ಹೊನ್ನಾವರ: ಈ ಲೋಕಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿ ಕಾರ್ಯಕರ್ತರು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಹೊನ್ನಾವರದಲ್ಲಿ ಅವಲೋಕನಾ ಸಭೆ ನಡೆಯಿತು. ಕೇಂದ್ರ ಮಂತ್ರಿಗಳು ಹಾಗೂ ಬಿಜೆಪಿ ಅಭ್ಯರ್ಥಿಗಳು ಆಗಿದ್ದ ಅನಂತ ಕುಮಾರ್ ಹೆಗಡೆಯವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಮಾಡಿದ ಎಲ್ಲ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತ ಕುಮಾರ್ ಹೆಗಡೆಯವರ ಆಪ್ತ ಹಾಗೂ ಚುನಾವಣಾ ಜಿಲ್ಲಾ ಬೂತ್ ಪ್ರಮುಖರಾಗಿದ್ದ ಬಿಜೆಪಿ ಪ್ರಮುಖರಲ್ಲಿ ಒಬ್ಬರಾದ ನಾಗರಾಜ ನಾಯಕ ತೊರ್ಕೆಯವರು ಕರ್ನಾಟಕದ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚು ಮತದ ಅಂತರದಲ್ಲಿ ಗೆಲುವು ಸಾಧಿಸುವ ಕ್ಷೇತ್ರ ಉತ್ತರ ಕನ್ನಡ ಆಗಲಿದೆ ಎಂದರು . ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಅನಂತಕುಮಾರ್ ಹೆಗಡೆ ಗೆಲುವು ಸಾಧಿಸಲಿದ್ದಾರೆ. ಹಿಂದಿನ ಬಾರಿ ಒಂದು ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆದ್ದಿದ್ದರು , ಆದರೆ ಈ ಬಾರಿ ಅದಕ್ಕಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು ಹಾಗೂ ಗೆಲುವಿಗೆ ಕಾರಣ ಎಲ್ಲ ಕಾರ್ಯಕರ್ತರಾಗಲಿದ್ದೀರಿ ಎಂದರು.

RELATED ARTICLES  6-9ನೇ ತರಗತಿಗೆ‌ ತರಗತಿಗಳು ಬಂದ್ : ಕೊರೋನಾ ಹಿನ್ನೆಲೆ ಬೆಂಗಳೂರಿಗೆ ಸಂಬಂಧಿಸಿ ಆದೇಶ

ಯಾವುದೇ ರೀತಿಯ ಕಲ್ಮಶವಿಲ್ಲದ ರಾಜಕಾರಣ ಅನಂತ ಕುಮಾರ್ ಹೆಗಡೆ ಅವರದ್ದು. ಹಿಂದೂಪರ ಹಾಗೂ ಭಾರತ ರಾಷ್ಟ್ರದ ಪರ ಸದಾ ಮಾತನಾಡುವ ಹಾಗೂ ಅದಕ್ಕಾಗಿ ಕೆಲಸ ಮಾಡುವ ಅನಂತ ಕುಮಾರ್ ಹೆಗಡೆಯವರಿಗೆ ಮೂರು ಲಕ್ಷಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧ್ಯವಾಗಲಿದೆ ಎಂದು ನಾಗರಾಜ ನಾಯಕ ತೊರ್ಕೆ ಅಭಿಪ್ರಾಯಪಟ್ಟರು .

ಐದು ಬಾರಿ ಸಂಸದರಾಗಿರುವ ಅನಂತಕುಮಾರ್ ಹೆಗಡೆಯವರು ಕಪ್ಪು ಚುಕ್ಕೆ ಇಲ್ಲದ ಅವರ ಕಾರ್ಯವೈಖರಿ ಇರಬಹುದು ಎಲ್ಲರಿಗಿಂತ ಹೆಚ್ಚಾಗಿ ನಮ್ಮ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನ ಅನಂತ ಕುಮಾರ್ ಹೆಗಡೆ ಅವರ ಗೆಲುವಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು .

ಈ ವರ್ಷ ಅನಂತ ಕುಮಾರ್ ಹೆಗಡೆ ಯವರಿಗೆ ಎದುರಾಳಿಗಳೇ ಇಲ್ಲದಂತಾಗಿತ್ತು, ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸದೆ ಜೆಡಿಎಸ್ ಪಕ್ಷದ ಅದರಲ್ಲಿಯೂ ಪ್ರಚಾರಕ್ಕೆ ಇಲ್ಲದ ವ್ಯಕ್ತಿಯನ್ನು ನಿಲ್ಲಿಸಲಾಗಿತ್ತು .

RELATED ARTICLES  ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸಂಸತ್ ಉದ್ಘಾಟನೆ

ಈ ಬಾರಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ ಈ ಮಟ್ಟಿಗೆ ನಾವು ಗೆಲುವು ಸಾಧಿಸಿದ್ದೇವೆ. ಈ ಗೆಲುವು ಸಾಧ್ಯವಾಗಿದ್ದು ಕಾರ್ಯಕರ್ತರಿಂದ ನಮ್ಮ ಹೆಮ್ಮೆಯ ಕಾರ್ಯಕರ್ತರೇ ನಮಗೆ ಬಲ ಎಂದರು .

ಪೇಜ್ ಪ್ರಮುಖರ ಕಾರ್ಯ ಸಮಂಜಸವಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಈ ಕಾರ್ಯ ಹೆಚ್ಚಿನ ಮಟ್ಟಿಗೆ ಆಗಬೇಕಾಗಿದೆ ಹೀಗಾದಲ್ಲಿ ಮಾತ್ರ ನಾವು ಎಲ್ಲ ರೀತಿಯ ಗೆಲುವು ಸಾಧಿಸಲು ಸಾಧ್ಯ ಎಂದರು .

ಮುಂಬರುವ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಜಿಲ್ಲಾ ಪಂಚಾಯಿತಿ ಎಲ್ಲ ಚುನಾವಣೆಗಳಲ್ಲಿ ನಾವು ಬಿಜೆಪಿ ಪಕ್ಷ ಗೆಲ್ಲಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು .

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ, ಭಟ್ಕಳದ ಶಾಸಕರಾದ ಸುನೀಲ್ ನಾಯ್ಕ,ಪ್ರಮುಖರಾದ ವಿನೋದ ಪ್ರಭು, ಸಂಚಾಲಕರಾದ ಎಂ ಜಿ ಭಟ್ಟ, ಇನ್ನು ಮುಂತಾದ ಕಾರ್ಯಕರ್ತರು ಹಾಜರಿದ್ದರು .