್ಲದ ಆರೋಪಗಳಿಂದ ಅವರು ನಿಮ್ಮನ್ನು ದಣಿಸುವ ಸಾಧ್ಯತೆ ಇರುವುದು. ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು. ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸಿದ ತೃಪ್ತಿಯ ಸಂತೋಷದಲ್ಲಿರುವ ನಿಮಗೆ ನಿಮ್ಮ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದಂತೆ ಕೆಲವರು ಟೀಕೆ ಮಾಡುವರು. ಇದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗುವುದು. ಅದೃಷ್ಟ ಸಂಖ್ಯೆ:2
ಕಟಕ: ಮುನ್ನುಗ್ಗಿ ಹೋಗುವ ನಿಮ್ಮ ಉತ್ಸುಕತೆಯನ್ನು ವೃದ್ಧಿಸಿಕೊಳ್ಳಿ. ಒಳಿತಾಗುವ ಹೊಸದಾದ ಬಾಗಿಲು ತೆರೆಯಲಿದೆ. ಈ ದಿನ ಬರುವ ಉತ್ತಮ ಅವಕಾಶಗಳನ್ನು ನಿರಾಕರಿಸದೆ ಒಪ್ಪಿಕೊಳ್ಳಿ. ಇದರಿಂದ ಒಳಿತಾಗುವುದು. ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರು ಉಳಿತಾಯ ಮಾಡಿ.ಯಾವ ಕೆಲಸವನ್ನು ಮೊದಲು ಮಾಡಬೇಕು ಎಂದು ಮಾನಸಿಕ ಗೊಂದಲದಲ್ಲಿ ನರಳುವಿರಿ. ಮಾಡಬೇಕಾಗಿರುವ ಕೆಲಸಗಳ ಪಟ್ಟಿ ತಯಾರಿಸಿ. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡುತ್ತಾ ಬನ್ನಿ ಒಳಿತಾಗುವುದು. ಅದೃಷ್ಟ ಸಂಖ್ಯೆ:4
ಸಿಂಹ :ಪ್ರಾಮಾಣಿಕತೆಯಿಂದ ಹೆಜ್ಜೆ ಇರಿಸಿದ ಪರಿಣಾಮವಾಗಿ ಎಲ್ಲೆಡೆ ಯಶಸ್ಸು ನಿಮ್ಮದಾಗುವುದು. ಕೆಲ ಗ್ರಹಗಳ ಶುಭ ಸಂಚಾರದಿಂದ ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವುದು. ಬಾಕಿ ಇರುವ ಕೆಲಸ ಕಾರ್ಯಗಳನ್ನು ಬೇಗನೆ ಮುಗಿಸುವುದು ಒಳ್ಳೆಯದು ಮತ್ತು ಕಚೇರಿಗೆ ಸಂಬಂಧಪಟ್ಟ ದಾಖಲೆಗಳನ್ನು ಒಪ್ಪವಾಗಿ ಜೋಡಿಸುವುದು ಒಳ್ಳೆಯದು. ಇದರಿಂದ ಅನವಶ್ಯಕ ಟೀಕೆಗಳಿಂದ ಮುಕ್ತರಾಗುವಿರಿ. ಎಲ್ಲ ರೀತಿಯ ಮಾನಸಿಕ ದುಗುಡಗಳು ನಿಮ್ಮನ್ನು ಆವರಿಸುವುದು ಮತ್ತು ಜೀವನದಲ್ಲಿ ನಿರುತ್ಸಾಹ ಮೂಡುವುದು. ಆದರೆ ಗುರು ಹಿರಿಯರ ಆಶೀರ್ವಾದ ಪಡೆದಲ್ಲಿ ಮಾನಸಿಕ ದುಗುಡಕ್ಕೆ ಪರಿಹಾರ ಸಿಗುವುದು. ಅದೃಷ್ಟ ಸಂಖ್ಯೆ:5
ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ವಿಚಾರದ ಬಗೆಗೆ ವ್ಯಾಕುಲತೆ ತಲೆದೋರುವ ಸಾಧ್ಯತೆ ಇರುವುದು. ನೀವು ಯೋಚಿಸಿದ ರೀತಿಯಲ್ಲಿ ಮಕ್ಕಳು ಅಂಕಗಳನ್ನು ಪಡೆಯುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಆಂಜನೇಯ ಸ್ತೋತ್ರ ಪಠಿಸಿ ಒಳಿತಾಗುವುದು. ದೂರದ ಊರಿನಿಂದ ಬರುವ ಅತಿಥಿಯೊಬ್ಬರು ನಿಮ್ಮ ವ್ಯಾಪಾರ, ವಹಿವಾಟಿನ ವಿಷಯದಲ್ಲಿ ಉತ್ತಮ ಸಲಹೆ ನೀಡುವರು. ಇದರಿಂದ ನಿಮಗೆ ಹೆಚ್ಚಿನ ಲಾಭವಾಗುವುದು. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು. ಆಪತ್ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮಗೆ ಸಹಾಯ ಸಹಕಾರ ನೀಡುವವನೇ ನಿಮ್ಮ ನಿಜವಾದ ಮಿತ್ರ ಅಥವಾ ಹಿತೈಷಿ. ಆತನ ಮಾತನ್ನು ಆಲಿಸಿ ಸಂತೋಷ ಅನುಭವಿಸಿ. ಅದೃಷ್ಟ ಸಂಖ್ಯೆ:6
ತುಲಾ: ವಿಶೇಷವಾದದ್ದು ನಿಮಗೆ ಲಭ್ಯವಾಗುವುದು. ಅದಕ್ಕಾಗಿ ನೀವು ಪಟ್ಟ ಅಪಾರವಾದ ಶ್ರಮವು ನಿಮಗೆ ಶುಭಫಲವನ್ನು ಕೊಡುವುದು. ಆದಾಗ್ಯೂ ಈ ವಿಷಯದಲ್ಲಿ ಅಲ್ಪ ಕಿರಿಕಿರಿ ಇರುತ್ತದೆ. ಮುಂದಿನ ದಿನಗಳಲ್ಲಿ ಒಳಿತಾಗುವುದು.ಯಾವುದೇ ರೀತಿಯ ಹಸ್ತಕ್ಷೇಪಗಳನ್ನು ಸಹಿಸದಿರಿ. ಆದರೂ ಬಂಧುಮಿತ್ರರ ಪ್ರಾಮಾಣಿಕ ಬೆಂಬಲದಿಂದ ಒಳಿತಾಗುವುದು. ಭಗವಂತನನ್ನು ಸ್ಮರಿಸಿ ಕಾರ್ಯೋನ್ಮುಖರಾಗಿ. ಒಳಿತಿಗೆ ದಾರಿ ದೊರೆಯುವುದು. ನಿಮ್ಮ ನಿರೀಕ್ಷೆಯನ್ನು ಮೀರಿ ಹಲವು ಹೊಸತನಗಳನ್ನು ರೂಪಿಸಿಕೊಳ್ಳಲು ಸಕಾಲವಾಗಿದೆ. ಇದಕ್ಕೆ ನಿಮ್ಮ ಬಂಧುಗಳು, ಸ್ನೇಹಿತರು ಸಹಾಯ ಹಸ್ತ ನೀಡುವರು. ಆದರೆ ಅದಕ್ಕಾಗಿ ವಿಶೇಷ ಖರ್ಚು ಮಾಡಬೇಕಾಗುವುದು.9845743807 ಅದೃಷ್ಟ ಸಂಖ್ಯೆ:5
