ಕುಮಟಾ: ಕೊಂಕಣ ರೈಲ್ವೆಯಲ್ಲಿ ಟ್ರ್ಯಾಕ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಟಾ ಬರ್ಗಿಯ ಸೂರ್ಯಶೇಖರ ಕಾರಂತ್ ಅವರು ಕರ್ತವ್ಯದ ನಿಮಿತ್ತ ಕುಮಟಾದಿಂದ ಶಿರವಾಡ ನಿಲ್ದಾಣಕ್ಕೆ ಆಗಮಿಸಿದ್ದರು. ತಮ್ಮ ಕೆಲಸ ಮುಗಿಸಿ ಕುಮಟಾಕ್ಕೆ ವಾಪಸ್ಸಾಗುವ ಸಂದರ್ಭದಲ್ಲಿ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ರೈಲ್ವೆ ಹತ್ತುತ್ತಿದ್ದಾಗ ನಿಯಂತ್ರಣ ತಪ್ಪಿ ರೈಲ್ವೆಯಡಿ ಸಿಲುಕಿ ಮೃತಪಟ್ಟ ಘಟನೆ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.
ಈ ಘಟನೆ ನಡೆದ ತಕ್ಷಣವೇ ಇತರ ಸಿಬ್ಬಂದಿಗಳು ರೈಲಿನ ಚೈನು ಎಳೆದು ನಿಲ್ಲಿಸಿದ್ದರು. ರೈಲ್ವೆ ಚಕ್ರಕ್ಕೆ ಸಿಲುಕಿದ್ದ ಅವರನ್ನು ಹೊರಗೆ ತಂದು ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಯಿತು. ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೇ ಇದ್ದರಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾರವಾರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ಬಗ್ಗೆ ದೂರು ದಾಖಲಾಗಿದೆ.