ಕುಮಟಾ : ಇದೇ ಮೇ 11 ರಂದು ಕುಮಟಾದ ಗೋಕರ್ಣ ಬೀಚ್ ನಲ್ಲಿ ಅಲೆಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ತಮಿಳುನಾಡಿನ ವ್ಯಕ್ತಿಯ ಶವ ಕುಮಟಾದ ಕಾಗಾಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಅರೆಕೊಳೆತ ಸ್ಥಿತಿಯಲ್ಲಿದ್ದ ಈ ಶವ ನೋಡಿ ಭಯ ಪಡುವ ವಾತಾವಾರಣ ನಿರ್ಮಾಣವಾಗಿತ್ತು.
ತಮಿಳುನಾಡಿನಿಂದ ಮೂರು ಸ್ನೇಹಿತರು ಗೋಕರ್ಣ ಬೀಚ್ ಗೆ ದಿನಾಂಕ 11/5/2019 ರಂದು ಆಗಮಿಸಿದ್ದರು. ಗೋರ್ಕಣದ ಪ್ಯಾರಡೈಸ್ ಬೀಚಿನಲ್ಲಿ ವಾಸ್ತವ್ಯ ಮಾಡಿದ್ದ ಇವರುಗಳಲ್ಲಿ ಅಕ್ಷಯ ಎನ್ನುವವನು ಕಲ್ಲು ಬಂಡೆ ಮೇಲೆ ಬಟ್ಟೆ ತೊಳೆಯುವಾಗ ಆಕಸ್ಮಿಕ ದೊಡ್ಡ ಅಲೆಗೆ ಕೊಚ್ವಿ ಹೊಗಿದ್ದ.
ಇಂದು ಈತನ ಶವ ಕುಮಟಾದ ಕಾಗಲ ಕಡಲಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕುಮಟಾ ಪೋಲಿಸರು ಸ್ಥಳಕ್ಕೆ ಭೇಟಿನೀಡಿದ್ದು ಮುಂದಿನ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.