ಗೋಕರ್ಣ : ಕಲಾನಿಕೇತನ ಲಲಿತ ಕಲಾ ಕೇಂದ್ರ ಗೋಕರ್ಣದ ವಾರ್ಷಿಕೋತ್ಸವ ಸಮಾರಂಭ ಗೋಕರ್ಣದ ವೆಂಕಟರಮಣ ದೇವಾಲಯದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಕಲಾವಿದರಾದ ಅನಂತ ಹಾವಗೋಡ ದೀಪ ಬೆಳಗಿಸಿ ನಡೆಸಿದ್ದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಕು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಕಲಾನಿಕೇತನ ಲಲಿತ ಕಲಾ ಕೇಂದ್ರವು ಅನೇಕ ವಿಧದ ಕಲೆಗಳನ್ನು ಸಮಾಜಕ್ಕೆ ಪರಿಚಯಿಸುತ್ತಾ ಕಲೆ ಹಾಗೂ ಸಂಸ್ಕೃತಿಯ ಉಳಿವಿಗೆ ಪ್ರಯತ್ನಿಸುತ್ತಿದೆ ಎಂದರು .
ಸಾಮಾಜಿಕ ಕಳಕಳಿ ಹಾಗೂ ಕಲೆ ಸಂಸ್ಕೃತಿಯ ರಕ್ಷಣೆಯಿಂದ ಮಾತ್ರವೇ ಸಮಾಜ ಉನ್ನತಿ ಯಾಗಲು ಸಾಧ್ಯ , ಈ ನಿಟ್ಟಿನಲ್ಲಿ ಕಲಾನಿಕೇತನ ಸಂಸ್ಥೆಯು ತನ್ನದೇ ಆದ ಗುರುತು ಮೂಡಿಸಿರುವುದು ಶ್ಲಾಘನೀಯ ಎಂದ ಅವರು ಭರತನಾಟ್ಯ ಹಾಗೂ ಇಂತಹ ಕಲೆಗಳನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದರು .
ಕಲೆ ಹಾಗೂ ಕಲಾವಿದರ ಜೊತೆಗೆ ಸದಾ ನಾವಿದ್ದು ಅವರಿಗೆ ಬೆನ್ನೆಲುಬಾಗಿ ಇರುತ್ತೇವೆ ಎಂದರು .
ಕಿರುತೆರೆಯ ಕಲಾವಿದರಾದ ಶ್ರೀ ಹರೀಶ್ ಭಟ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಹಾಜರಿದ್ದು ಕಲೆಯ ಕುರಿತಾಗಿ ತಮ್ಮ ಅನುಭವವನ್ನು ಹಂಚಿಕೊಂಡರು .
ಈ ಸಂದರ್ಭದಲ್ಲಿ ಕಲಾನಿಕೇತನ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು .ವಿದುಷಿ ಶ್ರೀಮತಿ ಅನುರಾಧಾ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡುವುದರ ಮೂಲಕ ಗಮನ ಸೆಳೆದರೆ, ಹಾಡುಗಾರಿಕೆಯಲ್ಲಿ ಶ್ರೀ ಅಶೋಕ ಕುಮಾರ್, ಮೃದಂಗದಲ್ಲಿ ವಿದ್ವಾನ್ ಶ್ರೀ ಪದ್ಮರಾಜ್ ರಿದಂ ಪ್ಯಾಡ್ನಲ್ಲಿ ವಿದ್ವಾನ್ ಶ್ರೀ ರಾಘವೇಂದ್ರ ರಂಗದಳ ಸಹಕರಿಸಿದರು .