ಹೊನ್ನಾವರ: ತಾಲೂಕಿನ ಅರೇಅಂಗಡಿ ಸಮೀಪದ ಹೊಸಾಕುಳಿ ಹಳ್ಳಿಗೊಂದು ಘನತೆ ತಂದ ಮೂವರು ಸಾಧಕಿಯರಿಗೆ ಶನಿವಾರ (18/05/2019) ಸನ್ಮಾನ ನಡೆಯಲಿದೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಅಂಕಿತಾ ಶ್ರೀಧರ ಭಟ್ಟ, ಕರ್ನಾಟಕ ವಿಶ್ವವಿದ್ಯಾಲಯದ ಬಿ.ಬಿ.ಎ ದಲ್ಲಿ 7ನೇ ರ್ಯಾಂಕ್ ಗಳಿಸಿದ ಕಾವ್ಯಾ ಎಂ. ಭಟ್ಟ, ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ತೃತೀಯ ಸ್ಥಾನ ಗಳಿಸಿದ ನಯನಾ ಗಣಪತಿ ಹೆಗಡೆ ಇವರಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀಕರಿಕಾನಮ್ಮ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಸುಬ್ರಹ್ಮಣ್ಯ ಭಟ್ಟ ಉಪಸ್ಥಿತಿ ವಹಿಸಲಿದ್ದಾರೆ. ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ ಉದ್ಘಾಟನೆ ಮಾಡುವರು. ಹೊಸಾಕುಳಿ ಗ್ರಾ.ಪಂ ಅಧ್ಯಕ್ಷ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ, ನಾಗರಾಜ ಭಟ್ಟ ಬೇಂಗ್ರೆ, ಪತ್ರಕರ್ತ ಎಂ.ಜಿ.ಹೆಗಡೆ, ಕರುಣಾ ತಾಯಿ, ಡಾ.ಸಂಧ್ಯಾ ಹೆಗಡೆ ದೊಡ್ಡಹೊಂಡ, ಗಣೇಶ ಜೋಶಿ, ಅರುಣ ಶೆಟ್ಟಿ ಕವಲಕ್ಕಿ, ಪ್ರಕಾಶ ಹೆಗಡೆ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಕ್ಕೆ ಸಹಕರಿಸಬೇಕೆಂದು ಸಂಘಟಕರಾದ ಸಂದೀಪ ಭಟ್ಟ ಹೊಸಾಕುಳಿ ಮತ್ತು ಎಚ್.ಆರ್.ಗಣೇಶ ಕೋರಿದ್ದಾರೆ.
ಕಾರ್ಯಕ್ರಮದ ವಿವರವನ್ನು ಒಳಗೊಂಡ ಆಮಂತ್ರಣ ಪತ್ರಿಕೆಯ ಯಥಾಪ್ರತಿ ಇಲ್ಲಿದೆ