ವಿವಿಧ ಹಣ್ಣುಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಅದರಿಂದ ಮಾಡಿದ ವಿವಿಧ ತಿಂಡಿ ತಿನಿಸುಗಳು ಅಂದ್ರೆ ಈಗಲೇ ಬಾಯಲ್ಲಿ ನೀರೂರುತ್ತೆ ಅಲ್ವಾ.
ಹೌದು ಇದೇ ತಿಂಗಳು ದಿನಾಂಕ 20-21 ಸೋಮವಾರ ಮತ್ತು ಮಂಗಳವಾರ ದಂದು ಕುಮಟಾದ ಹವ್ಯಕ ವಿದ್ಯಾವರ್ಧಕ ಸಂಘದ ಅಮೃತ ಮಹೋತ್ಸವ ಅಂಗವಾಗಿ ಶಿರಸಿಯ ಪ್ರಸಿದ್ಧ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘ ನಿ. ಇದರ ಸಹಯೋಗದೊಂದಿಗೆ ಕುಮಟಾದ ಹವ್ಯಕ ಸಭಾಭವನದಲ್ಲಿ ಹಲಸಿನ ಹಣ್ಣು ಮತ್ತು ವಿವಿಧ ಹಣ್ಣುಗಳ ವಿವಿಧ ಬಗೆಯ ತಿಂಡಿ ತಿನಿಸುಗಳ ಮೇಳ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ವಿಶೇಷ ಮೇಳದ ಸವಿಯನ್ನು ಸವಿಯಬಹುದಾಗಿದೆ.
ಜೊತೆಗೆ 30 ಕ್ಕೂ ಹೆಚ್ಚಿನ ಆಹಾರ ಪದಾರ್ಥ, ಕೃಷಿ ಉಪಕರಣ , ಪುಸ್ತಕ, ಬಟ್ಟೆ, ವಿವಿಧ ಹಣ್ಣಿನ ಗಿಡಗಳ ಪ್ರದರ್ಶನ ಹಾಗೂ ಮಾರಾಟ ಹೀಗೆ ಬಗೆ ಬಗೆಯ ಸ್ಟಾಲ್ ಗಳ ವ್ಯವಸ್ಥೆ ಕೂಡ ಮಾಡಲಾಗಿದೆ..
ಹೆಚ್ಚಿನ ಸಂಖ್ಯೆಯಲ್ಲಿ ಕುಮಟಾ ಹಾಗೂ ಜಿಲ್ಲೆಯ ಮಹಾ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಶೇಷ ಮೇಳಕ್ಕೆ ಆಗಮಿಸಿ ಹಣ್ಣಿನ ಮೇಳದ ಸವಿಯನ್ನು ಸವಿಯಬೇಕಾಗಿ ಅಮೃತ ಮಹೋತ್ಸವ ಸಮೀತಿ ವಿನಂತಿಸಿದೆ.