ಜಿಲ್ಲಾ ಪಂಚಾಯತದ ಶಾಸನ ಬದ್ಧ ಅನುದಾನದಡಿ ಹೆಗಡೆ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹೆಗಡೆ ಹಾಗೂ ಕಾಗಾಲ ನ ಇಬ್ಬರಿಗೆ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಜಿಲ್ಲಾ ಪಂಚಾಯತ ಅನುದಾನದಲ್ಲಿ ತ್ರಿಚಕ್ರ ವಾಹನ ವಿತರಣೆ ಮಾಡಿದರು…
ಅಪಘಾತದಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡ ಹೆಗಡೆಯ ಸುನಿಲ ನಾಯ್ಕ ಹಾಗೂ ರೈಲಿನ ಅಪಘಾತದಲ್ಲಿ ತಮ್ಮ ಎರಡೂ ಕಾಲನ್ನು ಕಳೆದುಕೊಂಡ ಗಣೇಶ ನಾದರ್ ರವರಿಗೆ ವಿತರಿಸಲಾಗಿದೆ…
ವಾಹನ ಪಡೆದ ಇಬ್ಬರೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು…