ಕಳೆದ ಐದು ವರ್ಷದಿಂದ ಪುಟಾಣಿ ಮಕ್ಕಳಿಂದ ಸ್ವಚ್ಛ ವಾಗುತ್ತಿರುವ ಈ ಕೆರೆಗೆ ಈ ವರ್ಷವಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದರ ದುರಸ್ಥಿ ಮಾಡಿ ಮತ್ತು ಕೆರಯ ಹೂಳೆತ್ತಿ ಮರುಜೀವ ನೀಡಿ ಎನ್ನುವುದು ಸ್ಥಳೀಯರ ಅಭಿಪ್ರಾಯ.
ನೀರಿಗೆ ಬರ ಆಗಿರುವ ಈ ಭಾಗದಲ್ಲಿ 3-4 ವರ್ಷಗಳಿಂದ ತೀವ್ರ ನೀರಿಗೆ ಬರ ಪರಿಸ್ಥಿತಿ ಇದೆ ಈ ಭಾಗದಲ್ಲಿ ಹೇರಳ ಮಳೆ ಬಂದರೂ ನೀರನ್ನು ಹಿಡಿದಿಟ್ಟುಕೊಂಡು ಉಪಯೋಗ ಮಾಡಿಕೊಳ್ಳುವ ಯಾವ ವ್ಯವಸ್ಥೆಯೂ ಇಲ್ಲ. ಕೆರೆಗಳೆಲ್ಲಾ ಹೂಳಿನಿಂದ ತುಂಬಿಹೋಗಿದೆ. ತಾಲೂಕಿನಲ್ಲಿ ಅಘನಾಶಿನಿ ನದಿ ಹರಿದರೂ ಸಹ ಇಲ್ಲಿನ ಜನರಿಗೆ ಮಾತ್ರ ಈವರೆಗೂ ತಪ್ಪಿಲ್ಲ ನೀರಿನ ಬವಣೆ ಭಾಗಲ್ಲಿ ಇರುವ ಇಂತಹ 10 -15 ಕೆರೆಗಳು ಹೂಳಿನಿಂದ ಮುಚ್ಚಿವೆ ಇದಕ್ಕೆ ಮರು ಜೀವ ನೀಡುವ ಸ್ಥಳೀಯ ಪಂಚಾಯತ ಕಣ್ಣು ಮುಚ್ಚಿ ಕೂತಿದೆ. ತಾಲೂಕಾ ಪಂಚಾಯತ ಸದಸ್ಯರು,ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಕುಮಟಾ ಶಾಸಕರು ಎಲ್ಲರೂ ಒಂದಾಗಿ ಈ ಕೆರೆಗೆ ಮರು ಜೀವ ನೀಡಿದರೆ ಮಳೆಗಾಲದಲ್ಲಿ ಈಜುಗಾರ ರಿಗೆ ಅನುಕೂಲ ಮಾಡಿದಂತಾಗುತ್ತದೆ ಮತ್ತು ಮುಂದಿನ ಬೇಸಿಗೆಯಲ್ಲಿ ನೀರಿನ ಬರ ಕಡಿಮೆ ಮಾಡಲು ಉಪಯೋಗವಾಗಬಹುದು.
ಸ್ಥಳೀಯರ ಅಭಿಪ್ರಾಯ
ಪ್ರಶಾಂತ ನಾಯ್ಕ ( ಅಧ್ಯಕ್ಷರು ಯುವಕ ಸಂಘ ಗುಡೇಅಂಗಡಿ)
ಈ ಕೆರೆಯಲ್ಲಿ ಮಳೆಗಾಲದಲ್ಲಿ ನೂರಾರು ಮಕ್ಕಳು ಪಾಲಕರು ಇಜಲು ಬರುತ್ತಾರೆ ಕಟ್ಟೆಗಳೆಲ್ಲಾ ಹಳೆಯದಾಗಿದೆ ಮತ್ತು ಬೀಳುವ ಹಂತದಲ್ಲಿದೆ ಇದರ ಸುರಕ್ಷಿತ ದುರಸ್ಥಿ ಅಗತ್ಯ ಇನ್ನೂ ಹಾಗೇ ಬಿಟ್ಟರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳೇ ಜವಾಬ್ದಾರಿ ಹೊರ ಬೇಕಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂಜೀವ ನಾಯ್ಕ (ಸ್ಥಳೀಯರು)
ಈ ಕೆರೆಯಲ್ಲಿ ಮಣ್ಣು ತುಂಬಿ ನೀರಿನ ಒತ್ತಡವೇ ಇಲ್ಲದಂತಾಗಿ ಬತ್ತಿದೆ ಇದರ ಹೂಳೆತ್ತಿ ಈ ಕೆರೆಗೆ ಮರುಜೀವ ನೀಡಿ ಇದರಿಂದ ಮುಂದಿನ ವರ್ಷ ನೀರಿನ ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಂಬಂಧಿಸಿದವರು ಇನ್ನಾದರೂ ಅರಿತು ಇದರ ಸರಿಪಡಿಸುವಂತೆ ಗಮನಹರಿಸುವರೆಂದು ನಂಬಿರುವ
ಊರ ನಾಗರಿಕರು ಮತ್ತು ಬಾಡ ನ್ಯೂಸ್.
ಮಾಹಿತಿ :ಬಾಡ ನ್ಯೂಸ್.