ಕುಮಟಾ: ಕುಮಟಾ ಅರ್ಬನ್ ಬ್ಯಾಂಕ್ ವತಿಯಿಂದ ಎಸ್.ಎಸ್.ಎಲ್.ಸಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ  ಬ್ಯಾಂಕ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕ ಮುರಳೀ ಮಾಸ್ತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣದ ವಿವಿಧ ಆಯಾಮ ಹಾಗೂ ಸಾಧನೆಗೆ ಅಗತ್ಯ ಇರುವ ಪರಿಶ್ರಮದ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಿವಿಎಸ್‌ಕೆ ಪ್ರೌಢಶಾಲೆಯ ನಾಗಾಂಜಲಿ ನಾಯ್ಕ, ರಾಜ್ಯಕ್ಕೆ ರ‍್ಯಾಂಕ್ ಪಡೆದ ಸಿವಿಎಸ್‌ಕೆ ಪ್ರೌಢಶಾಲೆಯ ಸಿ.ವಿ.ನಮ್ರತಾ, ಸಿವಿಎಸ್‌ಕೆ ಪ್ರೌಢಶಾಲೆಯ ತೇಜಸ್ವಿನಿ ಶಾನಭಾಗ, ಸಿವಿಎಸ್‌ಕೆ ಪ್ರೌಢಶಾಲೆಯ ಸುದಿತಿ ಗಣೇಶ ಕಾಮತ, ಸಿವಿಎಸ್‌ಕೆ ಪ್ರೌಢಶಾಲೆಯ ವಸುಧಾ ಪ್ರಭು, ಸಿವಿಎಸ್‌ಕೆ ಪ್ರೌಢಶಾಲೆಯ ಪ್ರಮೋದ ಲಿಂಗರಾಜ್ ನಾಯ್ಕ, ಸಿವಿಎಸ್‌ಕೆ ಪ್ರೌಢಶಾಲೆಯ ಅಪೂರ್ವ ಶಾನಭಾಗ, ಚಿತ್ರಿಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯ ಪ್ರಣೀತ್ ರವಿರಾಜ್ ಕಡ್ಲೆ, ಜನತಾ ವಿದ್ಯಾಲಯದ ವಿಘ್ನೇಶ ಗಜಾನನ ಭಟ್ಟ, ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ಎಂ.ಮೈತ್ರಿ ಅವರನ್ನು ಸನ್ಮಾನಿಸಲಾಯಿತು.

RELATED ARTICLES  ಸಹಯಾನದಲ್ಲಿ ಪ್ರಸಾಧನ ಮತ್ತು ವಸ್ತ್ರವಿನ್ಯಾಸ ಶಿಬಿರ

   ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ ಮಾತನಾಡಿ, ಎಸ್.ಎಸ್.ಎಲ್.ಸಿಯಲ್ಲಿ ಕುಮಟಾದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ತಾಲೂಕಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನವನ್ನು ಹಾಗೂ ಉತ್ತಮವಾಗಿ ಮಾತನಾಡುವ ಕಲೆಯನ್ನೂ ರೂಢಿಸಿಕೊಳ್ಳಬೇಕು. ಮುಂದಿನ ದಿನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ನೀಡಲು ಸಹಕಾರಿಯಾಗುತ್ತದೆ ಎಂದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು ಒಂದೇ ದಿನ 100 ಕೊರೋನಾ ಕೇಸ್..!

ವೇದಿಕೆಯಲ್ಲಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶೇಷಗಿರಿ ಶಾನಭಾಗ, ಬ್ಯಾಂಕ್ ಉಪಾಧ್ಯಕ್ಷ ಅಶೋಕ ದಾಮೋದರ ಶಾನಭಾಗ, ನಿದೇರ್ಶಕರಾದ ಮುಕುಂದ ಶಾನಭಾಗ, ಸುರೇಶ ನಾಯ್ಕ, ವಿ.ಎಂ.ಪೈ, ಸದಾನಂದ ಕಾಮತ, ಚಂದ್ರಕಾಂತ ಶಾನಭಾಗ, ಪ್ರಭಾಕರ ಗೋಳಿ, ಪ್ರಧಾನ ವ್ಯವಸ್ಥಾಪಕ ಪ್ರದೀಪ ಎಸ್ ಪೈ, ವ್ಯವಸ್ಥಾಪಕ ಉದಯ ಆರ್ ಪೈ ಹಾಗೂ ಇತರರು ಉಪಸ್ಥಿತರಿದ್ದರು.