ಕುಮಟಾ: ಶ್ರೀ ಶಾಂತಿಕ ಪರಮೇಶ್ವರಿ ( S. P. T) ಕ್ರೀಡಾ ಬಳಗ ದಿವಗಿ ಇವರ ಸಂಯೋಜನೆಯಲ್ಲಿ ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿವಗಿ ಬಂಡಿಹಬ್ಬದ ಪ್ರಯುಕ್ತ ನಡೆದ ನಡೆದ ಪ್ರಥಮ ವರ್ಷದ ಅಂಬಿಗ ಸಮಾಜದ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರ ಉದ್ಘಾಟಿಸಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಪ್ರಮುಖ ಶ್ರೀ ಸುಬ್ರಾಯ ವಾಳ್ಕೆ ವಹಿಸಿದ್ದರು. ಅಂಕಣದ ಉದ್ಘಾಟಕರಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಗಜಾನನ ಪ್ಯೆರವರು ಆಗಮಿಸಿದ್ದರು.

ಟ್ರೋಫಿ ಅನಾವರಣವನ್ನು ಶ್ರೀ ಡಾ ಜಿ. ಜಿ. ಹೆಗಡೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಪ್ರಶಾಂತ್ ನಾಯ್ಕ, ಶ್ರೀ ಹೇಮಂತ್ ಕುಮಾರ್ ಗಾಂವಕರ, ಶ್ರೀ ವಿನಾಯಕ ದೇಶಭಂಡಾರಿ, ಶ್ರೀ ಜಗದೀಶ್ ಭಟ್ಟ, ಶ್ರೀ ಸಂಗೀತಾ ದೇಶಭಂಡಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

RELATED ARTICLES  ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗೀತಾ‌ ನಮನಮ್ ಕಾರ್ಯಕ್ರಮ : ಸಂಸ್ಕೃತ ಓದಲು ಶಿವಾನಂದ ಪೈ ಕರೆ.

ಪ್ರಥಮ ಬಹುಮಾನ – 20,000 (ಪ್ರಾಯೋಜಕರು – ಸುಬ್ರಾಯ ವಾಳ್ಕೆ) ದ್ವಿತೀಯ ಬಹುಮಾನ – 12,000 (ಪ್ರಾಯೋಜಕರು – ಸಂಗೀತಾ ರಾಮ ದೇಶಭಂಡಾರಿ) ತ್ರತೀಯ ಬಹುಮಾನ – 8,000 ( ಪ್ರಾಯೋಜಕರು :ದಿನಕರ ಶೆಟ್ಟಿ) ಚತುರ್ಥ ಬಹುಮಾನ – 5,000 (ಪ್ರಾಯೋಜಕರು : ಗಜಾನನ ಪ್ಯೆ.) ನಿಗದಿಪಡಿಸಲಾಗಿತ್ತು.

ಸಮಾರೋಪ ಸಮಾರಂಭ

RELATED ARTICLES  ಭಟ್ಕಳ ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ಸಂಪನ್ನ

ಶ್ರೀ ಶಾಂತಿಕ ಪರಮೇಶ್ವರಿ (S P T) ಕ್ರೀಡಾ ಬಳಗ ದಿವಗಿ ಸಮಾರೋಪ ಸಮಾರಂಭದ ಬಹುಮಾನ ವಿತರಕರಾಗಿ ಶ್ರೀ ಲಕ್ಷ್ಮಣ ಅಂಬಿಗ, ಅಧ್ಯಕ್ಷತೆಯನ್ನು ಶ್ರೀಮತಿ ಮಾಲಾ ಅಂಬಿಗರವರು, ಮುಖ್ಯ ಅತಿಥಿಗಳಾಗಿ ಶ್ರೀ ಶಿವಾನಂದ ಅಂಬಿಗ, ಶ್ರೀ ಗಣಪತಿ. ಪಿ. ಅಂಬಿಗ, ದಿವಾಕರ ನಾಯ್ಕ, ಸತೀಶ ಅಂಬಿಗ, ರಮೇಶ್ ಅಂಬಿಗ ರವರು ಉಪಸ್ಥಿತರಿದ್ದರು.

ಫಲಿತಾಂಶ

ಚಾಂಪಿಯನ್ ತಂಡ – ಗಂಗಾಮಾತಾ ದಿವಗಿ.
ರನ್ನರ್ ಅಪ್ – ಶ್ರೀ ಗಂಗಾ ಮಿಜಾ೯ನ,
ತೃತೀಯ ಸ್ಥಾನ – ಗಂಗಾಭಿಕ ಸಿದ್ದಾಪುರ ಚತುರ್ಥ ಸ್ಥಾನ – S. P. T ದಿವಗಿ.