ಕುಮಟಾ: ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದ ನಾಗಾಂಜಲಿ ನಾಯ್ಕ ತಾನು ಕಲಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಗೆ ಇತ್ತೀಚೆಗೆ ಆಗಮಿಸಿದಾಗ, ಶಾಲೆಯ ಸಿಬ್ಬಂದಿ ವರ್ಗದವರಿಂದ ಆತ್ಮೀಯವಾಗಿ ಸನ್ಮಾನಿಸಿ, ಎಲ್ಲರೂ ಹೆಮ್ಮೆಪಡುವಂತಹ ಅಪ್ರತಿಮ ಸಾಧನೆಗೈದ ಈ ಸಾಧಕಿಯ ಭವಿಷ್ಯ ಉಜ್ವಲವಾಗಿರಲಿ ಎಂದು ಎಲ್ಲರೂ ಶುಭ ಹಾರೈಸಿದರು.

RELATED ARTICLES  ಮಹಿಳೆಯರಿಗೆ ಕುಟುಂಬ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ.


ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಮುಖ್ಯಾಧ್ಯಾಪಕಿ ಸುಮಾ ಪ್ರಭು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿವರ್ಗ ಹಾಗೂ ಅವಳ ತಂದೆ ನಿವೃತ್ತ ಸೈನಿಕ ಪರಮೇಶ್ವರ ನಾಯ್ಕ ಮತ್ತು ತಾಯಿ ಚೇತನಾ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES  ಭಟ್ಕಳ ಕಸಾಪದಿಂದ ಯಶಸ್ವಿಯಾಗಿ ನಡೆದ ಸುಂದರ ಕೈ ಬರೆಹ ಮತ್ತು ದಾಸವಾಣಿ ಸ್ಪರ್ಧೆ