ದಿನಾಂಕ 07/08/2017 ಸೋಮವಾರ ಪೂರ್ಣಿಮಾ “ಕೇತುಗ್ರಸ್ಥ” ಚಂದ್ರಗ್ರಹಣ..!

ಗ್ರಹಣ ಸ್ಪರ್ಶ : ರಾತ್ರಿ 10:22
ಮಧ್ಯಕಾಲ : 11:50pm
ಮೋಕ್ಷಕಾಲ : 12:49 ರಾತ್ರಿ

ಭೋಜನ : ಸೂರ್ಯೋದಯಾದಿ 12:28 ಘಂಟೆಯೊಳಗೆ ಆಹಾರ ಸೇವಿಸಬಹುದು.

ಅಶಕ್ತರು, ರೋಗಿಗಳು, ವೃದ್ಧರು, ಮಕ್ಕಳಿಗೆ ನಿಯಮವಿಲ್ಲ..

ತರ್ಪಣ ವಿಚಾರ :ರಾತ್ರಿ 11:50 ರ ನಂತರ ತರ್ಪಣ

ನಕ್ಷತ್ರ ದೋಷ : ಶ್ರವಣ ನಕ್ಷತ್ರಕ್ಕೆ ಸ್ವಲ್ಪ ದೋಷವಿದೆ..
ಗ್ರಹಣ ಸ್ತೋತ್ರವನ್ನು ಬರೆದಿಟ್ಟುಕೊಂಡು, ಗ್ರಹಣ ಮುಗಿದ ನಂತರ ತಾಂಬೂಲದೊಡನೆ , ಸಂಭಂದಪಟ್ಟ ಧಾನ್ಯದೊಂದಿಗೆ ದಾನ ಮಾಡಿ..

ಗ್ರಹಣದ ಪೂರ್ಣ ಶ್ಲೋಕ :

“ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರ ಗ್ರಹೋಪರಾಗೋತ್ಥಂ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ಶೋಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಮುಖಂ ಯಃ ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿಃ |
ಚಂದ್ರೋ ಪರಾಗಸಂಭೂತ ಅಗ್ನಿಪೀಡಾಂ ವ್ಯಪೋಹತು ||

ಯಃ ಕರ್ಮಸಾಕ್ಷಿ ಲೋಕಾನಾಂ ಧರ್ಮೋ ಮಹಿಷವಾಹನಃ |
ಯಮಃ ಚಂದ್ರೋ ಪರಾಗೋತ್ಥಂ ಗ್ರಹಪೀಡಾಂ ವ್ಯಪೋಹತು ||

ಪ್ರಾಣರೂಪೋಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯಃ |
ವಾಯುಃ ಚಂದ್ರೋ ಪರಾಗೋತ್ಥಂ ಗ್ರಹಪೀಡಾಂ ವ್ಯಪೋಹತು ||

ಯೋ ಸೌ ನಿಧಿಪತಿರ್ದೇವಃ ಖಡ್ಗಶೂಲಾಗದಾಧರಃ|
ಚಂದ್ರೋ ಪರಾಗಕಲುಶಂ ಧನದೋ$ತ್ರ ವ್ಯಪೋಹತು ||

ಯೋ ಸೌವಿಂದು ಧುರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರೋ ಪರಾಗ ಪಾಪಾನಿ ಸನಾಶಯತು ಶಂಕರಃ ||

ಇದು ಪೂರ್ಣವಾಗಿ ” ಚಂದ್ರಗ್ರಹಣ” ಮಂತ್ರ..
ಕೆಲವು ಪುಸ್ತಕಗಳಲ್ಲಿ ಪೂರ್ಣ ಇರುವುದಿಲ್ಲ..

ಇದಕ್ಕೆ ತಾಂಬೂಲದಾನ, ಧಾನ್ಯದಾನ, ಅತ್ಯಂತ ಮುಖ್ಯ
(ದಾನದ ವಿಷಯ ತಿಳಿಯಲು

ಮೇಷ ರಾಶಿ : ಎರಡು ಸಾರಿ ಶಿವ ಅಷ್ಟೋತ್ತರ ಮತ್ತು ಒಂದು ಸಾರಿ ಸುಬ್ರಹ್ಮಣ್ಯ ಅಷ್ಟೋತ್ತರ ಓದಿ..
ತೆಂಗಿನ ಮರಕ್ಕೆ ಎರಡು ಬಿಂದಿಗೆ ನೀರು ಹಾಕಿ..

