ಈ ಕೂಡಲೇ ನಿಮ್ಮ ವಾಟ್ಸಪ್ ಅಕೌಂಟ್ ಅಪ್ಡೇಟ್ ಮಾಡಿಕೊಳ್ಳದಿದ್ದರೆ ನಿಮ್ಮ ಗೌಪ್ಯ ದಾಖಲೆ ಹ್ಯಾಕರ್ ಗಳ ಕೈ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
Whatsapp ತನ್ನ 150 ಮಿಲಿಯನ್ ಬಳಕೆದಾರರ ಖಾತೆ ಹಾಗೂ ಮಾಹಿತಿಯನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಖಾತೆ ಅಪ್ಡೇಟ್ ಮಾಡುವಂತೆ ಮನವಿ ಮಾಡಿದೆ.
ಆಪ್ ನಲ್ಲಿರುವ ದೋಷದ ಬಗ್ಗೆ ಕಳೆದ ತಿಂಗಳಲ್ಲೇ Whatsapp ಕಂಪೆನಿಯ ಗಮನಕ್ಕೆ ಬಂದಿತ್ತು. ಕೂಡಲೇ ಎಚ್ಚೆತ್ತ ಕಂಪೆನಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ ಹಾಗೂ ಅಪ್ಡೇಟ್ ವರ್ಶನ್ ಬಿಡುಗಡೆಗೊಳಿಸಿದೆ.
ಇಸ್ರೇಲ್ ಮೂಲದ ಎನ್‌ಎಸ್‌ಒ ಕಂಪೆನಿಯು Whatsapp ಮಾಹಿತಿ ಕದಿಯುವ ಸ್ಪೇವೇರ್ ಅಭಿವೃದ್ಧಿಪಡಿಸಿದೆ. ಇದರಲ್ಲಿ Whatsapp ಆಡಿಯೋ ಕಾಲ್ ಮೂಲಕ ಬಗ್ ನಿಮ್ಮ ಫೋನ್ ಸೇರಿಕೊಳ್ಳುತ್ತದೆ.
ಹೀಗಾಗಿ ಈ ಮಾಹಿತಿ ನಿರ್ಲಕ್ಷಿಸಲದೆ ವಾಟ್ಸಪ್ ಅಪ್ಡೇಟ್ ಮಾಡಲು ತಿಳಿಸಿದೆ ಎನ್ನಲಾಗಿದೆ. ಈ ಹಿಂದೆ ಈ ಬಗ್ಗೆ ಹಬ್ಬಿದ್ದ ಮಾತುಗಳೂ ಸುಳ್ಳೆನ್ನಲಾಗಿತ್ತಾದರೂ ಜನತೆ ಇನ್ನೂ ಅಪ್ ಡೇಟ್ ಮಾಡಿಕೊಂಡಿಲ್ಲವಾದರೆ ಅಪ್ ಡೇಟ್ ಮಾಡಿಕೊಳ್ಳಬೇಕಿದೆ ಎಂದು ಮಾಹಿತಿ ಲಭ್ಯವಾಗಿದೆ. ಸತ್ಯಾಸತ್ಯತೆಯ ಬಗ್ಗೆ ಗೊಂದಲಗಳಿದ್ದು ಜನತೆ ಈ ಬಗ್ಗೆ ಗಮನಿಸಬೇಕಿದೆ.