ಕಾರವಾರ: ಚುನಾವಣಾ ಚಟುವಟಿಕೆ ನಂತರದಲ್ಲಿ ಇಂದು ಕಾರವಾರ ನಗರದ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಹಮ್ಮಿಕೊಳ್ಳಲಾಗಿತ್ತು.ಜೊತೆಗೆ ಅವಲೋಕನ ಸಭೆಯೂ ಇದಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಸರ್ಕಾರಕ್ಕೆ‌ ಜನರು ಇಚ್ಚಾ ಮರಣದ ವರವನ್ನ ಕೊಟ್ಟಿದ್ದಾರೆ,ಯಾವತ್ತು ಅವರ ಕಲಹ, ಭಿನ್ನಾಭಿಪ್ರಾಯ ಜಾಸ್ತಿ ಆಗುತ್ತದೆಯೋ ಆಗ ಸರ್ಕಾರ ಬೀಳುತ್ತದೆ ಎಂದು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರ ಬೀಳಿಸಲು ಬೇರೆ ಯಾರ ಪ್ರಯತ್ನವೂ ಬೇಡ,ಸರ್ಕಾರ ವರ ಪಡೆದುಕೊಂಡು ಹೊರಟಿದ್ದೆ ಇಚ್ಚಾಮರಣ ವರ ಎಂದು ಮಾತಿನ ಛಾಟಿ ಬೀಸಿದರು.

RELATED ARTICLES  Getting a Better half Online

ಅದಕ್ಕೆ ಯಾವ ದಿನಾಂಕ ನಿಗದಿ ಮಾಡುವುದು ಬೇಡ.ಅವರೇ ಯಾವ ನಿರ್ಧರಿಸುತ್ತಾರೋ ಆಗ ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದರು.
ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಭಾರಿ ೨೨ ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ,ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

   ಇನ್ನು ಎಪ್ರಿಲ್ 23ರಂದು ಶಿರಸಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಉಪಾಧ್ಯಕ್ಷ ಅನಿಶ್ ಮೇಲೆ ಎಸ್ ಡಿ ಪಿ ಐ ಕಾರ್ಯಕರ್ತರಿಂದ ಮಾರಣತಿಂಕ ಹಲ್ಲೆ ಮಾಡಲಾಗಿತ್ತು ಈ ಕುರಿತು ಪ್ರತಿಕ್ರಿಯಿಸಿದ ಹೆಗಡೆ  ಎಸ್ ಡಿ ಪಿ ಐ ಇದೊಂದು ದೊಡ್ಡ ವಿಕೃತಿ,ಎಲ್ಲೆಲ್ಲಿ ಎಸ್ ಡಿ ಪಿ ಐ ಬೆಳೆದಿದೆ ಅಲ್ಲಿ ಗೊಂದಲ ಕೋಮು ದ್ವೇಷ ಬೆಳೆಸುತ್ತಿದೆ.ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು ಸಾರ್ವಜನಿಕರು ಈ ಬಗ್ಗೆ ಜಾಗೃತವಾಗಿರಬೇಕು ಎಂದರು.

RELATED ARTICLES  ರೋಟರಿಯಿಂದ ಸರ್ಕಾರಿ ಆಸ್ಪತ್ರೆಗೆ ಲಕ್ಷ ರು. ಔಷಧಿ ಪೂರೈಕೆ