ವೃಷಭರಾಶಿ : ಹಸುವಿಗೆ ಹಸಿರು ಹುಲ್ಲು ಅಥವಾ ಹಣ್ಣನ್ನು ತಿನ್ನಿಸಿ,
ದುರ್ಗಾ ದೇವಿ ಅಷ್ಟೋತ್ತರ ಎರಡು ಸಾರಿ ಓದಿ,
ನರಸಿಂಹ ಅಷ್ಟೋತ್ತರ ಒಂದು ಸಾರಿ ಓದಿ..

ಮಿಥುನ ರಾಶಿ : ವಿಷ್ಣುಸಹಸ್ರನಾಮ ಓದಿ, ಅಡಕೆಯ ಮರ ಅಥವಾ ಹಣ್ಣುಬಿಡುವ ಮರಕ್ಕೆ ಅಥವಾ ದೇವವೃಕ್ಷಗಳಿಗೆ ನೀರು ಹಾಕಿ 6 ನಮಸ್ಕಾರ ಮಾಡಿ..

ಕರ್ಕಾಟಕ ರಾಶಿ : ಮನೆಯಲ್ಲಿ ನ ಹಿರಿಯರಿಗೆ ನಮಸ್ಕಾರ ಮಾಡಿ..
ಗಣಪತಿ ಅಷ್ಟೋತ್ತರ ಮತ್ತು ಪಾರ್ವತೀ ಅಷ್ಟೋತ್ತರ ಓದಿ..
ಹಸುವಿಗೆ “ಅಕ್ಕಿ, ಬೆಲ್ಲ, ಬಾಳೆಹಣ್ಣು ಕೊಡಿ”..!

ಸಿಂಹ ರಾಶಿ : ಮನೆಯ ಅಂಗಳದಲ್ಲಿ ಅಥವಾ ಎಲ್ಲಿಯಾದರೂ ಸರಿ ಎರಡು ಅಡಕೆ ಸಸಿ ಅಥವಾ ಹಣ್ಣಿನ ಸಸಿಗಳನ್ನು ನೆಡಿ, ಅಥವಾ ದೇವಾಲಯಕ್ಕೆ ಕೊಡಿ..
ಗಕಾರ ಗಣಪತಿ ಅಷ್ಟೋತ್ತರ ಮತ್ತು ಆದಿತ್ಯಹೃದಯ ಸ್ತೋತ್ರ ಓದಿ..

ಕನ್ಯಾರಾಶಿ : ಹಸುವಿಗೆ ಹಸಿರು ಹುಲ್ಲು , ಅಥವಾ ಸೇಬುಹಣ್ಣು, ಬಾಳೆಹಣ್ಣು ತಿನ್ನಿಸಿ
ವೈನತೇಯ ಅಷ್ಟೋತ್ತರ ಮತ್ತು ದೇವಿ ಅಷ್ಟೋತ್ತರ ಓದಿ..

ತುಲಾರಾಶಿ : ಹಸುವಿಗೆ ಆಹಾರಕ್ಕೆ ಹಸಿರು ಹುಲ್ಲನ್ನು ಕೊಡಿಸಿ, 9 ನಮಸ್ಕಾರ ಮಾಡಿ..
ಬಿಲ್ವಪತ್ರೆ ಮರಕ್ಕೆ ನೀರು ಹಾಕಿ 6 ನಮಸ್ಕಾರ ಮಾಡಿ..
ಗಣಪತಿ ದೇವಾಲಯಕ್ಕೆ ಎಳನೀರು ಕೊಟ್ಟು ಅಭಿಷೇಕ ಮಾಡಿಸಿ,
“ಲಲಿತಾಸಹಸ್ರನಾಮ” ಓದಿ..

