ಕಾರವಾರ: ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ಹೊರಟು ಕಳೆದ ನಾಲ್ಕೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳ ಚಿತ್ರಗಳನ್ನು ನೌಕಾಸೇನೆ ಬಿಡುಗಡೆ ಮಾಡಿದೆ.
ಮಹಾರಾಷ್ಟ್ರದ ಮಾಲ್ವಾಣ ಸಮುದ್ರದಲ್ಲಿ ಮುಳುಗಡೆಯಾದ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳನ್ನು ಇತ್ತೀಚೆಗೆ ಐಎನ್ ಎಸ್ ನಿರೀಕ್ಷಕ ನೌಕೆ ಹಚ್ಚಿತ್ತು.
ಈ ಬೋಟ್ ಪತ್ತೆಗೆ ಉತ್ತರ ಕನ್ನಡ ದಕ್ಷಿಣ ಜಿಲ್ಲೆಯ ಪೊಲೀಸ್, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ಸಾಕಷ್ಟು ಶ್ರಮಿಸಿದ್ದವು. ಆದರೆ ಬೋಟ್ ಪತ್ತೆಯಾಗಿರಲಿಲ್ಲ.
ನೌಕಾಸೇನೆಯು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಮುದ್ರದ ಆಳದಲ್ಲಿ ಬೋಟಿಯ ಅವಶೇಷಗಳನ್ನು ಪತ್ತೆ ಮಾಡಿದೆ. ಅದರ ಚಿತ್ರಗಳನ್ನು ನೇವಿ ಪಿಆರ್.ಓ ಬಿಡುಗಡೆ ಮಾಡಿದ್ದಾರೆ.