ಕುಮಟಾ ಹಾಗೂ ಬಾಡದ ಭಾಗದಲ್ಲಿ ಜಾನಪದ ಸಾoಸ್ಕೃತಿಕ ಕಲೆ ಇದೆ ಎಂದರೆ  ಶೈಲಕ್ಕೋರೆ ಮೂಲ ಕಾರಣ ಇವರು ಮೂಲತಃ ಜೇಷ್ಟಾಪುರದವರು ತಂದೆ ಶ್ರೀಯುತ ನಾರಾಯಣ ಮಹಾಲೆ ತಾಯಿ ವಿಜಯಾ ಮಹಾಲೆ. ಇವರು ಚಿಕ್ಕಂದಿನಿಂದ ಸಾoಸ್ಕೃತಿಕ ಕಲೆ ಮತ್ತು ಜಾನಪದ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.

ಯುವ ಜನ ಮೇಳ,ಕನ್ನಡ ಸಾಹಿತ್ಯ ಸಮ್ಮೇಳನ,ಯುವಕ ಸಂಘ ಕಾರ್ಯಕ್ರಮ,ಯುವತಿ ಮಂಡಳ ಕಾರ್ಯಕ್ರಮ,ಕನ್ನಡ ಶಾಲೆ ಕಾರ್ಯಕ್ರಮ,ಕುಮಟಾ ಉತ್ಸವ,ಕುಮಟಾ ಹಬ್ಬದಲ್ಲಿ ಚಿಕ್ಕ ಮಕ್ಕಳಿಗೆ ತರಬೇತಿ ನೀಡಿ ಪ್ರದರ್ಶನ ನೀಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನವರಾತ್ರಿ ಕಾರ್ಯಕ್ರಮ ಇಂತಹ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಿಸುವಿಕೆ.ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೊಂದಿಗೂ ಸಮಾನವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.

ಜಾನಪದ ಹಾಡು, ಗಿಗಿ ಪದ, ಲಾವಣಿ ಹಾಡು, ಗುಂಡು ಬರ್ಮಾ,ರಾಗಿ ಬೀಸುವ ಹಾಡು,ಬತ್ತ ಕುಟ್ಟುವ ಹಾಡು,
ಸೋಬಾನೆ ಹಾಡು  ಸ್ವರಚಿತ ನೂರಾರು ಹಾಡನ್ನು ತಕ್ಷಣವೇ ರಚಿಸಿ ಹಾಡುವ ಚಾತುರ್ಯತೆ.

RELATED ARTICLES  ನಿಧಿಶ್ರೀಗೆ “ಭಾರತೀಯ ಕಲಾಸಿದ್ಧಿ” ಪ್ರಶಸ್ತಿ

ಯಕ್ಷಗಾನ ಭಾಗವತಿಕೆ,ಯಕ್ಷಗಾನ ಪಾತ್ರಕ್ಕೂ ಸೈ, ಏಕಪಾತ್ರಾಭಿನಯ, ಛದ್ಮವೇಷ,ನಾಟಕ ಮಾಡುವುದರಿಂದ ಹಿಡಿದು ಯಾವುದೇ ಪಾತ್ರಕ್ಕಾದರೂ ಜೀವ ಕಳೆ ತುಂಬುವ ಕಲೆ ಇವರಲ್ಲಿದೆ. ಪ್ರತೀ ಕಾರ್ತಿಕ ಮಾಸದ ದೀಪೋತ್ಸವ ನಡೆಯುವ ವೇಳೆ ಸ್ವರಚಿತ ಪ್ರಾರ್ಥನೆ ಹಾಡಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿಂದೆಲ್ಲಾ ಟಿ ವಿ ಮಾದ್ಯಮ ಸಾಮಾಜಿಕ ಜಾಲ ತಾಣಗಳು ಇಲ್ಲದ ವೇಳೆಯಲ್ಲೇ ಸಾವಿರಾರು ಪ್ರೇಕ್ಷಕರಿಗೆ ಸಾoಸ್ಕೃತಿಕ ಮನರಂಜನೆ ನೀಡಿದ ಶೈಲಕ್ಕೋರು. ಇವರು ರಂಗಸ್ಥಳಕ್ಕೆ ಬಂದರೆ ಚಪ್ಪಾಳೆಯ ಸುರಿಮಳೆಯೇ ಹರಿದು ಬರುತ್ತಿತ್ತು.

