ಕುಮಟಾ:ತಾಲೂಕಿನ ಕೋಡ್ಕಣಿ ಗ್ರಾಮದ ಐಗಳಕೂರ್ವೇ ಭಾಗದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯ ಕೆಲಸ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಕಾಮಗಾರಿಗೆ ಪರಸ್ಪರ ಪರ ಹಾಗೂ ವಿರೋಧ ಚರ್ಚೆಗಳು ಬರುತ್ತಿದ್ದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಅವೈಜ್ಞಾನಿಕ ಕಾಮಗಾರಿಯಿಂದ ಮೀನುಗಾರಿಕೆಗೆ ಸಮಸ್ಯೆ ಆಗುತ್ತಿದೆ ಎಂಬ ಬಗ್ಗೆ ಹೋರಾಟಗಳು ನಡೆದಿತ್ತು.
ಇಂದು ಐಗಳಕೂರ್ವೇ ಭಾಗದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯ ಕೆಲಸ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಐಗಳಕೂರ್ವೆ ಗ್ರಾಮಸ್ಥರು ಕುಮಟಾ ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿಯನ್ನು ಸಲ್ಲಿಸಿದರು.
ಸೂಕ್ತವಾದ ಕ್ರಮ ಕೈಗೊಳ್ಳುವುದರ ಮೂಲಕ ಸೇತುವೆ ಕಾಮಗಾರಿಯನ್ನು ಸುಲಭವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಧರ್ಭದಲ್ಲಿ ಕೋಡ್ಕಣಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಪಟಗಾರ,ಕೋಡ್ಕಣಿ ಗ್ರಾ.ಪಂ ಮಾಜಿ ಅಧ್ಯಕ್ಷ ಸುಬ್ರಾಯ ಪಟಗಾರ,ಮುಖಂಡ ಗಣಪತಿ ಪಟಗಾರ, ದಿನೇಶ ಭಂಡಾರಿ, ಸದಾನಂದ ಭಂಡಾರಿ, ದೇವರಾಯ ಪಟಗಾರ,ಮಾಜಿ ಗ್ರಾ.ಪಂ ಅಧ್ಯಕ್ಷ ಲಿಂಗಪ್ಪ ಪಟಗಾರ ಸೇರಿದಂತೆ ಹಲವರು ಹಾಜರಿದ್ದರು.