ಚ್ಯಾಲೆಂಜಿಂಗ್ ಸ್ಟಾರ್ ದರ್ಶನ ಅವರ 50ನೇ ಚಿತ್ರವಾಗಿರುವ ಕುರುಕ್ಷೇತ್ರವು ಮುನಿರತ್ನ ಅವರ ನಿರ್ಮಾಣದಲ್ಲಿ ಮೂಡಿ ಬಂದಿದ್ದು ಇದೇ ವರ್ಷ ಆಗಸ್ಟ್ 09 ಕ್ಕೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ವತಃ ಮುನಿರತ್ನ ಅವರೆ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಅನೇಕ ದೊಡ್ಡ ಕಲಾವಿದರುಗಳು ಇದ್ದು ರೆಬಲ್ ಸ್ಟಾರ್ ಅಂಬರೀಶ್ ಅವರು ರವಿಚಂದ್ರನ್ ಅರ್ಜುನ್ ಸರ್ಜಾ ಮುಂತಾದ ಕಲಾವಿದರುಗಳು ನಟಿಸಿದ್ದಾರೆ ಈಗಾಗಲೇ ಬಹುತೇಕ ಕೆಲಸಗಳು ಮುಗಿದಿದ್ದು 3ಡಿ ಯಲ್ಲಿ ಈ ಚಿತ್ರ ಮೂಡಿ ಬರಲಿದೆ.
ನಿರ್ಮಾಪಕ ಮುನಿರತ್ನ ಅವರು ಚಿತ್ರದ ಪ್ರಮೋಷನ್ ಕೆಲಸದಲ್ಲಿದ್ದು ಈ ಚಿತ್ರದ ಕನ್ನಡ ಟೀವಿ ರೈಟ್ಸ್ ಸುಮಾರು 9 ಕೋಟಿಯಷ್ಟು ಖಾಸಗಿ ವಾಹಿನಿಗೆ ಮಾರಾಟವಾಗಿದೆಯಂತೆ ಮತ್ತು ಹಿಂದಿ ಡಬ್ಬಿಂಗ್ ರೈಟ್ಸ್ 9.5 ಕೋಟಿಗೆ ಮಾರಾಟವಾಗಿದೆಯಂತೆ ಮತ್ತು ಆಡಿಯೋ ರೈಟ್ಸ್ 1.5 ಕೋಟಿಗೆ ಮಾರಾಟವಾಗಿದೆ. ಈಗಾಗಲೇ ಇಷ್ಟೆಲ್ಲ ಸಂಪಾದನೆ ಮಾಡಿರುವ ಚಿತ್ರವು ಮುಂದಿನ ದಿನಗಳಲ್ಲಿ ರಿಲೀಸ್ ಆದ ನಂತರ ಬಾಕ್ಸ್ ಆಫೀಸ್ ಪೀಸ್ ಪೀಸ್ ಮಾಡುವಲ್ಲಿ ಸಂಶಯವೇ ಇಲ್ಲ ಎನ್ನಬಹುದು.
ಚಿತ್ರವು 3ಡಿ ಯಲ್ಲಿ ತೆರೆಕಾಣುವುದರಿಂದ ಚಿತ್ರದ ಶೂಟಿಂಗ್ ಮುಗಿದ್ದರು ಅದರ ಕೆಲಸಗಳು ಇನ್ನು ಇವೆ ಎನ್ನುತ್ತಾರೆ ಬಹಳ ಅಚ್ಟುಕಟ್ಟಾಗಿ ಬಾಹುಬಲಿಗೆ ಮಾಡಿದ ಗ್ರಾಫಿಕ್ ತಂತ್ರಙ್ಞರು ಈ ಚಿತ್ರಕ್ಕು ಕೆಲಸ ಮಾಡುತಿದ್ದಾರೆ. ಮುನಿರತ್ನ ಅವರು ಈ ಚಿತ್ರಕ್ಕೆ ಬಹಳ ಶ್ರಮ ಪಟ್ಟಿದ್ದು ಚಿತ್ರವನ್ನು ನೀದಾನವಾಗಿ ಕೂತು ನೋಡಿ ನಂತರ ಆಗಸ್ಟ್ 09 ರಂದು ಬಿಡುಗಡೆ ಮಾಡುತಿದ್ದೇವೆ ಎಂದರು. ಕುರುಕ್ಷೇತ್ರ ಚಿತ್ರವು ಸುಮಾರು 05 ಭಾಷೆಯಲ್ಲಿ ತೆರೆಕಾಣುತಿದ್ದು ಭಾರತದ ಸಿನಿಮಾ ರಂಗದಲ್ಲಿಯೇ ಕುರುಕ್ಷೇತ್ರ ಸಿನಿಮಾ ಒಂದು ಇತಿಹಾಸವನ್ನೆ ಮಾಡಲಿದೆ ಎನ್ನುತ್ತಿದ್ದಾರೆ ಗಾಂಧಿ ನಗರದ ಮಂದಿ.
ಜುಲೈನ ಮೊದಲ ವಾರದಲ್ಲಿ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಮಾಡುವುದು ಎಂದು ಮುನಿರತ್ನ ಅವರು ತಿಳಿಸಿದರು ಅಷ್ಟೆ ಅಲ್ಲದೆ ಆ ದಿನ ಎಲ್ಲ ಕಲಾವಿದರುಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದು. ಈ ಸಂದರ್ಭದಲ್ಲಿ ಅಂಬರೀಶ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಅನಾರೋಗ್ಯ ವಿದ್ದರು ಸಹ ಕೆಲಸಕ್ಕೆ ತೊಂದರೆಯಾಗ ಬಾರದು ಎಂದು ಬೇಗನೆ ಡಬ್ಬಿಂಗ್ ಕೆಲಸ ಮುಗಿಸಿಕೊಟ್ಟರು ಅಂಬರೀಶ್ ಅವರು ಸದಾ ನಮ್ಮೊಂದಿಗೆ ಇರುತ್ತಾರೆ ನಮ್ಮೆಲ್ಲರು ಮನದಲ್ಲಿ ಇದ್ದಾರೆ ಎಂದು ಹೇಳಿಕೊಂಡರು.