ಕುಮಟಾ: ತಾಲೂಕಿನ ಅಳಕೋಡ ಪಂಚಾಯತ ವ್ಯಾಪ್ತಿಯ ಬಂಡಿವಾಳದ ತಲಗದ್ದೆಯ ಒಳಬೇಣದಲ್ಲಿ ಹೆಬ್ಬಾರಮನೆತನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕೆಂಪುಕಲ್ಲು ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೃಹತ್ ಸುರಂಗವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಇದು ತೀವ್ರ ಕುತೂಹಲ ಕೆರಳಿಸಿದೆ.

  ಕೆಂಪುಕಲ್ಲು ತೆಗೆಯುವ ಸ್ಥಳದಲ್ಲಿ ಜೆಸಿಬಿಯಿಂದ ಸ್ವಚ್ಛಗೊಳಿಸುವಾಗ ಭೂಮಿಯೊಳಗೆ ವಿಶಾಲವಾದ ಟೊಳ್ಳು ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಯಂತ್ರದಲ್ಲಿ ಆ ಸ್ಥಳವನ್ನು ಕೊರೆಯುವಾಗ ಸುರಂಗದ ಮೇಲ್ಬಾಗ ಕುಸಿದು ಚಿಕ್ಕ ರಂಧ್ರವಾಗಿದೆ. ಸ್ಥಳೀಯರು ಕುತೂಹಲದಿಂದ ಆ ರಂಧ್ರವನ್ನು ದೊಡ್ಡದು ಮಾಡಿ ಒಳಗಿಳಿದು ಪರಿಶೀಲಿಸಿದಾಗ ಅದು ಸುರಂಗ ಎಂಬುದನ್ನು ಅರಿತು ಅದರ ಬಗ್ಗೆ ಕುತೂಹಲಗೊಂಡರು ಎನ್ನಲಾಗಿದೆ.

RELATED ARTICLES  ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಬಿದ್ದು ಗಾವಡಿ ಸಾವು:

    ಇದು ಬೃಹತ್ ಗಾತ್ರದ ಸುರಂಗವಾಗಿದ್ದು, ಒಳಗೆ ಬೆಳಕು ಹಾಯಿಸಿದರೆ 250 ಮೀ.ಗೂ ಅಧಿಕ ದೂರ ಹೋಗುತ್ತದೆ. ಒಳಗಡೆ ಉಸಿರಾಡಲು ಕಷ್ಟವಾಗುವದರಿಂದ ಅಪಾಯದ ಭಯವಿದೆ. ಇನ್ನು ಕೆಲಗಡೆಗಳಲ್ಲಿ ಹೂಳುತುಂಬಿರುವುದರಿಂದ ನಡೆಯಲು ಸಾಧ್ಯವಿಲ್ಲವಾಗಿದೆ. ಆದ್ದರಿಂದ ಸುರಂಗ ಎಷ್ಟು ಉದ್ದವಿದೆ ಎಂದು ನೋಡಲು ಸಾಧ್ಯವಾಗಿಲ್ಲ. ಸುರಂಗದ ಗೋಡೆಗಳು ಸಪಾಟಾಗಿದ್ದು ಮಳೆಗಾಲದಲ್ಲಿ ಬೃಹತ್ ನೀರಿನ ಹರಿವಿನ ಲಕ್ಷಣ ಹೊಂದಿರಬಹುದು ಎಂದು ಸ್ಥಳೀಯರು ಉಹಿಸಿದ್ದಾರೆ.

RELATED ARTICLES  ಯಲ್ಲಾಪುರದಲ್ಲಿ ನಕಲಿ ವೈದ್ಯರ ಹಾವಳಿಗೆ ಬಲಿಯಾಯ್ತಾ ಬಡ ಜೀವ? ನಡೆದಿದ್ದಾದರೂ ಏನು?

ಇಲ್ಲಿ ಕಂಡು ಬಂದ ಸುರಂಗ ಮಾನವ ನಿರ್ಮಿತವೇ ಇರಬಹುದು ಎಂಬ ಅನುಮಾನವನ್ನು ಊರಿನ ಹಿರಿಯರು ವ್ಯಕ್ತಪಡಿಸಿದ್ದಾರೆ.