ಉಡುಪಿಯ ರಕ್ತನಿಧಿ, ತಾಲೂಕಾ ಆಸ್ಪತ್ರೆ ಭಟ್ಕಳ ಹಾಗೂ ಭಟ್ಕಳದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಭಟ್ಕಳದ ಶ್ರೀ ವಡೇರ ಮಠ ಸಬಾಭವನದಲ್ಲಿ ರಕ್ತದಾನ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಸವಿತಾ ಕಾಮತ, ಆಡಳಿತಾಧಿಕಾರಿ, ತಾಲೂಕಾ ಆಸ್ಪತ್ರೆ ಭಟ್ಕಳ ರವರು ರಕ್ತದಾನದ ಜೊತೆಯಲ್ಲಿ ನೇತ್ರ ಹಾಗೂ ಅಂಗಾಂಗ ದಾನದ ಬಗ್ಗೆ ಅರಿವನ್ನು ಮೂಡಿಸಿದರು. ಉಡುಪಿಯ ರಕ್ತನಿಧಿಯ ಡಾ.ವೀಣಾ, ಗೌರವಾಧ್ಯಕ್ಷರಾದ ನರೇಂದ್ರ ನಾಯಕ, ಅಧ್ಯಕ್ಷರಾದ ಕಲ್ಪೇಶ ಪೈ, ಮಹಿಳಾ ಸಮಿತಿ ಅಧ್ಯಕ್ಷರಾದ ನೀತಾ ಕಾಮತ, ಕೆ.ಉದಯ ಪೈ, ಚಂದ್ರಕಾಂತ ಕಾಮತ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.