ಭಟ್ಕಳ: ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಗೊರ್ಟೆ ಎಂಬಲ್ಲಿ ಯುವಕನೋರ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವದರಿಂದ ಮನ ನೊಂದು ತನ್ನ ಅಜ್ಜಿಯ ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂಬ ರೀತಿಯ ಶಂಕೆ ಮೂಡುವಂತೆ ಆತ್ಮಹತ್ಯೆಗೆ ಶರಣಾದ ಘಟನೆ ರವಿವಾರ ನಡೆದಿದೆ. 

RELATED ARTICLES  ನವಭಾರತ ನಿರ್ಮಾಣಕ್ಕೆ ಪಣತೊಡಬೇಕು.

ನೇಣುಬಿಗಿದು ತನ್ನ ಪ್ರಾಣಕಳೆದುಕೊಂಡ ಯುವಕನನ್ನು ತಾಲೂಕಿನ ಹಾಡುವಳ್ಳಿ ಪಂಚಾಯತ್ ವ್ಯಾಪ್ತಿಯ ನಾಗೊಳ್ಳಿ ನಿವಾಸಿ ನವೀನ್ ಮಾಸ್ತಪ್ಪ ನಾಯ್ಕ ಎಂದು ಗುರಿತಿಸಲಾಗಿದೆ.

ಈತ ಇತ್ತಿಚೆಗೆ ನಡೆದ ದ್ವಿತೀಯಾ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ತನ್ನ ಅಜ್ಜಿ ಮನೆ ಗೊರ್ಟೆಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.

RELATED ARTICLES  ಮೋದಿ ಅವರ ಹುಟ್ಟು ಹಬ್ಬದ ಶುಭ ಸಂದರ್ಭದಂದು ಉಚಿತಗ್ಯಾಸ್ ವಿತರಣಾ ಕಾರ್ಯಕ್ರಮ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರುವುದಿಲ್ಲ. ತನಿಖೆ ನಂತರ ಪೂರ್ಣ ಮಾಹಿತಿ ಹೊರಬರಲಿದೆ.