ಮದ್ಯಪ್ರಿಯರಿಗೊಂದು ಸಿಹಿ ಸುದ್ದಿ. ನಿಮ್ಮ ಬಹುಕಾಲದ ಕಾತುರತೆ ಇತಿಶ್ರೀ ಹಾಡಲು ಕಿಂಗ್ ಪಿಶರ್ ಕಂಪೆನಿ ಮುಂದಾಗಿದೆ. ಹೌದು ಇನ್ಸ್​ಟಂಟ್ ಕಾಫಿ ಪೌಡರ್, ಮಿಲ್ಕ್​ ಪೌಡರ್ ರೀತಿಯಲ್ಲಿ ಇನ್ಮುಂದೆ ಇನ್ಸ್​ಟಂಟ್​ ಬಿಯರ್ ಮಿಕ್ಸ್ ಕೂಡ ಲಾಂಚ್ ಆಗಲಿದೆಯಂತೆ. ಒಂದು ಸಣ್ಣ ಶ್ಯಾಷೆ ಪ್ಯಾಕ್​ನಲ್ಲಿರುವ ಈ ಪೌಡರ್​ ಅನ್ನು ನೀರಿನಲ್ಲಿ ಮಿಕ್ಸ್​ ಮಾಡಿದರೆ ಬಿಯರ್ ರೆಡಿ ಎಂಬ ವಿಡಿಯೋವನ್ನು ಕಿಂಗ್​ ಫಿಶರ್ ಬಿಡುಗಡೆ ಮಾಡಿದೆ.

RELATED ARTICLES  ನೇಣಿಗೆ ಶರಣಾದ ವ್ಯಕ್ತಿ.

ಸಾಮಾನ್ಯವಾಗಿ ಬಿಯರ್ ಬಾಟಲ್​ಗಳನ್ನು ತರುವುದು ಹಾಗೂ ಅದನ್ನು ಫ್ರಿಡ್ಜ್​ನಲ್ಲಿಡುವುದು ತುಸು ಪ್ರಯಾಸದಾಯಕ. ಇಂತಹ ಸಮಸ್ಯೆಗೆ ಪರಿಹಾರವಾಗಿ ಕಿಂಗ್ ಫಿಶರ್ ಹೊಸ ಉಪಾಯವನ್ನು ಕಂಡುಕೊಂಡಿದೆ. ಈ ಪೌಡರ್​ ಅನ್ನು ಕೋಲ್ಡ್​ ನೀರಿನಲ್ಲಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಬಿಯರ್ ತಯಾರಾಗುತ್ತದೆ.

RELATED ARTICLES  ಚಿಲುಮೆ ಕೆರೆಯಲ್ಲಿ ವ್ಯಕ್ತಿಯೊರ್ವನ ಶವ ಪತ್ತೆ.

ಇದರಿಂದ ಇನ್ಮುಂದೆ ಬಿಯರ್ ಬಾಟಲ್​ಗಳನ್ನು ಹೊತ್ತುಕೊಂಡು ಹೋಗುವ ತೊಂದರೆ ಇರುವುದಿಲ್ಲ. ಅಲ್ಲದೆ ನೀವು ಬಯಸಿದಾಗೆಲ್ಲ ಒಂದೇ ನಿಮಿಷದೊಳಗೆ ಬಿಯರ್ ತಯಾರಿಸಿ ಕುಡಿಯಬಹುದು ಎಂದು ಕಂಪೆನಿ ತನ್ನ ಜಾಹೀರಾತಿನಲ್ಲಿ ತಿಳಿಸಿದೆ.