ಭಟ್ಕಳ: ಇಂದು ಸಂಜೆ 7 ಗಂಟೆ ಸುಮಾರು ನಸ್ತಾರ್ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದ್ದು ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದೆ.
ಭಟ್ಕಳ ತಾಲೂಕಿನ ಮುಂಡಳ್ಳಿ ಪಂಚಾಯತ್ ವ್ಯಾಪ್ತಿಯ ನಸ್ತಾರ್ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದ್ದು
ಮೃತ ವ್ಯಕ್ತಿ ಸರಿ ಸುಮಾರು 35-ರಿಂದ 40 ವರ್ಷ ವಯೋಮಾನದವನಾಗಿರಬೇಕೆಂದು ಅಂದಾಜಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಸ್ಥಳಿಯರೊಂದಿಗೆ ಮೃತದೇಹ ಗುರುತಿಗಾಗಿ ನಿರತರಾಗಿದ್ದಾರೆ.
ತನಿಖಾ ನಂತರದಲ್ಲಿ ಮೃತ ಯಾರು? ಏನು? ಎಂಬುದರ ಬಗ್ಗೆ ತಿಳಿದು ಬರಬೇಕಿದೆ.