ವೃಶ್ಚಿಕ: ಸ್ನೇಹಿತರೇ ನಿಮ್ಮನ್ನು ಯಾಮಾರಿಸುವ ಸಾಧ್ಯತೆ ಇದ್ದು ಇದಕ್ಕೆ ವಿಚಲಿತರಾಗದಿರಿ. ಅದೃಷ್ಟವು ನಿಮ್ಮ ಬೆನ್ನಿಗಿದೆ. ಮಕ್ಕಳ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಸಂಗಾತಿಯ ಬೇಕು ಬೇಡಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿ ಒಳಿತಾಗುವುದು. ಹಣ ದ್ವಿಗುಣಗೊಳಿಸುವ ಮೋಸದ ಜಾಲ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚಾಗಿದೆ. ಆದಷ್ಟು ವ್ಯವಧಾನ ಇರಲಿ. ಯಾರಿಗೂ ಹಣಕಾಸಿನ ವಿಷಯವನ್ನು ತಿಳಿಸದಿರಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ.ನಿಮ್ಮ ಮನಸ್ಸೆ ನಿಮಗೆ ವಿರೋಧವನ್ನುಂಟು ಮಾಡುವುದು. ಹಾಗಾಗಿ ಒಲ್ಲದ ಮನಸ್ಸಿನಿಂದ ಕಾರ್ಯಗಳನ್ನು ಮಾಡಲು ಹೋಗಿ ಸಿಕ್ಕಿಹಾಕಿಕೊಳ್ಳುವಿರಿ. ಆದಷ್ಟು ಕುಲದೇವತೆಯನ್ನು ಪ್ರಾರ್ಥಿಸಿ. ಎಲ್ಲವೂ ಒಳಿತಾಗುವುದು. ಅದೃಷ್ಟ ಸಂಖ್ಯೆ:4
ಧನುಸ್ಸು: ಶತ್ರುವು ಹೈರಾಣಾಗಿ ಶರಣಾಗಿದ್ದಾನೆಂದು ಸರ್ರನೆ ನಿರ್ಧಾರಕ್ಕೆ ಬಂದು ಬಿಡಬೇಡಿ. ಬೂದಿಮುಚ್ಚಿದ ಕೆಂಡದಂತೆ ಆತನು ಉತ್ತಮ ಸಮಯಕ್ಕಾಗಿ ಕಾದು ಕುಳಿತಿರುವನು. ನಿಮ್ಮ ಬಿಗಿಯನ್ನು ಸಡಿಲಾಗದಂತೆ ನೋಡಿಕೊಳ್ಳಿ.ರಾಜಕಾರಣಿಗಳಿಗೆ ಹೊಸದಾದ ಭರವಸೆ ಸಿಗುವಂತೆ ಹಲವು ಮೂಲಗಳಿಂದ ಶಕ್ತಿ ಸಂವರ್ಧನೆಯು ಉಂಟಾಗುವುದು. ಈಗ ಬರಲಿರುವ ಅವಕಾಶವನ್ನು ಬಾಚಿಕೊಂಡಲ್ಲಿ ಯಶಸ್ಸಿನತ್ತ ನೀವು ಸಾಗುವಿರಿ.ಅನ್ಯರು ಮಾಡಿರದ ಕೆಲಸವನ್ನು ಮಾಡುವ ಅಥವಾ ಮಾಡಿಸಿ ತೋರಿಸುವ ಜವಾಬ್ದಾರಿ ನಿಮ್ಮ ಮೈಮೇಲೆ ಬರುವುದು. ಅದಕ್ಕಾಗಿ ಗಾಬರಿ ಪಡಬೇಡಿ. ದೈವಕೃಪೆ ನಿಮ್ಮ ಮೇಲೆ ಇದ್ದು ಅದರಲ್ಲಿ ಜಯಶೀಲರಾಗುವಿರಿ. ಅದೃಷ್ಟ ಸಂಖ್ಯೆ:2
ಮಕರ :ನಿಗೂಢವಾದ ಸಕಾರಾತ್ಮಕ ಶಕ್ತಿಯೊಂದು ನಿಮ್ಮ ಭವಿಷ್ಯವನ್ನು ರೂಪಿಸುವಂತಹ ವಿಚಾರವು ಗಮನಕ್ಕೆ ಬರಬಹುದು. ನಿಮ್ಮ ಆರಾಧ್ಯ ದೈವವನ್ನು ಮನಸಾ ಪ್ರಾರ್ಥಿಸಿ. ನಿಮಗೆ ಶುಭ ಸುದ್ದಿ ದೊರೆಯಲಿದೆ.ನಿಮ್ಮ ಮನೆಯಲ್ಲಿನ ಶುಭ ಕಾರ್ಯವೊಂದಕ್ಕೆ ಅವಕಾಶ ಕೂಡಿಬರುವುದು. ಇದರಿಂದ ಇಷ್ಟಮಿತ್ರ ಬಂಧುಬಾಂಧವರು ಒಂದೆಡೆ ಸೇರುವರು. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು.