ಅಂಕೋಲಾ: ಕಳೆದ ಅನೇಕ ವರ್ಷಗಳಿಂದ
ಸಾಮಾಜಿಕ ಕಾರ್ಯವನ್ನು  ನಡೆಸಿಕೊಂಡು ಬರುತ್ತಿದ್ದ ಕಲ್ಪವೃಕ್ಷ ವಾಟ್ಸಪ್ ಬಳಗ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ತನ್ನ ದೃಷ್ಟಿಕೋನದಲ್ಲಿ ಕಂಡಂತಹ ಅಸಹಾಯಕರಿಗೆ ಸಹಾಯ ಹಸ್ತವನ್ನು ಚಾಚುವಂಥದಾಗಲಿ ಅಥವಾ ಪ್ರತಿಭೆ ಇರುವವರಿಗೆ ಪುರಸ್ಕಾರ ನೀಡಿ ಅವರನ್ನು ಗೌರವಿಸುವಂಥ  ಕಾರ್ಯವನ್ನು ಇಂದಿಗೂ ನಡೆಸಿಕೊಂಡು ಬರುತ್ತಿತ್ತು.

   ಅದೇ ರೀತಿ  2019 ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಕುಮಟಾದ ಕುಮಾರಿ ನಾಗಾಂಜಲಿ  ಪರಮೇಶ್ವರ ನಾಯ್ಕ ಹಾಗೂ ಕುಮಟಾ ತಾಲೂಕಿಗೆ ದ್ವಿತೀಯ  ಸ್ಥಾನ ಪಡೆದ ಕುಮಾರಿ ಸಿ.ವಿ ನಮೃತಾ ಮತ್ತು ತೃತೀಯ ಸ್ಥಾನ‌ಪಡೆದ ಕುಮಾರಿ ತೇಜಸ್ವಿನಿ
ಶಾನಭಾಗ  ರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES  ಕುಮಟಾದಲ್ಲಿ ಪ್ರಾರಂಭಗೊಂಡ ರವಿರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ.

ಉತ್ತರ ಕನ್ನಡ ಜಿಲ್ಲಾ ಮಟ್ಟದ 2018-19ನೇ ಸಾಲಿನ ಫ್ರೌಡ ಶಾಲಾ  ವಿಭಾಗದ ಉತ್ತಮ ಶಿಕ್ಷಕ  ಪ್ರಶಸ್ತಿಗೆ  ಭಾಜನರಾದ ಶ್ರೀಯುತ  ಮೋಹನ ಬಾಬು ನಾಯ್ಕ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲ್ಪವೃಕ್ಷ ಬಳಗದ ಚಂದ್ರಕಾಂತ ನಾಯ್ಕ ಬೇಳಾ , ಮಹೇಶ ನಾಯ್ಕ ಹೊನ್ನಾವರ , ಪಿರು ನಾಯ್ಕ  ಕೇಣಿ ,ಗುರುರಾಜ್ ಹರಿಕಂತ್ರ ಕೇಣಿ , ಜಗ್ಗು ನಾಯ್ಕ ಹೊಸಗದ್ದೆ , ಅಜೇಯ ನಾಯ್ಕ  ಕೇಣಿ  ಹಾಗೂ ವಿದ್ಯಾರ್ಥಿಗಳ ಪಾಲಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
       
   ವರದಿ   ನಿತೇಶ ಕೇಣಿ

RELATED ARTICLES  ಉತ್ತರಕನ್ನಡ ಜಿಲ್ಲೆಯ 'ಮಹಾದೇವ ವೆಳಿಪ್'ಗೆ ರಾಜ್ಯೋತ್ಸವ ಪ್ರಶಸ್ತಿ