ಭಟ್ಕಳ: ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ)  ಭಟ್ಕಳ ಇವರಿಂದ ಫ್ರೆಂಡ್ಸ್ ಜಿಮ್ ನ ಸದಸ್ಯರಿಗಾಗಿ   “ಮಿಸ್ಟರ್ ಫ್ರೆಂಡ್ಸ್ -೨೦೧೯” ದೇಹ ದಾರ್ಢ್ಯ ಸ್ಪರ್ಧೆಯು ಭಟ್ಕಳ ತಾಲೂಕಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್(ರಿ) ಇದರ ಸಹಯೋಗದೊಂದಿಗೆ ಇತ್ತೀಚಿಗೆ ಕಮಲಾವತಿ ಮತ್ತು ಶ್ರೀ ರಾಮನಾಥ ಶಾನಭಾಗ ಕಲಾ ಮಂದಿರದಲ್ಲಿ ನಡೆಯಿತು.

ಭಟ್ಕಳ ಡಿವೈಎಸ್ಪಿಗಳಾದ ಶ್ರೀಯುತ ವ್ಯಾಲೆಂಟೈನ್ ಡಿಸೋಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವ್ಯಾಯಾಮ ಎನ್ನುವುದು ಮಾನವನ ಜೀವನಕ್ಕೆ ಅವಶ್ಯಕ ವಾಗಿದೆ ಹಾಗಾಗಿ ಪ್ರತಿ ನಿತ್ಯ ವ್ಯಾಯಾಮವನ್ನು ಮಾಡುವುದರ ಮೂಲಕ ಒಬ್ಬ ಮನುಷ್ಯ ಸದೃಢವಾಗಿ ಕ್ರಿಯಾಶೀಲತೆಯಿಂದ ಕೂಡಿರಲು ಸಾಧ್ಯ. ಇಂತಹ ಕಾರ್ಯಕ್ರಮವನ್ನು ಶ್ರೀಯುತ ವೆಂಕಟೇಶ್ ನಾಯ್ಕ ಇವರು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಈ ಸ್ಪರ್ಧೆಯ ನಿರ್ಣಾಯಕರಾಗಿ ರಾಜ್ಯ ದೇಹದಾರ್ಢ್ಯ ತೀರ್ಪುಗಾರ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಶ್ರೀ ಜಿ.ಡಿ.ಭಟ್  ಅವರು ತಮ್ಮ ಕಾರ್ಯ ನಿರ್ವಹಿಸಿದರು.

RELATED ARTICLES  ಯುವಕ-ಯುವತಿಯರಿಗೆ ಅತ್ಯುತ್ತಮ ಉದ್ಯೋಗಾವಕಾಶ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಕೀರ್ತಿ ಶೆಟ್ಟಿ ಅವರು ಮಾತನಾಡಿ ಮನುಷ್ಯನ ಜೀವನಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯವಾಗಿರುತ್ತದೆ ಮತ್ತು ಮನುಷ್ಯನ ಜೀವನ ಶೈಲಿಯ ಕುರಿತು ಅನೇಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಯುತ ಎಂ ಆರ್ ನಾಯಕ್ ಅವರು ಮಾತನಾಡಿ ಮನುಷ್ಯನ ದೇಹಕ್ಕೆ ವ್ಯಾಯಾಮ ಎನ್ನುವಂಥದ್ದು ಅತ್ಯವಶ್ಯಕವಾಗಿದ್ದು ಎಲ್ಲರೂ ತಮ್ಮ ದೇಹವನ್ನು ದಂಡಿ ಸುವುದರ ಮೂಲಕ ದಿನನಿತ್ಯ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಇಂತಹ ದೇಹದಾರ್ಢ್ಯ ಸ್ಪರ್ಧೆಯ ಮೂಲಕ ಜನರು ಹೆಚ್ಚಿನ ಒತ್ತನ್ನು ನೀಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಫ್ರೆಂಡ್ಸ್ ಜಿಮ್ ನ ಸದಸ್ಯರಾದ ದಿವಂಗತ ಅಖಿಲೇಶ್ ಮಂಜುನಾಥ್ ಮೊಗೇರ್ ಜಾಲಿಕೊಡಿ ಇವರು ಆಕಸ್ಮಿಕವಾಗಿ ಅಪಘಾತದಲ್ಲಿ ಮರಣ ಹೊಂದಿದ್ದರಿಂದ ಫ್ರೆಂಡ್ಸ್   ಜಿಮ್ ನ್ ಸದಸ್ಯರ ಬಳಗ ದಿಂದ 25,000 ರೂಪಾಯಿ ಧನ ಸಹಾಯವನ್ನು ಅವರ ತಂದೆ ತಾಯಿಗಳಿಗೆ ನೀಡಿದರು.

RELATED ARTICLES  ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿ ಸಂಪನ್ನ

ಈ ಸ್ಪರ್ಧೆಯ ನಿರ್ಣಾಯಕರಾಗಿ ರಾಜ್ಯ ದೇಹದಾರ್ಢ್ಯ ತೀರ್ಪುಗಾರ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಶ್ರೀ ಜಿ.ಡಿ.ಭಟ್  ಅವರು ತಮ್ಮ ಕಾರ್ಯ ನಿರ್ವಹಿಸಿದರು
ಅತಿಥಗಳಾಗಿ ಅಜಿಜ್ಉರ್ ರೆಹಮಾನ್ ರುಕ್ನುದ್ದಿನ್, ಡಾಕ್ಟರ್ ಲಕ್ಷ್ಮೀಶ ನಾಯ್ಕ್ , ಸಿ ಆರ್ ನಾಯ್ಕ್ , ಈರಪ್ಪ ಗರ್ಡಿಕರ್, ನಜೀರ್ ಕಾಶಿಂಜಿ, ಅಕ್ಷಯ್ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಫ್ರೆಂಡ್ಸ್ ಜಿಮ್ ನ್ ವ್ಯವಸ್ಥಾಪಕರಾದ ಶ್ರೀ ವೆಂಕಟೇಶ್ ನಾಯ್ಕ್ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ನಾರಾಯಣ ನಾಯ್ಕ್ ಶ್ರೀವಲ್ಲಿ ಪ್ರೌಢಶಾಲೆ, ನಿರೂಪಿಸಿ ವಂದಿಸಿದರು.