ಕುಮಟಾ: ತಾಲೂಕಿನ ಮಾನೀರ್ ಸಮೀಪ ಕಾರು ಮತ್ತು ಬೈಕ್ ಗಳನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬೈಕ್ ಸವಾರನನ್ನು ಮಿರ್ಜಾನ್ ನಿವಾಸಿ ಗಣೇಶ ಪಟಗಾರ ಎಂದು ಗುರುತಿಸಲಾಗಿದೆ.
ಬೈಕ್ ಸವಾರನನ್ನು ತುರ್ತು ಚಿಕಿತ್ಸೆಗೆ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.