“ವೃಶ್ಚಿಕ ರಾಶಿ”: ಮಲ್ಲಿಗೆ ಹೂವಿನ ಗಿಡಕ್ಕೆ ಅಥವಾ ಬಿಳಿಎಕ್ಕದ ಗಿಡಕ್ಕೆ 11 ಪ್ರದಕ್ಷಿಣೆ ಮಾಡಿ..
ಪಕ್ಷಿಗಳಿಗೆ ಆಹಾರ ಹಾಕಿ ಅಥವಾ ನಾಯಿಗೆ ಸಿಹಿ ಕೊಡಿ..!
ಸುಬ್ರಹ್ಮಣ್ಯ ಅಷ್ಟೋತ್ತರ ಮತ್ತು ನಾರಾಯಣ ಅಷ್ಟೋತ್ತರ ಓದಿ..
ಹಿರಿಯರ ಆಶೀರ್ವಾದ ತೆಗೆದುಕೊಳ್ಳಿ..

ಧನಸ್ಸು ರಾಶಿ : ಯಾರಾದರೂ ಗುರುಗಳಿಗೆ ಫಲದಾನ ಮಾಡಿ ಆಶೀರ್ವಾದ ಪಡೆಯಿರಿ..
ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ..(ಬಟ್ಟೆ ಕೊಡಿಸೋದು , ಪುಸ್ತಕ ಕೊಡಿಸೋದು ‌.ಏನಾದರು ಮಾಡಿ)
ದತ್ತಾತ್ರೇಯ ಅಷ್ಟೋತ್ತರ ಮತ್ತು ವಾಮನ ಅಷ್ಟೋತ್ತರ ಓದಿ..

ಮಕರ ರಾಶಿ : ಹಸುವಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ವೀಳ್ಯದೆಲೆ, ಅಡಿಕೆ , ತಿನ್ನಿಸಿ, ಕುಡಿಯಲು ನೀರು ಇಟ್ಟು 12 ನಮಸ್ಕಾರ ಮಾಡಿ..
ಮನೆಯ ಹಿರಿಯರಿಗೆ ನಮಸ್ಕಾರ ಮಾಡಿ , ಅರ್ಧಘಂಟೆ ಕೂತು ಅವರೊಡನೆ ಮಾತಾಡಿ..
ಈಶ್ವರ ಅಷ್ಟೋತ್ತರ ಮತ್ತು ಕಾಳೀದೇವಿ ಅಷ್ಟೋತ್ತರ ಓದಿ..

ಕುಂಭರಾಶಿ : ಆಂಜನೇಯ ದೇವರಿಗೆ ಬಾಳೆಹಣ್ಣು ನೈವೇದ್ಯ ಮಾಡಿಸಿ, ಕೋತಿಗಳಿಗೆ ಅಥವಾ ಹಸುವಿಗೆ ಅಥವಾ ಭಿಕ್ಷುಕರಿಗೆ ದಾನ ಮಾಡಿ..
ನೆಲ್ಲಿಕಾಯಿ ಮರ ಅಥವಾ ಬಿಲ್ವಪತ್ರೆ ಮರ ಇದ್ದರೆ 11 ನಮಸ್ಕಾರ ಮಾಡಿ, ಎರಡು ಬಿಂದಿಗೆ ನೀರು ಹಾಕಿ, ಎರಡು ವೀಳ್ಯದೆಲೆ ಅಡಿಕೆ ಎರಡು ತರಹದ ಹಣ್ಣು ಇಟ್ಟು ಬನ್ನಿ..
ಅರ್ಧನಾರೀಶ್ವರ ಅಷ್ಟೋತ್ತರ ಮತ್ತು ವಿಘ್ನೇಶ್ವರ ಅಷ್ಟೋತ್ತರ ಓದಿ..

ಮೀನರಾಶಿ : ಗೋಶಾಲೆಗೆ ಹೋಗಿ ಹಸುವಿಗೆ ಹುಲ್ಲಿಗಾಗಿ ನಿಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಿ..
ಗುರುಗಳು (ತಂದೆ, ತಾಯಿ, ಅಥವಾ ಮಠದ ಗುರುಗಳ ಯೋಗಕ್ಷೇಮ ವಿಚಾರಿಸಿ)
ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಮತ್ತು ಮಹಿಷಾಸುರ ಮರ್ಧಿನಿ ಸ್ತೋತ್ರ ಓದಿ..

ಎಲ್ಲರೂ ತಾಂಬೂಲದಾನ, ಧಾನ್ಯದಾನ ಮಾಡಿ , ಆಯಾಯ ನಕ್ಷತ್ರ, ಗ್ರಹ, ಅಧಿಪತಿ ತಿಳಿದು ಮಾಡಿ..