ಸಿದ್ದಾಪುರ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ವಲಯದ ಅಘನಾಶಿನಿ ನದಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ .

RELATED ARTICLES  ಕಂಟೇನರ್ ನಲ್ಲಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟ : ಮಂಕಿ ಸಮೀಪ ಪೋಲೀಸರ ದಾಳಿ

ಶಿರಸಿಯ ನಾಲ್ವರು ಹುಡುಗರು ಈಜಲು ನದಿಗೆ ತೆರಳಿದರು, ಈಜುವಾಗ ಇಬ್ಬರು ಬಾಲಕರು ಅಚಾನಕ್ಕಾಗಿ ನೀರಿನಲ್ಲಿ ಮುಳುಗಿದ್ದಾರೆ . ಈ ಸಂದರ್ಭದಲ್ಲಿ ಅವರು ಮೇಲೆದ್ದು ಬರದೆ ನದಿಯಲ್ಲಿ ಮುಳುಗಿ ಪ್ರಾಣಬಿಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ .

RELATED ARTICLES  ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರ ಹಿರಿದಾದುದು : ಎಮ್ ಅಜಿತ್

ಶಿರಸಿಯ ಕಬ್ಬೆ ನಿವಾಸಿ ವೆಂಕಟೇಶ ಹೆಗಡೆ ಹಾಗೂ ಅಂಚಳ್ಳಿಯ ಚಂದನ ಹೆಗಡೆ ಮೃತ ಬಾಲಕರು. ಈ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.