ಯುವ ಕವಿ, ಪತ್ರಕರ್ತ ಗೋಕರ್ಣದ ವೆಂಕಟೇಶ ಗೌಡ ಅವರ ಅಗಲಿಕೆ ನೋವು ತಂದಿದೆ. ಜೀವನೋತ್ಸಾಹ ತುಂಬಿದ ಯುವಕ ವೆಂಕಟೇಶ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಳಕಳಿ ಹೊಂದಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ವೆಂಕಟೇಶ್ ಅವರು ನೀಡುವ ಪತ್ರಿಕಾ ವರದಿಯಲ್ಲಿ ವಸ್ತುನಿಷ್ಠ ಸಂಗತಿಗಳಿರುತ್ತಿದ್ದವು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದ ಅವರು ಸದಾ ಜವಾಬ್ದಾರಿಯುತ ವರದಿ ನೀಡುತ್ತಿದ್ದರು. ಕಾವ್ಯ ಕ್ಷೇತ್ರದಲ್ಲಿ ಭರವಸೆಯ ಮಿಂಚಾಗಿದ್ದ ಅವರು ನಿರೀಕ್ಷೆ ಹುಟ್ಟಿಸಿದ್ದರು ಎಂದು ಅರವಿಂದ ಕರ್ಕಿಕೋಡಿ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

RELATED ARTICLES  ಭಾರತೀಯ ಕುಟುಂಬ ಯೋಜನಾ ಸಂಘದ ಸಂಸ್ಥಾಪನಾ ದಿನಾಚರಣೆ.