ಅದೆಷ್ಟೋ ದಿನಗಳಿಂದ ಸಾಧಿಸಲು ಸಾಧ್ಯವಾಗಿರದ ವಿಚಾರವೊಂದಕ್ಕೆ ಮಕ್ಕಳ ಬೆಂಬಲ ಲಭಿಸಿ ಕಾರ್ಯ ಸಿದ್ಧಿಗೆ ದಾರಿ ಆಗುವುದು. ಪ್ರತಿಯೊಂದು ಕ್ಷ ಣಗಳನ್ನು ಆನಂದದಿಂದ ಅನುಭವಿಸುವಿರಿ. ಅದೃಷ್ಟ ಸಂಖ್ಯೆ:4
ಕುಂಭ :ನಿಗೂಢವಾದ ಸಕಾರಾತ್ಮಕ ಶಕ್ತಿಯೊಂದು ನಿಮ್ಮ ಭವಿಷ್ಯವನ್ನು ರೂಪಿಸುವಂತಹ ವಿಚಾರದಿಂದ ಪ್ರಭಾವಿತರಾಗುವಿರಿ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ತಾಳ್ಮೆ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ.ಆಸ್ತಿಗೆ ಸಂಬಂಧಿಸಿದ ವ್ಯಾಜ್ಯವೊಂದು ಹೊಸದಾದ ತಿರುವುಗಳನ್ನು ಪಡೆದುಕೊಳ್ಳಲಿದೆ. ಹಾಗಾಗಿ ನಿಮ್ಮ ಬಹು ನಿರೀಕ್ಷಿತ ಕನಸು ನನಸಾಗುವುದಿಲ್ಲ. ಮರಳಿ ಯತ್ನವ ಮಾಡಿ. ಅನುಕೂಲವಾಗುವುದು.ಉದ್ಯಮಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಶ್ಚಿತ ಕಾರ್ಯಕ್ಕೆ ಒತ್ತು ಕೊಡಿ. ಎರಡು ದೋಣಿಗಳ ಪ್ರಯಾಣ ಬೇಡ. ಕೆಲಸ ಕಾರ್ಯಗಳನ್ನು ಪ್ರಥಮ ಆದ್ಯತೆಯ ಮೇಲೆ ಹಮ್ಮಿಕೊಳ್ಳುವುದು ಒಳಿತು. ಅದೃಷ್ಟ ಸಂಖ್ಯೆ:2
ಮೀನ :ನ ಭೂತೋ ನ ಭವಿಷ್ಯತಿ ಎನ್ನುವ ಕಾರ್ಯ ಮಾಡಿ ತೋರಿಸುವಿರಿ. ಇದರಿಂದ ಗೆಲುವು ನಿಮ್ಮದೆ ಆಗಿದ್ದು ವಿಜಯಮಾಲೆ ನಿಮ್ಮ ಕೊರಳನ್ನು ಅಲಂಕರಿಸುವುದು. ಸಾಮಾಜಿಕ ಮನ್ನಣೆ ಜೊತೆಯಲ್ಲಿ ಹಣಕಾಸು ದೊರೆಯುವುದು.ಅವಶ್ಯವಾಗಿ ಮತ್ತು ಸೂಕ್ತ ಸಂದರ್ಭದಲ್ಲಿ ಸಿಗಬೇಕಾದ ಪದೋನ್ನತಿಯೊಂದು ನಿಮ್ಮನ್ನು ಅರಸಿ ಬರುವುದು. ಪದೋನ್ನತಿಯು ಬರುವುದು ಯೋಗವಾದರೆ ಅದನ್ನು ಉಳಿಸಿ ಬೆಳೆಸಿಕೊಳ್ಳುವುದು ಕ್ಷೇಮಕರವಾಗಿರುತ್ತದೆ. ಜೀವನದಲ್ಲಿ ಅನೇಕ ಜಂಜಡಗಳನ್ನು ಎದುರಿಸಿ ಹೈರಾಣ ಆಗಿದ್ದೀರಿ. ಈಗಿನ ಪರಿಸ್ಥಿತಿಯಿಂದ ಹೊರಬಂದರೆ ಸಾಕು ಎನ್ನುವ ಮಟ್ಟಿಗೆ ರೋಸಿಹೋಗಿದ್ದೀರಿ. ಅದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕತ್ತಲೆ ಕಳೆದು ಬೆಳಕು ಮೂಡುವುದು.