ಕುಮಟಾ : ತಾಲೂಕಿನ ಹಂದಿಗೋಣ ಬಳಿಯ ಭಗವತಿ ಗ್ಯಾಸ್ ಸೆಂಟರ್ ಬಳಿ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದ ಪರಿಣಾಮ ಬೈಕ್ ಸಾವಾರ ,ಸಹ ಸವಾರ ಸ್ಥಳದಲ್ಲೇ ಸಾವು ಕಂಡಿರುವ ಬಗ್ಗೆ ವರದಿಯಾಗಿದೆ.
ಸದಾನಂದ ನಾರಾಯಣ ಮುಕ್ರಿ ವಿನೋದ್ ಲಕ್ಷ್ಮಣ ಮುಕ್ರಿ ಮೃತ ಬೈಕ್ ಸವಾರರಾಗಿದ್ದು ಮಂಗಳೂರು ಮಾರ್ಗವಾಗಿ ಕಾರವಾರದ ಕಡೆ ತೆರಳುತಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿನೀಡಿದ್ದು ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.