ಕಾರವಾರ: ತಾಲೂಕಿನ ಶಿರವಾಡದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿಯ ಮದ್ಯ ಹಾಗೂ ವಾಹನವನ್ನುಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಅಧಿಕಾರಿಗಳು 2.19 ಲಕ್ಷ ರೂ. ಮೌಲ್ಯದ ಒಟ್ಟು 833.10 ಲೀ. ಅಕ್ರಮ ಮದ್ಯ ಹಾಗೂಒಟ್ಟು 9 ಲಕ್ಷ ರೂ, ಮೌಲ್ಯದ ಎರಡು ಸರಕು ಸಾಗಣೆ ವಾಹನವನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ದೀಪಕ್ ನಾಯಕ ಹಾಗೂ ಸುರೇಶ ಪಟಗಾರ ಎಂಬುವವರು ತಲೆ ಮರೆಸಿಕೊಂಡಿದ್ದು ಅವರ ಬಂಧನನಕ್ಕೆ ಬಲೆ ಬೀಸಲಾಗಿದೆ.