ಶಿರಸಿ: ಇಂದು ಬೆಳಗಿನಜಾವ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಲೂಕಿನ ಕರಡಿಕೈ ನಿವಾಸಿ ಸಾವಿತ್ರಿ ಹೆಗಡೆ ಅವರಿಗೆ ಸೇರಿದ 2 ಎಕರೆ ಅಡಕೆ ತೋಟ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು ಬೆಂಕಿಗೆ 1 ಸಾವಿರಕ್ಕೂ ಅಧಿಕ ಅಡಕೆ ಮರ, ನೂರಾರು ಬಾಳೆ ಮರಗಳು ಬೆಂಕಿಗಾಹುತಿಯಾಗಿದ್ದು ಸುಮಾರು 20 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ.

RELATED ARTICLES  ಇಂದು ಉತ್ತರ ಕನ್ನಡದಲ್ಲಿ 109 ಜನರಿಗೆ ಕರೊನಾ ದೃಢ : 180 ಮಂದಿ ಗುಣಮುಖ

ಬೆಳಗಿನ ಜಾವ ಆಕಸ್ಮಿಕವಾಗಿ ಬಿದ್ದ ಬೆಂಕಿ ಅಪಾರ ಹಾನಿ ಮಾಡಿದ್ದು ನಂತರ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಯಾವ ರೀತಿ ಬೆಂಕಿ ತಗಲಿದೆ ಎಂಬುದರ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದ್ದು ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES  ಸ್ಥಳೀಯ ಸಂಸ್ಥೆ ಚುನಾವಣಾ ಮತ ಎಣಿಕೆ ಪೂರ್ಣ: ಯಾವ ಯಾವ ತಾಲೂಕಿನಲ್ಲಿ ಯಾವ ಪಕ್ಷ ಇಲ್ಲಿದೆ ವರದಿ!