ಇವರು ಕಲಾ ಸೇವೆಯ ಒಟ್ಟಿಗೆ ಸಮಾಜ ಸೇವೆಯಲ್ಲೂ ತಮ್ಮನ್ನು ತಾವೇ ತೊಡಗಿಸಿ ಕೊಂಡಿದ್ದಾರೆ ಯಾವುದೇ ಅನ್ಯಾಯ ಕಂಡಲ್ಲಿ ತಮ್ಮದೇ ಮುಂದಾಳತ್ವದಲ್ಲಿ ಪ್ರತಿಭಟಿಸಿ ಗೆಲುವಿನ ತನಕ ಹೋರಾಡುತ್ತಿದ್ದರು.

*17-18 ವರ್ಷದ ಹಿಂದೆಯೇ ಸಾರಾಯಿ ವಿರೋಧಿ ಆಂದೋಲನದ ನೇತೃತ್ವ ವಹಿಸಿದ್ದರು.

RELATED ARTICLES  ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಪಾಸಿಟಿವ್ ಪತ್ರಿಕೋದ್ಯಮ ಕಾರ್ಯಾಗಾರ!

*ಸಾಕ್ಷರತಾ ಆಂದೋಲನದ ಚಳುವಳಿಯ ನೇತೃತ್ವ

*ಅಂಗನವಾಡಿ ಶಿಕ್ಷಕರ ಸಂಘಟನೆಯಲ್ಲಿ ಇವರ ಮುಖಂಡತ್ವ

ಸ್ವತಃ ಅಂಗನವಾಡಿ ಶಿಕ್ಷಕಿಯಾಗಿ 39 ವರ್ಷ ಜೆಷ್ಠಾ ಪುರದಲ್ಲಿ ಸೇವೆ ಸಲ್ಲಿಸಿ ಮಕ್ಕಳ ಪಾಲಕರ ಸದಾ ಮನದಲ್ಲಿದ್ದರೆ. ಭಾಗದಲ್ಲಿ ಶೈಲಕ್ಕೊರು ಎಂದೇ ಚಿರಪರಿಚಿತರ ರಾಗಿದ್ದಾರೆ.

ತಮ್ಮ ಜೀವನದ ಉದ್ದಕ್ಕೂ ನೋವನ್ನೇ ಅನುಭವಿಸಿದರೂ ತಮ್ಮ ನೋವನ್ನು ಕಾಣಿಸದೇ ಇನ್ನೊಬ್ಬರ ಕಣ್ಣೀರು ಒರೆಸುವಲ್ಲಿ ಮೊದಲಿಗರು. ಸದಾ ಇವರಲ್ಲಿ ಇರುವ ನಗು ಮುಖದಿಂದ ಇನ್ನೊಬ್ಬರಿಗೆ ದೈರ್ಯ ತುಂಬುತ್ತಿದ್ದರು.

ಶೈಲಕ್ಕೊರ ಜಾನಪದ ಸಾoಸ್ಕೃತಿಕ ಕಲೆ ರಾಜ್ಯ ವ್ಯಾಪ್ತಿ ಪಸರಿಸಲಿ ಹಾಗೂ ಇಂತಹ ಅದ್ಬುತ ಪ್ರತಿಭೆಯನ್ನು ಸರ್ಕಾರ ಹಾಗೂ ಅಧಿಕಾರಿಗಳು ಇವರನ್ನು ಗುರುತಿಸಲಿ ಹಾಗೂ ಸನ್ಮಾನ ಪುರಸ್ಕಾರಗಳು ಇವರನ್ನು ಹುಡುಕಿ ಬರಲಿ ಎಂದು ಸಮಸ್ತ ಜನತೆ ಹಾರೈಸುತ್ತಿದ್ದಾರೆ.

(ಕಲ್ಪನೆ, ಬರಹ ಛಾಯಾಚಿತ್ರ ಬಾಡ ನ್ಯೂಸ್ ಕೊಡುಗೆ)