ಭಟ್ಕಳ : ನೀರಿನ ಅಗತ್ಯವಿರುವ ಗ್ರಾಮವಾಗಿದ್ದ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಗುಡಿಹಿತ್ತಲ್ ಭಾಗಕ್ಕೆ ಇಂದು ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಗುಡಿಹಿತ್ತಲ್ ಭಾಗದ ಜನತೆಗಾಗಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ (ಅಂದಾಜು ಮೊತ್ತ 25 ಲಕ್ಷ ರೂಪಾಯಿ) ವೆಚ್ಚದಲ್ಲಿ ಬಾವಿ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಇಂದು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಗಾಮಗಾರಿಯನ್ನು ವೀಕ್ಷಿಸಿದ ಶಾಸಕರು ಕಾಮಗಾರಿಯ ಕುರಿತಾಗಿ ಗಮನ ವಹಿಸುವಂತೆ ತಿಳಿಸಿದರು.
ಜನತೆಯ ಜೊತೆಗೆ ಇದ್ದು ಅವರ ಅಗತ್ಯ ಪೂರೈಸುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.