ಹೊನ್ನಾವರ :ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ರಸ್ತೆ ಬದಿಯ ಹೊಂಡಕ್ಕೆ ಉರುಳಿದ ಘಟನೆ ಹೊನ್ನಾವರ-ಗೇರುಸೊಪ್ಪ ವ್ರತ್ತದ ಬ್ಲಾಕ್ ಕಾಂಗ್ರೆಸ್ ಕಚೇರಿ ಸಮೀಪ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಮಾರುತಿ ಸ್ವಿಪ್ಟ್ ಕಾರು ಚಲಾಯಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ವಾಹನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ
ತಾಲೂಕಿನ ಗೇರುಸೊಪ್ಪ ವೃತ್ತದಿಂದ ಕಾಲೇಜ್ ಕಡೆಗೆ ತೆರಳುವ ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಕಾರೊಂದು ರಸ್ತೆ ಪಕ್ಕ ಇರುವ ಇಳಿಜಾರಿನಿಂದ ಕೆಳಗೆ ಇಳಿದಿದ್ದು ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಈ ಘಟನೆಯಲ್ಲಿ ಕಾರವಾರ ತಾಲೂಕಿನ ಬಾಡದ ಮಹಾಲೆವಾಡದ ನಿವಾಸಿ ನಿಖಿಲ್ ಶೆಣ್ವಿ ಮೃತ ಪಟ್ಟಿದ್ದಾನೆ.
ಹೊನ್ನಾವರದ ಆಕಾಶ ಅರುಣ್ ಪ್ರಭು ಗಂಭೀರವಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರಿಂದ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.