ಶಿರಸಿ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವಕನಿಂದ ಯುವತಿಯನ್ನು ಬೇರ್ಪಡಿಸಲು ಎರಡೂ ಕುಟುಂಬಗಳು ಬಡಿದಾಡಿಕೊಂಡು ಎರಡೂ ಕುಟುಂಬದ ಒಟ್ಟೂ ಆರು ಜನರು ಗಂಭೀರ ಗಾಯಗೊಂಡ ಘಟನೆ ಹಾಗೂ ಅಂತರ್ಜಾತಿ ವಿವಾಹವಾದ ಯುವಕನ ಕಡೆಯವರ ಮೇಲೆ ಯುವತಿ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಶಿರಸಿ ತಾಲೂಕಿನ ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.
ಆದರೆ ಇದನ್ನು ಹುಡುಗಿ ಕಡೆಯವರು ಒಪ್ಪದ ಕಾರಣ ಹುಡುಗಿ, ನಿನ್ನೆ ಬನವಾಸಿಯಲ್ಲಿರುವ ಹುಡುಗನ ಮನೆಗೆ ಬಂದು ವಾಸವಿದ್ದಳು. ಈ ಬಗ್ಗೆ ತಿಳಿದಾಗ, ಹುಡುಗಿಯ ಕಡೆಯವರು ನಿನ್ನೆ ರಾತ್ರಿವೇಳೆ ಏಕಾಏಕಿ ಕೃಷ್ಣ ಚನ್ನಯ್ಯನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಹುಡುಗನ ಅಣ್ಣನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ವೇಳೆ ಎರಡೂ ಕುಟುಂಬದವರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ ,ಒಟ್ಟು ಆರು ಜನರಿಗೆ ಗಂಭೀರ ಗಾಯವಾಗಿತ್ತು. ಈ ಬಗ್ಗೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.