ಕುಮಟಾ : ತಾಲೂಕಿನ  ಹೆರವಟ್ಟಾದ ಬಿ ಎಲ್ ಹೆಗಡೆಯವರ ಮನೆಯಲ್ಲಿ ಕರ್ಕಿ ಭಾಸ್ಕರ ಮಾಸ್ಟರರ ಪುಣ್ಯಸ್ಮರಣೆ ಹಾಗೂ ಕೆರೆಕೈ ಕೃಷ್ಣ ಭಟ್ಟರ ಸಂಶೋಧನಾ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.

ಈ ಸಂದರ್ಭದಲ್ಲಿ  ಕಲಾವಿದರು,ಚಿಂತಕರು ಹಾಗೂ ಡಾllಎ ವಿ ಬಾಳಿಗಾ ಕಾಲೇಜಿನ ಉಪನ್ಯಾಸಕರು ಯಕ್ಷಗಾನ ಕಲಾವಿದರು ಆದ ಡಾll ಜಿ ಎಲ್ ಹೆಗಡೆಯವರಿಗೆ ಕೆರೆಕೈ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ವಿದ್ವಾನ ಉಮಾಕಾಂತ ಭಟ್ಟ ಮಾತನಾಡಿ ದಿವಂಗತ ಭಾಸ್ಕರ ಮಾಸ್ತರರು ಬದುಕನ್ನು ಸ್ಮರಿಸುತ್ತಾ ಇಂದು ಸನ್ಮಾನಿತರಾದ ಜಿ ಎಲ್ ಹೆಗಡೆಯವರು ಏಕಾಂಗಿಯಾಗಿ ಬಹಳ ದೊಡ್ಡ ಕೆಲಸವನ್ನ ಮಾಡಿತೋರಿಸ ಬಹುದು ಎಂದು ತೋರಿಸಿಕೊಟ್ಟ ಉತ್ತರ ಕನ್ನಡ ಜಿಲ್ಲೆಯ ಗಂಡುಮಗ ಎಂದರು.

RELATED ARTICLES  ಕೆಕ್ಕಾರಿನಲ್ಲಿ ಶರನ್ನವರಾತ್ರಿ ಮಹೋತ್ಸವ ಸಂಪನ್ನ

ಸನ್ಮಾನಿತರಾದ ಡಾllಜಿ ಎಲ್ ಹೆಗಡೆಯವರು ಮಾತನಾಡಿ ನಾನು ಜೀವನದಲ್ಲಿ ಬೇಕು ಎಂದು ಯಾವುದನ್ನು ಹಂಬಲಿಸಿಲ್ಲ. ಬೇಕು ಎನ್ನುವುದು ಸಿಗುತ್ತದೆ ಎನ್ನುವ ಭರವಸೆಯೂ ಇಲ್ಲ ಬೇಡ ಅನಿಸಿದ್ದು ಬರದೆ ಇರುವುದು ಇಲ್ಲ ಇದು ಜೀವನದ ಅನುಭವ. ಜನರ ಪ್ರೀತಿಗೆ ತಲೆ ಬಾಗಿಸದೆ ಇದ್ದರೆ ಇನ್ಯಾವುದಕ್ಕೆ ತಲೆಬಾಗಿಸಬೇಕು.ಹೀಗಾಗಿ ಈ ಸನ್ಮಾನವನ್ನು ಸ್ವೀಕರಿಸಿದ್ದೇನೆ ಎಂದರು.

RELATED ARTICLES  ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ ಕುಮಟಾ ಪುರಸಭೆ: ನಡೆದಿದೆ ಭರ್ಜರಿ ತಯಾರಿ.

ಪರಿಸರ ತಜ್ಞರು ಪತ್ರಕರ್ತರೂ ಆದ ಶಿವಾನಂದ ಕಳವೆಯವರು ಮಾನಾಡಿ ಭಾಷಾ ಶುದ್ದತೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದು ಯಕ್ಷಗಾನ ಮತ್ತು ತಾಳಮದ್ದಳೆಗಳಲ್ಲಿ ಮಾತ್ರ ಎಂದರು.

ಮೋಹನ ಹೆಗಡೆಯವರು ಕಾರ್ಯಕ್ರಮ ನಿರ್ವಹಿಸಿದರುಕಾರ್ಯಕ್ರಮದಲ್ಲಿ ಪಾರ್ವತಿ ಭಾಸ್ಕರ ಹೆಗಡೆ. ಶ್ರೀಕಾಂತ ಭಾಸ್ಕರ ಹೆಗಡೆ. ಪ್ರಭಾ ಭಟ್ಟ ಸೇರಿದಂತೆ ಹಲವು ಹಿರಿಯ ಗಣ್ಯರು ಕಲಾಭಿಮಾನಿಗಳು ಉಪಸ್ಥಿತರಿದ್ದರು.